Advertisement

ಎಂಎಂಎಲ್‌ ಹಣ ದುರ್ಬಳಕೆಯಾಗಿಲ್ಲ

11:38 AM Oct 15, 2017 | |

ಬೆಂಗಳೂರು: ರೈತರ ಸಾಲಮನ್ನಾ ಮಾಡಿರುವ ಹಣದ ಬಾಬ್ತು ತೀರಿಸಲು ಅಪೆಕ್ಸ್‌ ಬ್ಯಾಂಕ್‌ನಲ್ಲಿ ಎಂಎಂಎಲ್‌ ಹಣ ಠೇವಣಿ ಇಡುವಂತೆ ಒತ್ತಡ ಹೇರಿದ್ದಾರೆಂಬ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಆರೋಪ ಸತ್ಯಕ್ಕೆ ದೂರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. 

Advertisement

ಹಣ ಠೇವಣಿಗೆ ಸರ್ಕಾರ ಯಾವುದೇ ರೀತಿಯ ಒತ್ತಡ ಹಾಕಿಲ್ಲ. ಆದರೆ ಸಾಲ ಮನ್ನಾ ಯೋಜನೆಗೆ ಬಜೆಟ್‌ನಲ್ಲಿ ಹಣ ಮೀಸಲಿಟ್ಟಿಲ್ಲ. ರೈತರಿಗೆ ಸಾಲ ಮನ್ನಾ ಲಾಭ ಶೀಘ್ರವಾಗಿ ತಲುಪಿಸಲು ಸಂಪನ್ಮೂಲದ ಅಗ್ಯವಿತ್ತು. ಹೀಗಾಗಿ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿಗೆ ಹಣ ಅಪೆಕ್ಸ್‌ ಬ್ಯಾಂಕಿನಲ್ಲಿ ಠೇವಣಿ ಇಡುವಂತೆ ಸೂಚಿಸಲಾಗಿತ್ತು. ಅದರಂತೆ ಮೈಸೂರು ಮಿನರಲ್ಸ್‌ ಆಡಳಿತ ಮಂಡಳಿ ಅಪೆಕ್ಸ್‌ ಬ್ಯಾಂಕ್‌ನಲ್ಲಿ 1,400 ಕೋಟಿ ರೂ. ಠೇವಣಿ ಇಡಲು ನಿರ್ಧರಿಸಿದ್ದು, ಆ ಹಣಕ್ಕೆ ಅಪೆಕ್ಸ್‌ ಬ್ಯಾಂಕ್‌ ಸೂಕ್ತ ಬಡ್ಡಿ ನೀಡಲಿದೆ. 

ಎಂಎಂಎಲ್‌ ತನ್ನ ಹಣ ವಾಪಸ್‌ ಪಡೆಯಲು ಬಯಸಿದರೆ ಮುಂದಿನ ಆರ್ಥಿಕ ವರ್ಷದಲ್ಲಿ ಅಪೆಕ್ಸ್‌ ಬ್ಯಾಂಕ್‌ ವಾಪಸ್‌ ನೀಡಲಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. ರಾಜ್ಯ ಸರ್ಕಾರದ ಅಂಗ ಸಂಸ್ಥೆಯಾದ ಎಂಎಂಎಲ್‌ನಲ್ಲಿರುವ 1,400 ಕೋಟಿ ರೂ. ಅನ್ನು ಅಪೆಕ್ಸ್‌ ಬ್ಯಾಂಕ್‌ನಲ್ಲಿ ಠೇವಣಿ ಇಡುವುದರಿಂದ ಸಹಕಾರಿ ಬ್ಯಾಂಕ್‌ಗಳಿಗೆ ನೀಡಲು ಅನುಕೂಲವಾಗುತ್ತದೆ ಎಂದು ಹೇಳಿದ್ದಾರೆ.

ಸಾಲಮನ್ನಾದಿಂದ ಉಂಟಾದ ಆರ್ಥಿಕ ಹೊರೆ ನಿಭಾಯಿಸಲು ರಾಜ್ಯ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಸಹಕಾರ ಬ್ಯಾಂಕ್‌ಗಳಿಗೆ ಹಣ ಪಾವತಿಸಲು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುತ್ತಿದೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next