ಮಂಗಳೂರು: ಈ ಬಾರಿಯ ಎಂಪಿಎಲ್ ಕ್ರಿಕೆಟ್ ಆಟಗಾರರ ಹರಾಜು ಪ್ರಕ್ರಿಯೆ ನಗರದ ಪೋರಂ ಫಿಝಾ ಮಾಲ್‌ನಲ್ಲಿ ನಡೆಯಿತು. ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಮಂಗಳೂರು ವಲಯದ ಸಂಚಾಲಕ ಮನೋಹರ್ ಅಮೀನ್ ಸುತ್ತಿಗೆಯನ್ನು ಕುಟ್ಟುವ ಮೂಲಕ ಉದ್ಘಾಟಿಸಿದರು.
ಇದೇ ವೇಳೆ ಮಾತನಾಡಿದ ಅವರು, ಈ ಬಾರಿ ಬಹಳಷ್ಟು ಮಂದಿ ಪ್ರಥಮ ದರ್ಜೆಯ ಆಟಗಾರರು ಎಂಪಿಎಲ್ ಕೂಟದಲ್ಲಿ ಭಾಗವಹಿಸುವದರಿಂದ ಇಲ್ಲಿನ ಆಟಗಾರರಿಗೆ ಅವರಿಂದ ಅನುಭವವನ್ನು ಪಡೆದು ಮೇಲ್ಮಟ್ಟದ ಕ್ರಿಕೆಟಿನತ್ತ ಸಾಗಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಕ್ರಿಕೆಟಿಗ ಧಿಕಾಂಕ್ಷು ನೇಗಿ ಮಾತ್ರ ಗರಿಷ್ಠ ಬೆಲೆಯಾದ 50,000 ರೂ.ಗೆ ಮಾರಾಟವಾದರು. ಐಪಿಲ್ ಆಟಗಾರ ಜೆ. ಸುಚಿತ್ 35,000 ರೂ. ಮೊತ್ತಕ್ಕೆ ಮಂಗಳೂರು ಯುನೈಟೆಡ್ ತಂಡ ಸೇರಿಕೊಂಡರು. ಪವನ್ ಕೆ.ಬಿ. 48,000 ರೂ. ಮೊತ್ತಕ್ಕೆ ಮ್ಯಾಸ್ಟ್ರೋ ಟೈಟಾನ್ ತಂಡ ಸೇರಿದರು.
ಕುಶಾಲ್ ಕುಮಾರ್, ತುಷಾರ್, ದೀಪ್ತಿ, ಚಿರಾಗ್, ಮುಬಿನ್, ಯು.ಟಿ. ಇಫ್ತಿಕಾರ್, ಯಶ್‌ಪಾಲ್ ಸುವರ್ಣ, ಮಾರ್ಷಲ್ ನೊರೋನ್ನ ಮೊದಲಾದವರು ಉಪಸ್ಥಿತರಿದ್ದರು.
ಪಂದ್ಯಾವಳಿಯ ರೂವಾರಿ ಮಹಮ್ಮದ್ ಸಿರಾಜುದ್ದೀನ್ ಸ್ವಾಗತಿಸಿದರು. ಇಮಿ¤ಯಾಝ್ ಹರಾಜನ್ನು ನಡೆಸಿಕೊಟ್ಟರು. ಕೋಟ ಶಿವನಾರಾಯಣ ಐತಾಳ್ ನಿರೂಪಿಸಿದರು. ಸಫಾªರ್ ಅಲಿ ಶಿರ್ವ, ಬಾಲಕೃಷ್ಣ ಪರ್ಕಳ, ಶಶಿಧರ್ ಕೋಡಿಕಲ್ ತೀಪುìಗಾರರಾಗಿದ್ದರು.
ಮಾ. 9ರಿಂದ ಎ. 1ರ ವರಗೆ 13 ದಿನಗಳ ಕಾಲ ಪಣಂಬೂರಿನ ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಎಂಪಿಎಲ್ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ.