Advertisement

ಡಿ.ಕೆ.ಶಿವಕುಮಾರ್‌ ವಿರುದ್ಧವೇ ಜಮೀರ್‌ ದೂರು

11:48 PM Jul 29, 2022 | Team Udayavani |

ಬೆಂಗಳೂರು: ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂಬ ಹೇಳಿಕೆ ಹೈಕಮಾಂಡ್‌ಗೆ ತಲುಪಿದ ಬೆನ್ನಲ್ಲೇ ಈಗ ಮಾಜಿ ಸಚಿವ ಜಮೀರ್‌ ಅಹಮದ್‌ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ವಿರುದ್ಧವೇ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲರಿಗೆ ದೂರು ನೀಡಿದ್ದಾರೆ.

Advertisement

ಸಿದ್ದರಾಮಯ್ಯ ಹುಟ್ಟುಹಬ್ಬ ವಿಚಾರದಲ್ಲಿ ನಾನು ರಾಜ್ಯವ್ಯಾಪಿ ಪ್ರವಾಸ ಮಾಡಿ ಮುಸ್ಲಿಮರನ್ನು ಕಾಂಗ್ರೆಸ್‌ ಪರವಾಗಿ ಒಟ್ಟು ಸೇರಿಸುತ್ತಿದ್ದೇನೆ. ವೈಯಕ್ತಿಕ ಅಭಿಪ್ರಾಯ ವಾಗಿ ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ ಆಗಲಿ ಎಂದಿದ್ದನ್ನೇ ಮುಂದಿಟ್ಟು ನನ್ನನ್ನು ವಿಲನ್‌ನಂತೆ ಬಿಂಬಿಸಲಾಗಿದೆ. ಇದರಿಂದ ನನ್ನ ಸಮುದಾಯಕ್ಕೆ ಉತ್ತರಿಸುವುದು ಕಷ್ಟವಾಗುತ್ತಿದೆ ಎಂದು ಸುರ್ಜೇವಾಲರಲ್ಲಿ ಬೇಸರ ತೋಡಿಕೊಂಡಿದ್ದಾರೆ ಎನ್ನಲಾಗಿದೆ.

ಸದ್ಯ ಅಮೆರಿಕದಲ್ಲಿರುವ ಸುರ್ಜೇವಾಲರಿಗೆ ಜಮೀರ್‌ ದೂರವಾಣಿ ಮೂಲಕ ಈ ವಿಷಯ ತಿಳಿಸಿದ್ದಾರೆ. ಒಕ್ಕಲಿಗ ರಿಗೂ ಮುಂದಿನ ಮುಖ್ಯಮಂತ್ರಿ ಆಗುವ ಅವಕಾಶ ಇದೆ ಎಂದು ಹೇಳಿ ವಿಷಯ ಪ್ರಾರಂಭಿಸಿದವರೇ ಶಿವಕುಮಾರ್‌. ನಾನು ನಮ್ಮ ಸಮುದಾಯದ ಜನಸಂಖ್ಯೆಯೂ ಇದೆ, ಮುಸ್ಲಿಮರು ಮುಖ್ಯಮಂತ್ರಿ ಸ್ಥಾನ ಕೇಳಬಹುದು. ಅದರಲ್ಲಿ ತಪ್ಪೇನು ಎಂದಿದ್ದೆ. ಅದನ್ನೇ ಮುಂದಿಟ್ಟು ಪಕ್ಷದ ನಾಯಕರೇ ನನ್ನನ್ನು ಒಕ್ಕಲಿಗ ವಿರೋಧಿ ಎಂಬಂತೆ ಬಿಂಬಿಸಿ ಪ್ರತಿಭಟನೆ ಮಾಡಿಸಿದ್ದಾರೆ. ಇದಕ್ಕೆ ನನ್ನಲ್ಲಿ ದಾಖಲೆಯೂ ಇದೆ ಎಂದಿದ್ದಾರೆ.

ಅದಕ್ಕೆ, ನಾನು ದೇಶಕ್ಕೆ ಹಿಂದಿರುಗುವವರೆಗೆ ಏನೂ ಮಾತನಾಡಬೇಡಿ. ನಾನು ಕೆಪಿಸಿಸಿ ಅಧ್ಯಕ್ಷರ ಜತೆಗೂ ಮಾತನಾಡುತ್ತೇನೆ. ಮುಖ್ಯಮಂತ್ರಿ ಮಾತು ಈಗ ಬೇಡ ಎಂದು ಸುಜೇìವಾಲಾ ಹೇಳಿದರು ಎನ್ನಲಾಗಿದೆ.

ಮುಸ್ಲಿಮರನ್ನು ಕರೆತರುವ ಹೊಣೆ ಜಮೀರ್‌ಗೆ
ಸಿದ್ದರಾಮಯ್ಯ ಅವರ ದಾವಣಗೆರೆ ಸಮಾವೇಶಕ್ಕೆ ರಾಜ್ಯದ ಮುಸ್ಲಿಮರನ್ನು ಕಾರ್ಯಕರ್ತರನ್ನು ಕರೆತರುವ ಹೊಣೆಗಾರಿಕೆಯನ್ನು ಜಮೀರ್‌ಗೆ ನೀಡಲಾಗಿದೆ.

Advertisement

ಈ ಸಂಬಂಧ ಬೆಳಗಾವಿ, ಬೀದರ್‌, ಬಾಗಲಕೋಟೆ, ಕಲಬುರಗಿ, ಕೊಪ್ಪಳ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲೆಗಳ ಮುಸ್ಲಿಂ ನಾಯಕರ ಜತೆಗೂ ಮಾತನಾಡಿ ವಾಹನದ ವ್ಯವಸ್ಥೆ ಮಾಡಿಸುತ್ತಿದ್ದಾರೆ. ಇದು ಕಾಂಗ್ರೆಸ್‌ನ ಕೆಲವು ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ. ಇದೇ ಕಾರಣಕ್ಕೆ ಡಿ.ಕೆ.ಶಿವಕುಮಾರ್‌ ದಾವಣಗೆರೆಯದು ಖಾಸಗಿ ಕಾರ್ಯಕ್ರಮ ಎಂದು ಹೇಳಿದ್ದಾರೆ ಎನ್ನಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next