ಕುರುಗೋಡು: ಸಂಡೂರಲ್ಲಿ ಡಿಎಂಎಫ್ ಅನುದಾನ ಯಾವ ಚರಂಡಿಗೆ ಹರಿದು ಹೋಗಿದೆ ಗೊತ್ತಿಲ್ಲ, ಅಂತ ದಾಖಲಾತಿ ಇಲ್ಲದೆ ವೇದಿಕೆ ಮೇಲೆ ಸಚಿವ ಆನಂದ್ ಸಿಂಗ್ ಮಾತನಾಡುವುದು ಸರಿಯಲ್ಲ ಎಂದು ಶಾಸಕ ಈ ತುಕಾರಾಂ ಕಿಡಿಕಾರಿದರು.
ಸಮೀಪದ ಏಳುಬೆಂಚಿ ಗ್ರಾಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಚಿವ ಆನಂದ್ ಸಿಂಗ್ ಅವರು ಯಾವುದೇ ವಿಷಯದ ಬಗ್ಗೆ ಮಾತನಾಡುವುದಾದರೆ ದಾಖಲಾತಿ ಸಮೇತ ತೆಗೆದುಕೊಂಡು ಬಂದು ಮಾತನಾಡಲಿ, ನಾನು ಕೂಡ ಡಿಎಂಎಫ್ ಅನುದಾನದಡಿಯಲ್ಲಿ ಏನು ಅಭಿವೃದ್ಧಿ ಕಾರ್ಯಗಳು ನಡೆದಿದವೇ ನಾನು ದಾಖಲಾತಿ ಸಮೇತ ಕೊಡುತ್ತೇನೆ ಚುನಾವಣೆಯ ಮತ ಬ್ಯಾಂಕಿಗಾಗಿ ಕ್ಷೇತ್ರದ ಜನರನ್ನು ದಿಕ್ಕು ತಪ್ಪಿಸುವ ಕೆಲಸ ವನ್ನು ಮೊದಲು ಆನಂದ್ ಸಿಂಗ್ ಬಿಡಬೇಕು ಎಂದು ಗುಡುಗಿದರು.
ತಾವು ಒಬ್ರು ಸಚಿವರು ಇದ್ದಾರೆ ಸಂಡೂರು ಕ್ಷೇತ್ರಕ್ಕೆ ಡಿಎಂಎಫ್ ಅನುದಾನ ಎಷ್ಟು ನೀಡಿದ್ದಾರೆ ಎಂದು ಕ್ಷೇತ್ರಕ್ಕೆ ಬಂದು ಜನರಿಗೆ ಮಾಹಿತಿ ನೀಡಲಿ ನೋಡೋಣ ಸಂವಿಧಾನ ಬದ್ದವಾಗಿ ವಿಜಯನಗರಕ್ಕೆ 18 ರಷ್ಟು ಬಳಕೆ ಮಾಡಿಕೊಳ್ಳಬೇಕು ಅದನ್ನು ಬಿಟ್ಟು 28 ರಷ್ಟು ಬಳಕೆ ಮಾಡಿಕೊಂಡು ಸಂಡೂರು ಜನತೆಗೆ ಅನ್ಯಾಯ ಮಾಡಿದ್ದಾರೆ ಎಂದರು.
ಇನ್ನೂ ಪ್ರವಾಸೋದ್ಯಮ ಸಚಿವರಾಗಿರುವ ತಾವು ಸಂಡೂರು ಕ್ಷೇತ್ರಕ್ಕೆ ಪ್ರವಾಸೋದ್ಯಮ ಇಲಾಖೆಯ ಅನುದಾನ ಎಷ್ಟು ನೀಡಿದ್ದಾರೆ ಎಂಬುವುದು ಖಚಿತ ಪಡಿಸಲಿ ಇದರ ಬಗ್ಗೆ ಕ್ಷೇತ್ರದ ಜನರು ಕೂಡ ಬಹಳ ಕೇಳುತಿದ್ದಾರೆ ಎಂದರು.
Related Articles
ಇದರ ಬಗ್ಗೆ ನಾನು ಮತ್ತು ಸಂತೋಷ್ ಲಾಡ್ ಅವರು ಇದರ ಬಗ್ಗೆ ಮಾಹಿತಿ ಕೇಳಿದ್ದೇವೆ ಕೊಡುತೀನಿ ಅಂದಿದ್ದಾರೆ ಕೂಡಲೇ ಇದರ ಬಗ್ಗೆ ಸಚಿವ ಆನಂದ್ ಸಿಂಗ್ ಮಾಹಿತಿ ನೀಡಬೇಕು ಎಂದು ಅಗ್ರಹಿಸಿದರು.
18 ರಷ್ಟು ಬಳಕೆ ಮಾಡಿಕೊಳ್ಳೋ ಬದಲು ಕಾನೂನು ಪ್ರಕಾರ 14 ರಷ್ಟು ಹೆಚ್ಚಿಗೆ ತಗೊಂಡಿರುವ ಅನುದಾನವನ್ನು ಬಿಜೆಪಿ ಸರಕಾರ ನಮ್ಮ ಕ್ಷೇತ್ರದ ಮೇಲೆ ಗೌರವ ಇದ್ರೆ ನಮಗೆ ವಾಪಸ್ಸು ನೀಡಲಿ ಆನಂದ್ ಸಿಂಗ್ ಅವರು ಏನೋ ಅಭಿವೃದ್ಧಿ ಆಗಿಲ್ಲ ಅಂತಿದಾರೆ ಅಲ್ಲ ಅದನ್ನು ತೋರಿಸಿದರೆ ಅದೇ ಅನುದಾನದಿಂದ ಅದನ್ನು ಅಭಿವೃದ್ಧಿ ಮಾಡುತ್ತೇನೆ ಎಂದರು.
ಇನ್ನೂ 6.9.2021ರಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಡಿಎಂಎಪ್ ಅನುದಾನವನ್ನು 22 ರಷ್ಟು ಬಳಕೆ ಮಾಡಿಕೊಳ್ಳುವುದರ ಬಗ್ಗೆ ಸಭೆ ನಡೆದಿದೆ ಈ ಸಭೆಯಲ್ಲಿ ಕಾರ್ಯದರ್ಶಿ, ಗಣಿ ಇಲಾಖೆಯ ಸಚಿವರು, ಸಂಬಂಧ ಪಟ್ಟ ಶಾಸಕರು ಇಲ್ಲದೆ ಬೇರೆ ಬೇರೆಯವರು ಭಾಗವಹಿಸಿ ತರತೂರಿಯಲ್ಲಿ ಸಭೆ ಮಾಡಿ ಸಂವಿಧಾನಕ್ಕೆ ಕಪ್ಪು ಚುಕ್ಕೆ ಬರುವಂತೆ ಕೆಲಸ ಮಾಡಿದ್ದಾರೆ ಎಂದರು.
ಡಿಎಂಎಪ್ ಅನುದಾನ ಸಾರ್ವಜನಿಕರದು, ಅದು ಸಂಡೂರು ಕ್ಷೇತ್ರದ ಜನರ ಹಣ ಅದರ ಬಗ್ಗೆ ಅವರು ಕೇಳಬೇಕು ಅದನ್ನು ಬಿಟ್ಟು ರಾಜಕೀಯ ವಾಗಿ ಬಂದು ವೇದಿಕೆಗಳ ಮೇಲೆ ಆನಂದ್ ಸಿಂಗ್ ಅವರು ಇಲ್ಲಸಲ್ಲದ ಸುಳ್ಳನ್ನು ಜನರ ಮುಂದೆ ಹೇಳುವುದು ಸಂವಿಧಾನಕ್ಕೆ ಒಳ್ಳೆಯದಲ್ಲ ಎಂದರು. ಮೊದಲು ಉಸ್ತುವಾರಿ ಮಂತ್ರಿ ಇದ್ರೂ ಸದ್ಯ ಕೂಡ ಶ್ರೀರಾಮುಲು ಉಸ್ತುವಾರಿ ಮಂತ್ರಿ ಇದ್ದಾರೆ ಅವರೆಲ್ಲ ಕುಳಿತುಕೊಂಡು ಚರ್ಚೆ ಮಾಡಿ ಸಂಡೂರ್ ಭಾಗದಲ್ಲಿ ಇಂತಹ ಕಡೆ ಡಿಎಂಎಪ್ ಅನುದಾನ ಸರಿಯಾಗಿ ಸದ್ಭಳಕೆ ಯಾಗಿಲ್ಲ ಅಂತ ಕೇಳಬೇಕು ಅದನ್ನು ಬಿಟ್ಟು ಜನರ ಮುಂದೆ ಹೇಳಿ ಸುಳ್ಳು ಸಂದೇಶ ಹರಡುಸುವುದು ಬಿಡಬೇಕು ಎಂದರು.
ಸಂಡೂರು ಕ್ಷೇತ್ರಕ್ಕೆ ಅಮಿತ್ ಶಾ ಅವರು ಮದ್ಯಾಹ್ನ 1 ಗಂಟೆಗೆ ಬರಬೇಕಿತ್ತು ಅವರು ತಡವಾಗಿ ತರತೂರಿಯಲ್ಲಿ ಬಂದು ಕ್ಷೇತ್ರದ ಜನರು ಬಿಜೆಪಿ ಯನ್ನು ತಿರಸ್ಕಾರ ಮಾಡಿದ್ದಾರೆ ಎಂದು ಅಲ್ಲಿ ಭಾಗವಹಿಸಿದ ಜನರ ಸಂಖ್ಯೆ ನೋಡಿ ಕೇವಲ 30 ನಿಮಿಷ ಕೂಡ ಇರದೆ ಹೊಡಿ ಹೋಗಿದ್ದಾರೆ ಎಂದರು.
ಸಂಡೂರಲ್ಲಿ ಬಿಜೆಪಿ ಯವರು ವಿಜಯ ಸಂಕಲ್ಪ ಯಾತ್ರೆ ಮಾಡಿರುವುದರಿಂದ ಕಾಂಗ್ರೆಸ್ ಗೆ ಯಾವ ಪರಿಣಾಮ ಬೀರಲ್ಲ ನಾನು ಪರೀಕ್ಷೆ ಬಂದಾಗ ಓದುವವನು ಅಲ್ಲ ಮೊದಲೇ ಓದಿಕೊಂಡಿರುತ್ತೇನೆ ಪರೀಕ್ಷೆ ಯಲ್ಲಿ ಹೇಗೆ ಪಾಸ್ ಆಗಬೇಕು ಅಂತ ಗೊತ್ತಿರುತ್ತದೆ ಆಗಾಗಿ ಮೊದ್ಲೇ ಓದಿ ಕೊಳ್ಳದೆ ಪರೀಕ್ಷೆ ಬಂದಾಗ ಬಂದವರು ಹೇಗೆ ಪಾಸ್ ಆಗಬೇಕು ಅಂತ ಭಯ ಪಡುತ್ತಿರುತ್ತಾರೆ ಎಂದು ಬಿಜೆಪಿ ವಿರುದ್ದ ವ್ಯಂಗ್ಯವಾಡಿದರು.