Advertisement

ಬಿಜೆಪಿ ಅಭ್ಯರ್ಥಿ ಗೆಲುವು ಶತಸಿದ್ಧ    

05:07 PM Nov 28, 2021 | Team Udayavani |

ಮಧುಗಿರಿ: ಜಿಲ್ಲೆಯ ಪರಿಷತ್‌ ಚುನಾ ವಣೆಯಲ್ಲಿ ಬಿಜೆಪಿಯ ಲೊಕೇಶ್‌ಗೌಡ ಗೆಲುವು ಶತಸಿದ್ಧ ಎಂದು ವಿಧಾನ ಪರಿಷತ್‌ ಸದಸ್ಯ ಚಿದಾನಂದ ಎಂ.ಗೌಡ ವಿಶ್ವಾಸ ವ್ಯಕ್ತಪಡಿಸಿದರು.

Advertisement

ಪಟ್ಟಣದ ಕನ್ನಡ ಭವನದಲ್ಲಿ ಬಿಜೆಪಿ ಪಕ್ಷದ ವತಿಯಿಂದ ನಡೆದ ಪರಿಷತ್‌ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 2 ಮಂತ್ರಿ, 5 ಶಾಸಕರು, 2 ಪರಿಷತ್‌ ಸದಸ್ಯರು, 2 ಲೋಕಸಭೆ ಸದಸ್ಯ ರಿದ್ದು 2 ಸಾವಿರಕ್ಕೂ ಹೆಚ್ಚು ಮತದಾರರು ಹಾಗೂ ಲಕ್ಷಾಂತರ ಕಾರ್ಯಕರ್ತರ ಬೆಂಬಲ ದೊಂದಿಗೆ ಲೊಕೇಶ್‌ಗೌಡ ಗೆಲುವು ಸಾಧಿಸಲಿದ್ದಾರೆ ಎಂದರು.

ಕಾಂಗ್ರೆಸ್‌-ಜೆಡಿಎಸ್‌ನಿಂದ ಅಪಪ್ರಚಾರ: ಕೇಂದ್ರ, ರಾಜ್ಯ ಸರ್ಕಾರದ ಅಭಿವೃದ್ಧಿ ಕಾರ್ಯ ಗಳಿಗೆ ಜನತೆ ಬೆಂಬಲ ವ್ಯಕ್ತಪಡಿಸಿದ್ದು, ಲೊಕೇಶ್‌ಗೌಡರಿಗೂ ಆಶೀರ್ವಾದ ಮಾಡಲಿ ದ್ದಾರೆ. ನಮ್ಮ ಅಭ್ಯರ್ಥಿಯನ್ನು ಪಕ್ಷ ಆಯ್ಕೆ ಮಾಡಿದ್ದು, ಮಾಧುಸ್ವಾಮಿ ಗೆಲುವಿನ ಜವಾಬ್ದಾರಿ ಹೊತ್ತಿದ್ದಾರೆ. ನಮ್ಮಲ್ಲಿನ ಯಾವುದೇ ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಲೊಕೇಶ್‌ಗೌಡರನ್ನು ಗೆಲ್ಲಿಸಲಾಗುವುದು. ಅಭ್ಯರ್ಥಿ ಸಚಿವ ಮಾಧುಸ್ವಾಮಿ ಆಯ್ಕೆ ಯಾಗಿದ್ದು, ಸಂಸದರ ಬೆಂಬಲ ನೀಡುತ್ತಿಲ್ಲ ವಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಚಿದಾನಂದ ಗೌಡ ಕಾಂಗ್ರೆಸ್‌-ಜೆಡಿಎಸ್‌ ಇಂತಹ ಅಪ ಪ್ರಚಾರ ಮಾಡುತ್ತಿದ್ದು, ಅದು ಸತ್ತಕ್ಕೆ ದೂರ ವಾದ ಮಾತು ಎಂದರು.

ಗೆಲ್ಲುವ ವಿಶ್ವಾಸವಿದೆ: ಬಿಜೆಪಿ ಅಭ್ಯರ್ಥಿ ಲೊಕೇಶ್‌ಗೌಡ ಮಾತನಾಡಿ, ನಾನು ಕೊರಟ ಗೆರೆಯವನಾಗಿದ್ದು, ಬೆಂಗಳೂರಲ್ಲಿ ನೆಲೆಸಿದ್ದೆ. ಪಕ್ಷದ ಸಾಮಾನ್ಯ ಕಾರ್ಯಕರ್ತನಾದ ನನ್ನನ್ನು ಈಗ ಪಕ್ಷ ಇಲ್ಲಿ ಅಭ್ಯರ್ಥಿಯಾಗಿಸಿದೆ. ಜಿಲ್ಲೆಯ ಪಕ್ಷದ ಕಾರ್ಯಕರ್ತರು, ಮುಖಂಡರು ಬೆನ್ನಿಗಿದ್ದು ಗೆಲ್ಲುವ ವಿಶ್ವಾಸವಿದೆ. ಕಷ್ಟದಿಂದ ಮೇಲೆ ಬಂದಿದ್ದು, ಬಡವರ ಕಷ್ಟ ತಿಳಿದಿದೆ. ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳ ಸಂಖ್ಯೆ ಕಡಿಮೆಯಿದ್ದರೂ, ಪಕ್ಷಾತೀತವಾಗಿ ಎಲ್ಲರನ್ನು ವಿಶ್ವಾಸಕ್ಕೆ ಪಡೆದು ಚುನಾವಣೆ ಎದುರಿಸು ತ್ತೇವೆ. ಗೆಲುವು ಸಿಕ್ಕ ನಂತರ ತುಮಕೂರಿನಲ್ಲಿ ನೆಲೆಸಿ ಪಕ್ಷವನ್ನು ಸದೃಢವಾಗಿ ಕಟ್ಟಲು ನೆರವಾಗುತ್ತೇನೆ ಎಂದರು.

ತೆಂಗು-ನಾರು ಅಭಿವೃದ್ಧಿ ಮಂಡಲಿ ಅಧ್ಯಕ್ಷ ಕೆ.ಎಂ.ಮಂಜುನಾಥ್‌ ಮಾತನಾಡಿದರು, ರಾಜ್ಯ ಮುಖಂಡ ಪ್ರಭಾಕರ್‌, ಜಿಲ್ಲಾ ರೈತ ಮೋರ್ಚ ಉಪಾಧ್ಯಕ್ಷ ನಾಗರಾಜಪ್ಪ, ಯುವ ಮೋರ್ಚ ಪ್ರಧಾನ ಕಾರ್ಯದರ್ಶಿ ಶಿವಕುಮಾರಸ್ವಾಮಿ, ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ರಮೇಶ್‌, ಮಹಿಳಾ ಅಧ್ಯಕ್ಷೆ ರತ್ನಾ, ಯುವ ಮೋರ್ಚಾ ಅಧ್ಯಕ್ಷ ಕಾರ್ತಿಕ್‌ ಆರಾಧ್ಯ, ಕಾರ್ಯದರ್ಶಿ ತೇಜಸ್‌ಗೌಡ, ಮುಖಂಡ ಲಕ್ಷ್ಮೀಪತಿ, ನಾಗೇಂದ್ರ, ಕಲ್ಪನಾ, ಲತಾ ಪ್ರದೀಪ್‌ ಹಾಗೂ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next