Advertisement
ಸುಮಾರು ಮೂರು ಗಂಟೆಗಳ ಕಾಲ ವಿಚಾರಣೆಗೊಳಪಟ್ಟ ಮಹಿಳೆ, ಶಾಸಕರಿಂದ ನನಗೆ ಅನ್ಯಾಯವಾಗಿದೆ. ಅವರಿಂದ ನನಗೆ 14 ವರ್ಷದ ಪುತ್ರ ಇದ್ದಾನೆ. ಹೀಗಾಗಿ ಶಾಸಕರಿಂದ ಜೀವನಾಂಶ ಕೇಳಿದ್ದೇನೆ ಹೊರತು ಬೇರೆನೂ ಕೇಳಿಲ್ಲ. ಆದರೆ, ಶಾಸಕರು ಎರಡು ಕೋಟಿ ರೂ. ಬೇಡಿಕೆ ಇಟ್ಟಿದ್ದೇನೆ, ಬ್ಲ್ಯಾಕ್‌ಮೇಲ್ ಮಾಡುತ್ತಿದ್ದೇನೆ ಎಂದು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅದರ ವಿರುದ್ಧ ಕಾನೂನು ಹೋರಾಟ ನಡೆಸುತ್ತಿದ್ದೇನೆ ಎಂದು ಮಹಿಳೆ ಹೇಳಿದ್ದಾರೆ. ಮತ್ತಷ್ಟು ಮಾಹಿತಿ ಕಲೆಹಾಕಬೇಕಿದೆ. ಸದ್ಯ ವಾಪಸ್ ಕಳುಹಿಸಿದ್ದೇನೆ. ಮತ್ತೂಮ್ಮೆ ಬರಲು ಸೂಚಿಸಿದ್ದೇನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಶಾಸಕ ರಾಜಕುಮಾರ್ ಪಾಟೀಲ ತೇಲ್ಕೂರ ಮಂಗಳವಾರ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರನ್ನು ಭೇಟಿಯಾಗಲು ಕಮಿಷನರ್ ಕಚೇರಿಗೆ ಆಗಮಿಸಿದ್ದರು. ಆದರೆ, ಆಯುಕ್ತರು ಪೊಲೀಸ್ ಅಧಿಕಾರಿಗಳ ಸಭೆ ನಡೆಸುತ್ತಿದ್ದರಿಂದ ಶಾಸಕರು ವಾಪಸ್ ತೆರಳಿದ್ದಾರೆ.