ಚನ್ನರಾಯಪಟ್ಟಣ: ಪಿಡಿಒಗಳು ಗ್ರಾಪಂನಲ್ಲಿ ಬೆಳಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆವರೆಗೆ ಕಚೇರಿಯಲ್ಲಿ ಜನರಿಗೆ ಲಭ್ಯವಾಗಬೇಕು ಎಂದು ಶಾಸಕ ಸಿ.ಎನ್. ಬಾಲಕೃಷ್ಣ ತಾಕೀತ್ತು ಮಾಡಿದರು. ಪಟ್ಟಣದ ಪುರಸಭೆ ಸಭಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕ್ಷೇತ್ರ ದಲ್ಲಿ ಜನ ನಿರಂತರವಾಗಿ ಮೂರು ಸಲ ಆಯ್ಕೆ ಮಾಡಿದ್ದಾರೆ. ಗ್ರಾಮೀಣ ಭಾಗದ ಜನರಿಗೆ ತೊಂದರೆ ಆಗದಂತೆ ನೋಡಿಕೊಳ್ಳುವುದು ನನ್ನ ಜವಾಬ್ದಾರಿ. ಅಧಿಕಾರಿಗಳು ಸಭೆ ಸಬೂಬು ಹೇಳಿ ಪಿಡಿಒಗಳು ಕಚೇರಿಗೆ ಸಕಾಲಕ್ಕೆ ತೆರಳುತ್ತಿಲ್ಲ. ಈ ಬಗ್ಗೆ ಸಾರ್ವಜನಿಕರು ದೂರು ನೀಡಿದ್ದಾರೆ. ಮುಂದೆ ಇದು ಮರುಕಳಿಸಬಾರದು ಎಂದರು.
ಕಟ್ಟಡಕ್ಕೆ 12 ಗುಂಟೆ ಜಮೀನು ಮಂಜೂರು: 15ನೇ ಹಣಕಾಸು ಯೋಜನೆಯಡಿ ಗ್ರಾಮ ಪಂಚಾಯ್ತಿ ವ್ಯಾಪ್ತಿ ಗೆ ಶಾಲೆಗಳು ಹಾಗೂ ಅಂಗನವಾಡಿ ಕಟ್ಟಡಗಳನ್ನು ದುರಸ್ತಿ ಮಾಡಬೇಕು. ಪಟ್ಟಣದಲ್ಲಿರುವ ಮಹಿಳಾ ಹಾಸ್ಟೆಲ್‌ಗಳ ಬಳಿ ಹೈಮಾಸ್ಟ್ ದೀಪ ಅಳವಡಿಸಲಾಗುವುದು. ಅದೇ ರೀತಿ ಹಿರೀಸಾವೆ ಬಸ್ ನಿಲ್ದಾಣದ ಬಳಿ ವಿದ್ಯುತ್ ದೀಪ ಅಳವಡಿಸಲಾಗುವುದು ಎಂದರು.
ಭೂ ಮಂಜೂರು ಪ್ರಕ್ರಿಯೆ ಶೀಘ್ರ: ಚನ್ನರಾಯಪಟ್ಟಣದ ನಗರ ವ್ಯಾಪ್ತಿ ಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಟ್ಟಡ ನಿರ್ಮಾಣಕ್ಕೆ 12 ಗುಂಟೆ ಜಮೀನ ನ್ನು ಪಟ್ಟಣದ ಹೊರವಲಯದಲ್ಲಿ ಕಾಯ್ದಿರಿಸಲಾಗಿದೆ. ಇನ್ನೊಂದು ತಿಂಗಳ ಅವಧಿಯಲ್ಲಿ ಭೂ ಮಂಜೂರು ಮಾಡಿ ಅಧಿಕೃತವಾಗಿ ಇಲಾಖೆಗೆ ನೋಂದಣಿ ಪ್ರಕ್ರಿಯೆ ಮಾಡಲಾಗುವುದು. ನೂತನ ಸರ್ಕಾರ ರಚನೆಯಾದ ಬಳಿಕ ಕಾಮಗಾರಿಗೆ ಅನುದಾನ ತಂದು ಕಟ್ಟಡ ನಿರ್ಮಾ ಣಕ್ಕೆ ಚಾಲನೆ ನೀಡಲಾಗುವುದು ಎಂದು ಶಾಸಕ ಬಾಲ ಕೃಷ್ಣ ಭರವಸೆ ನೀಡಿದರು.
Related Articles
ಗುಣಮಟ್ಟದ ಕಾಮಗಾರಿ ನಡೆಸುವಂತೆ ಎಚ್ಚರಿಕೆ: ತಾಲೂಕಿನಲ್ಲಿ 53 ಕೋಟಿ ವೆಚ್ಚದಲ್ಲಿ ಎನ್‌ಆರ್ ಇಜಿ ಮೂಲಕ ಗ್ರಾಪಂ ಹಲವು ಕೆಲಸ ಕ್ರೀಯಾ ಯೋಜನೆ ಆಗಿದೆ. ಕಾಮಗಾರಿ ಗುಣ ಮಟ್ಟದಲ್ಲಿ ಇರಬೇಕು. ಕಾಮಗಾರಿ ಕಳಪೆಯಾದರೆ ಎನ್‌ಆರ್ ಇಜಿ ಎಂಜಿನಿಯರ್ ಹಾಗೂ ಅಧಿಕಾರಿಗಳ ತಲೆ ತಂಡ ಮಾಡಬೇಕಾಗುತ್ತದೆ. ಸರ್ಕಾರ ನಿಯಮಾನುಸಾರ ಕಾಮಗಾರಿ ನಡೆಸಬೇಕು ಎಂದು ಎಚ್ಚರಿಕೆ ನೀಡಿದರು.
ಐದು ಕೋಟಿ ವಿದ್ಯುತ್ ಬಿಲ್ ಬಾಕಿ: 2018ರ ಮಹಾ ಮಸ್ತಕಾಭಿಷೇಕ ಮಹೋತ್ಸದಲ್ಲಿ ಶ್ರವಣಬೆಳಗೊಳ ವಿದ್ಯುತ್ ಬಾಕಿ ಹಾಗೂ ಅದಕ್ಕೆ ಬಡ್ಡಿ ಸೇರಿ ಐದು ಕೋಟಿ ಆಗಿದ್ದು ಅದನ್ನು ನೀರಾವರಿ ಇಲಾಖೆ ಮೂಲಕ ಹಣ ಸೆಸ್ಕ್ಗೆ ಬರಿಸಲಾಗುತ್ತಿದೆ. ಗ್ರಾಪಂ ಕೇವಲ 10 ಲಕ್ಷ ರೂ.ಮಾತ್ರ ಬಿಲ್ ಕಟ್ಟಲು ಅವಕಾಶವವಿತ್ತು. ಉಳಿಕೆ ಹಣ ನೀಡಿರಲಿಲ್ಲ. ಇದನ್ನು ಮನಗಂಡು ಬಾಕಿ ಪಾವತಿಗೆ ಮುಂದಾಗಿದ್ದೇನೆ ಎಂದು ಹೇಳಿದರು.
ವೃದ್ಧರ ಕಲ್ಯಾಣಕ್ಕೆ ಒತ್ತು: ತಾಲೂಕಿನಲ್ಲಿ 65 ವರ್ಷ ತುಂಬಿದ ವಯೋ ವೃದ್ಧರಿಗೆ 1200 ಮಾಸಿಕ ವೇತನ ಬರುತ್ತಿಲ್ಲ. ಅಂತಹವನ್ನು ಪತ್ತೆ ಹಚ್ಚಲು ಪ್ರತಿ ಮನೆ ಭೇಟಿ ಮಾಡಲು ಗ್ರಾಮ ಲೆಕ್ಕಾಧಿಕಾರಿಗಳು ಮುಂದಾಗಬೇಕು. ಕಂದಾಯ ಇಲಾಖೆ ಅಧಿಕಾರಿಗಳು ಒಂದು ತಿಂಗಳಲ್ಲಿ 65 ವರ್ಷ ತುಂಬಿದ ಎಲ್ಲಾ ವಯೋ ವೃದ್ಧರಿಗೆ ವೇತನ 1200 ಕೊಡಿಸಲು ಮುಂದಾಗಬೇಕು. ಅಗತ್ಯ ದಾಖಲಾತಿ ಸಂಗ್ರಹಿಸುವ ಕೆಲಸ ಮೊದಲು ಮಾಡಿಸಿ ಎಂದು ತಹಶೀಲ್ದಾರ್ ಗೊಂವಿಂದರಾಜ್‌ಗೆ ಸೂಚಿಸಿದರು.
ಪ್ರಗತಿಯಲ್ಲಿ ರುವ ಕಾಮಗಾರಿ: ಜಲಜೀವನ್ ಮಿಷನ್ ಯೋಜನೆಯಲ್ಲಿ 380 ಓವರ್ ಹೆಡ್ ಟ್ಯಾಂಕ್ ನಿರ್ಮಿಸಬೇಕಿದೆ. ಈಗಾಗಲೇ 55 ಓವರ್ ಹೆಡ್ ಟ್ಯಾಂಕ್ ಗಳನ್ನು ನಿರ್ಮಿಸುವ ಕಾಮಗಾರಿ ಪ್ರಗತಿಯಲ್ಲಿದೆ. ಮೂರು ತಿಂಗಳಲ್ಲಿ ಎಲ್ಲ ಓವರ್ ಹೆಡ್ ಟ್ಯಾಂಕ್‌ಗಳ ನಿರ್ಮಾಣ ಕಾಮಗಾರಿ ಪೂರ್ಣ ಗೊಳ್ಳಬೇಕು. ಈ ಬಗ್ಗೆ ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ ಅಧಿಕಾರಿಗಳು ಗಮನ ಹರಿಸಬೇಕು ಎಂದು ತಾಕಿತ್ತು ಮಾಡಿದರು. ತಹಶೀಲ್ದಾರ್ ಗೋಂದರಾಜು, ತಾಪಂ ಇಒ ಸುನೀಲ್ ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ದೀಪಾ, ಪುರಸಭೆ ಮುಖ್ಯಾಧಿಕಾರಿ ಹೇಮಂತ್, ಸೆಸ್ಕ್ ಕಾರ್ಯಪಾಲಕ ಎಂಜಿನಿಯರ್ ಅಂಬಿಕಾ, ಆಹಾರ ನಿರೀಕ್ಷಕ ವಾಸು, ಪೊಲೀಸ್ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಪಿಡಿಒಗಳ ಮೇಲೆ ನಿಗಾ ಇಡಿ: ಪ್ರತಿ ಗ್ರಾಪಂಗೆ ಈ ಹಾಜರಾತಿ ಕಡ್ಡಾಯ ಮಾಡಬೇಕು. ತಾಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಮಧ್ಯಾಹ್ನದ ಮೇಲೆ ಸಭೆ ಮಾಡುವಂತೆ ಆದೇಶ ಹೊರಸಲಾಗುವುದು. ಮುಂದೆ ಅಧಿಕಾರಿಗಳ ಸಭೆ ಹಾಗೂ ಇತರ ಕಚೇರಿ ಕೆಲಸ ಎಂದು ಹೇಳುವುದು ಸಹಿಸು ವುದಿಲ್ಲ. ಜನರಿಂದ ದೂರುಗಳು ಬರದಂತೆ ನೋಡಿಕೊಳ್ಳುವುದು ತಮ್ಮ ಕರ್ತವ್ಯ, ತಾಪಂ ಇಒ ಸುನೀಲ್ ಇಂದಿನಿಂದ ಕಾರ್ಯಪ್ರವೃತ್ತರಾಗಿ ಪಿಡಿಒಗಳ ಮೇಲೆ ನಿಗಾ ಇಡಬೆ