ದಾವಣಗೆರೆ: ಲೋಕಾಯುಕ್ತ ಪ್ರಕರಣದಲ್ಲಿ ಪ್ರಮುಖ ಆರೋಪಿ ಸ್ಥಾನದಲ್ಲಿರುವ ಶಾಸಕ ಮಾಡಾಳು ವಿರುಪಾಕ್ಷಪ್ಪ ನಾಪತ್ತೆ ಆಗಿದ್ದಾರೆ, ಹುಡುಕಿಕೊಡಿ ಎಂಬ ಪೋಸ್ಟರ್ ಗಳು ಚನ್ನಗಿರಿಯ ವಿವಿದೆಡೆ ರಾರಾಜಿಸುತ್ತಿವೆ.
ಕರ್ನಾಟಕ ಸೋಪ್ ಮತ್ತು ಡಿಟರ್ಜೆಂಟ್ ನಿಗಮ ನಿಯಮಿತ ಅಧ್ಯಕ್ಷ ಮಾಡಾಳು ವಿರುಪಾಕ್ಷಪ್ಪ ಕಳೆದ ಮಾ. 4 ರಿಂದ ಕಾಣೆಯಾಗಿದ್ದಾರೆ. ಕೊನೆಯದಾಗಿ ಮುಖ್ಯಮಂತ್ರಿಗಳ ಕಚೇರಿಯಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ವಯಸ್ಸು, ಎತ್ತರ ಹಾಗೂ ಶಾಸಕರು ಕಂಡಲ್ಲಿ ದೂರವಾಣಿ ಸಂಖ್ಯೆ 100ಕ್ಕೆ ಕರೆ ಮಾಡಿ ಎಂಬಿತ್ಯಾದಿ ಮಾಹಿತಿಯ ಫೋಸ್ಟರ್ ಗಳು ಚನ್ನಗಿರಿಯ ಎಲ್ಲ ಕಡೆ ಕಂಡು ಬರುತ್ತಿವೆ.
ಇದನ್ನೂ ಓದಿ:ವಾಟ್ಸಾಪ್‌ಗೆ ಬಂದ ಜಾಹೀರಾತು ನಂಬಿದ ವ್ಯಕ್ತಿಗೆ 66 ಸಾವಿರ ವಂಚನೆ