Advertisement

ಕಾನೂನು ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದ ಶಾಸಕ

01:13 PM Dec 11, 2021 | Team Udayavani |

ಹುಬ್ಬಳ್ಳಿ: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ನವನಗರದ ಕರ್ನಾಟಕ ಕಾನೂನು ವಿವಿ ಎದುರು ಕಾನೂನು ವಿದ್ಯಾರ್ಥಿಗಳಿಂದ ಕಳೆದ 5 ದಿನಗಳಿಂದ ನಡೆಸುತ್ತಿರುವ ಪ್ರತಿಭಟನೆ ಹಾಗೂ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಶಾಸಕ ಪ್ರಸಾದ ಅಬ್ಬಯ್ಯ ಭೇಟಿ ನೀಡಿ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿ, ಸಮಸ್ಯೆ ಆಲಿಸಿದರು.

Advertisement

ನಂತರ ಕಾನೂನು ವಿವಿ ಕುಲಪತಿ ಪ್ರೊ| ಈಶ್ವರ ಭಟ್‌ ಅವರನ್ನು ಪ್ರತಿಭಟನಾ ಸ್ಥಳಕ್ಕೆ ಕರೆಸಿಕೊಂಡ ಶಾಸಕರು, ವಿವಿಗಳು ವಿದ್ಯಾರ್ಥಿಗಳ ಶೈಕ್ಷಣಿಕ ಅನುಕೂಲಕ್ಕೆ ತಕ್ಕಂತೆ ಕಾರ್ಯ ನಿರ್ವಹಿಸಬೇಕು. ಈಗಾಗಲೇ ಸೆಮಿಸ್ಟರ್‌ ಆರಂಭಕ್ಕೆ ಶುಲ್ಕ ಭರಿಸಿಕೊಂಡರೂ ತರಗತಿ ಆರಂಭಿಸಲು ಏನು ತೊಂದರೆ. ಪರೀಕ್ಷೆಯನ್ನು 15ರಿಂದ ನಡೆಸುವ ಉದ್ದೇಶ ಏನಿದೆ. ವಿದ್ಯಾರ್ಥಿಗಳ ಒತ್ತಾಸೆಯಂತೆಭೌತಿಕ ಪರೀಕ್ಷೆ ಕೈಬಿಟ್ಟು ಆನ್‌ಲೈನ್‌ ಮೂಲಕಅಥವಾ ಇನ್ನಿತರೆ ಮಾದರಿಯಲ್ಲಿ ಪರೀಕ್ಷೆ ನಡೆಸಲುಸಾಧ್ಯವೇ ಎಂಬುದನ್ನು ಕೂಲಂಕಷವಾಗಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಿ ಎಂದರು.

ಇದೇ 20ಕ್ಕೆ ನ್ಯಾಯಾಲಯದಲ್ಲಿ ವಿಚಾರಣೆಯಿದ್ದು, ಅಲ್ಲಿವರೆಗೂ ಪರೀಕ್ಷೆಮುಂದೂಡುವ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಿ. ನ್ಯಾಯಾಲಯ ತೀರ್ಮಾನ ನೋಡಿ ಮುಂದಿನ ನಿರ್ಧಾರ ಕೈಗೊಳ್ಳುವಂತೆ ಕುಲಪತಿಗೆ ತಿಳಿಸಿದರು.

ಕುಲಪತಿ ಪ್ರೊ| ಈಶ್ವರ ಭಟ್‌ ಮಾತನಾಡಿ,ಈಗಾಗಲೇ ಭೌತಿಕ ಪರೀಕ್ಷೆಗೆ ನೋಟಿμಕೇಶನ್‌ ಹೊರಡಿಸಲಾಗಿದೆ. ಪರೀಕ್ಷೆಗೆ ಸಂಬಂಧಿ ಸಿದಂತೆ ಉತ್ಛ ನ್ಯಾಯಾಲಯ ತೀರ್ಪು ನೀಡಿದ್ದು,ಅದರಂತೆ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ.ಪರೀಕ್ಷೆಗೆ ತಡೆ ಹಿಡಿದರೆ ಕೋರ್ಟ್‌ ಆದೇಶಉಲ್ಲಂಘನೆಯಾಗುತ್ತದೆಯೇ ಎಂಬುದರಬಗ್ಗೆ ವಿವಿಯ ಹಿರಿಯ ಅಧಿ ಕಾರಿಗಳು, ಕಾನೂನು ತಜ್ಞರ ಜತೆ ಚರ್ಚಿಸಿ ತೀರ್ಮಾನಿಸುತ್ತೇವೆ ಎಂದರು.

ಕುಲಪತಿಗಳು ತಮ್ಮ ಹಠಮಾರಿತನದ ಧೋರಣೆ ಕೈಬಿಟ್ಟು ವಿದ್ಯಾರ್ಥಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ವಿದ್ಯಾರ್ಥಿ ಸ್ನೇಹಿಯಾಗಿ ಕಾರ್ಯ ನಿರ್ವ ಹಿಸಬೇಕು. ಇಲ್ಲದಿದ್ದರೆ ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಕಾಂಗ್ರೆಸ್‌ ಪಕ್ಷದ ಪಾಲಿಕೆಸದಸ್ಯರು, ಮುಖಂಡರು, ಕಾರ್ಯಕರ್ತರು ಸಹ ಭಾಗವಹಿಸಿ ಹೋರಾಟ ನಡೆಸುವ ಬಗ್ಗೆ ಎಚ್ಚರಿಕೆ ನೀಡಲಾಯಿತು.

Advertisement

ಈ ವಿಷಯ ಕುರಿತು ಡಿ.13ರಿಂದ ಆರಂಭವಾಗುವ ಬೆಳಗಾವಿ ಅಧಿವೇಶನದಲ್ಲೂ ವಿಷಯ ಪ್ರಸ್ತಾಪಿಸಿವಿದ್ಯಾರ್ಥಿಗಳ ಹಿತ ಕಾಯುವುದಾಗಿ ಶಾಸಕರು ತಿಳಿಸಿದರು.

ನಂತರ ಪ್ರತಿಭಟನಾ ನಿರತ ಕೆಲ ಕಾನೂನುವಿದ್ಯಾರ್ಥಿಗಳನ್ನು ಕರೆದುಕೊಂಡು ಮಾಜಿಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾದ ಶಾಸಕ ಪ್ರಸಾದ ಅಬ್ಬಯ್ಯ,ಕಾನೂನು ವಿವಿ ವಿದ್ಯಾರ್ಥಿಗಳ ಸಮಸ್ಯೆ ಬಗ್ಗೆ ಮನವರಿಕೆ ಮಾಡಿದರು. ಅಧಿ ವೇಶನದಲ್ಲಿಪ್ರಶ್ನಿಸಿ ಮುಖ್ಯಮಂತ್ರಿ ಅವರಿಂದಲೇ ಉತ್ತರ ಕೊಡಿಸುವುದಾಗಿ ಸಿದ್ದರಾಮಯ್ಯ ಅವರು ಭರವಸೆ ನೀಡಿದರು.

ಪಾಲಿಕೆ ಸದಸ್ಯ ನಿರಂಜನ ಹಿರೇಮಠ, ಹುಡಾ ಮಾಜಿ ಅಧ್ಯಕ್ಷ ಅನ್ವರ್‌ ಮುಧೋಳ, ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ಶಿವ ಬೆಂಡಿಗೇರಿ, ವರುಣಗೌಡ,ರಿತಿಕ್‌, ರೋಹಿತ್‌ ಘೋಡಕೆ, ಮುಜಾಹಿದ್‌ ಖಾನ್‌, ರೋಹಿತ ಇನ್ನಿತರದ್ದರು.

Advertisement

Udayavani is now on Telegram. Click here to join our channel and stay updated with the latest news.

Next