Advertisement
ಶನಿವಾರ “ಉದಯವಾಣಿ’ ಮಂಗಳೂರು ಕಚೇರಿ ಯಲ್ಲಿ ನಡೆದ “ಶಾಸಕರ ಜತೆ ನಮ್ಮ ಮಾತುಕತೆ’ ಸರಣಿಯಲ್ಲಿ ಅವರು ಭಾಗಿಯಾಗಿ ಈ ಭರವಸೆ ನೀಡಿದ್ದಾರೆ.
ಕಾರ್ಯ ಗಳು ನಡೆಯುತ್ತಿವೆ, ಒಂದು ವೇಳೆ ಕಾಮಗಾರಿ ಗಳನ್ನು ಕೈಗೆತ್ತಿಕೊಳ್ಳದೆ ಹೋದರೆ ಅನು ದಾನ ಹಿಂದಕ್ಕೆ ಹೋಗುವ ಭೀತಿ ಇದೆ. ನಾಗರಿಕರು ತಾಳ್ಮೆಯಿಂದ ಇದುವರೆಗೆ ಸಹಕಾರ ನೀಡಿದ್ದಿರಿ, ಇನ್ನೆರಡು ವರ್ಷಗಳಲ್ಲಿ ಮಂಗಳೂರು ಸಂಪೂರ್ಣ ಬದಲಾಗಿರುತ್ತದೆ ಎಂದರು. ಪ್ರವಾಸೋದ್ಯಮ, ಬ್ಯಾಂಕಿಂಗ್, ವೈದ್ಯ ಕೀಯ, ಶಿಕ್ಷಣ, ಕ್ರೀಡೆ ಹೀಗೆ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಎಲ್ಲ ಆಯಾಮಗಳಿಂದ ಸಂಶೋಧನೆ ನಡೆಸಿ, ಕೇಂದ್ರ ಸರಕಾರಕ್ಕೆ ಈ ತಜ್ಞರ ತಂಡದವರು ವರದಿ ಸಲ್ಲಿಸಲಿದ್ದಾರೆ, ಅದನ್ನು ಅನು ಸರಿಸಿಕೊಂಡು ಕೇಂದ್ರ ಸರಕಾರ ನಗರದ ಅಭಿವೃದ್ಧಿಗೆ ಹಂತ ಹಂತವಾಗಿ ಹಣ ಬಿಡುಗಡೆ ಮಾಡಲಿದೆ ಎಂದರು.
Related Articles
Advertisement
ಮಂಗಳೂರು ನಗರ ಮುಂದೆ ಹೇಗಿರಬೇಕು ಎಂಬ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸುತ್ತಿದ್ದೇನೆ, ಅದಕ್ಕಾಗಿ ಶಾಲೆಗಳ ಝೋನ್ ಮಾಡುವುದು, ನಗರದಲ್ಲಿ ಜನದಟ್ಟಣೆ ಕಡಿಮೆ ಮಾಡುವುದಕ್ಕೆ ಸೂಕ್ತ ಕ್ರಮ ಕೈಗೊಳ್ಳುವುದು, ಮೂಲಸೌಕರ್ಯಗಳನ್ನು ಇನ್ನಷ್ಟು ಸುವ್ಯವಸ್ಥಿತವಾಗಿ ಅಭಿವೃದ್ಧಿಪಡಿಸುವುದು ಮುಂತಾದ ತಮ್ಮ ಕಾರ್ಯಯೋಜನೆಗಳನ್ನು ಶಾಸಕ ವೇದವ್ಯಾಸ ಕಾಮತ್ “ಶಾಸಕರೊಂದಿಗೆ ಮಾತುಕತೆ’ಯಲ್ಲಿ ವಿವರಿಸಿದರು. ಉದಯವಾಣಿ ಪರವಾಗಿ ಶಾಸಕರನ್ನು ಗೌರವಿಸಲಾಯಿತು.
ಕೇಂದ್ರದ ತಜ್ಞರ ತಂಡದಿಂದ ಸಮೀಕ್ಷೆನಗರದಲ್ಲಿ ಸಮಗ್ರ ಸುಧಾರಣೆ ತರುವ ನಿಟ್ಟಿನಲ್ಲಿ ಅಧ್ಯಯನ, ಸಂಶೋಧನೆ ಕೈಗೊಳ್ಳುವುದಕ್ಕಾಗಿ ಕೇಂದ್ರ ಸರಕಾರ, ಎನ್‌ಜಿಒ ಹಾಗೂ ಇತರ ತಜ್ಞರನ್ನೊಳಗೊಂಡ ತಂಡವನ್ನು ರೂಪಿಸಿದ್ದು ರಾಜ್ಯದಲ್ಲಿ ಮೊದಲ ಬಾರಿಗೆ ಮಂಗಳೂರಿನಲ್ಲಿ ಕಾರ್ಯಾಚರಿಸುವ ನಿರೀಕ್ಷೆ ಇದೆ ಎಂದು ಶಾಸಕ ವೇದವ್ಯಾಸ ಕಾಮತ್ ತಿಳಿಸಿದ್ದಾರೆ.