ಚಿಕ್ಕಮಗಳೂರು: ಜಿಲ್ಲಾಡಳಿತದಿಂದ, ಜಿಲ್ಲಾ ಉಸ್ತುವಾರಿ ಸಚಿವರಿಂದ ತನ್ನನ್ನು ಕಡೆಗಣಿಸಲಾಗುತ್ತಿದೆ. ಯಾವುದೇ ಸಭೆಗೆ ತನ್ನನ್ನು ಕರೆಯುತ್ತಿಲ್ಲ ಎಂದು ಬೇಸರಗೊಂಡು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಅವರು ಜಿಲ್ಲಾಧಿಕಾರಿ ಕಚೇರಿ ಬಾಗಿಲಲ್ಲಿ ಕುಳಿತು ಏಕಾಂಗಿ ಧರಣಿ ನಡೆಸುತ್ತಿದ್ದಾರೆ.
“39 ತಾಲೂಕು, ಆರು ಜಿಲ್ಲೆಯಲ್ಲಿ ನನ್ನ ಪ್ರೋಟೋಕಾಲ್ ಇದೆ. ಆದರೆ ಇಲ್ಲಿನ ಸಭೆಗಳಿಗೆ ನನ್ನನ್ನು ಕರೆಯದೇ ಬೇಕಾಬಿಟ್ಟಿ ಸಭೆ ನಡೆಸುತ್ತಾರೆ. ಸಭೆಗಳು ಬಿಜೆಪಿ ಜನಪ್ರತಿನಿಧಿಗಳಷ್ಟೇ ಸೀಮಿತವೇ” ಎಂದು ಭೋಜೇಗೌಡ ಪ್ರಶ್ನಿಸಿದರು.
ಇದನ್ನೂ ಓದಿ:ನಕಲಿ ಲಸಿಕೆ ಕೇಂದ್ರದಲ್ಲಿ ಕೋವಿಡ್ ಲಸಿಕೆ ಪಡೆದ ನಟಿ, ಸಂಸದೆ ಮಿಮಿ ಚಕ್ರವರ್ತಿ! ಓರ್ವನ ಬಂಧನ
ಜಿಲ್ಲಾ ಉಸ್ತುವಾರಿ ಮಂತ್ರಿ ಎಂಟು ಬಾರಿ ಶಾಸಕರಾಗಿದ್ದಾರೆ. ಅವರ ಮೇಲೆ ಗೌರವವಿದೆ. ಆದರೆ ಅವರ ಸಾಧನೆ ಏನು? ಬಂದ ಪುಟ್ಟ ಹೋದ ಪುಟ್ಟನ ಕಥೆ ಅಷ್ಟೆ! ನೀವು ಭೋಜೇಗೌಡರಿಗೆ ಬೆಲೆ ಕೊಡಬೇಡಿ, ಹುದ್ದೆಗೆ ಕೊಡಿ. ಸಾಯುವವರೆಗೂ ಅಧಿಕಾರದಲ್ಲಿ ಇರುತ್ತೀರಾ, ನಾನು ನೋಡ್ತೇನೆ” ಎಂದು ಸಚಿವ ಅಂಗಾರ ವಿರುದ್ಧ ಕಿಡಿಕಾರಿದರು.
ನಿಮ್ಮ ಹುಳುಕನ್ನು ನಾನು ಬಿಚ್ಚಿಡುತ್ತೇನೆ ಎಂದು ನನ್ನನ್ನು ಸಭೆಗೆ ಕರೆಯುವುದಿಲ್ಲ. ರಾಜಕೀಯವನ್ನು ನಿಮ್ಮ ಪಕ್ಷದ ಕಚೇರಿಯಲ್ಲಿ ಮಾಡಿ. ಶಾಸಕರು, ಜಿಲ್ಲಾ ಮಂತ್ರಿಗಳು ಸರಿ ಇಲ್ಲ. ಹಲವು ತಿಂಗಳಿಂದ ನೊಂದು ಇಂದು ಈ ಪ್ರತಿಭಟನೆ ನಿರ್ಧಾರಕ್ಕೆ ಬಂದಿದ್ದೇನೆ. ನಾನು ಇಲ್ಲಿಂದ ಎದ್ದು ಹೋಗುವುದಿಲ್ಲ, ನನ್ನನ್ನು ಬಂಧಿಸಿ ಎಂದು ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ಮಾಡುತ್ತಿರುವ ಎಂಎಲ್ ಸಿ ಭೋಜೇಗೌಡ ಹೇಳಿದರು.