Advertisement

ದತ್ತಪೀಠದ ಬಗ್ಗೆ ವಿವಾದಾತ್ಮಕ ಹೇಳಿಕೆ: ವಿಡಿಯೋ ಮಾಡಿ ಕ್ಷಮೆ ಕೇಳಿದ ಶಾಸಕ ಟಿ.ಡಿ.ರಾಜೇಗೌಡ

11:39 AM Jan 25, 2023 | Team Udayavani |

ಚಿಕ್ಕಮಗಳೂರು: ದತ್ತಪೀಠ ದತ್ತಮಾಲೆಯ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಶೃಂಗೇರಿ ಕ್ಷೇತ್ರದ ಕಾಂಗ್ರೆಸ್ ಟಿ.ಡಿ.ರಾಜೇಗೌಡ ವಿರುದ್ಧ ಆಕ್ರೋಶ ಕೇಳಿಬಂದ ಹಿನ್ನೆಲೆ ಸ್ವತಃ ಶಾಸಕರು ಈ ಬಗ್ಗೆ ಕ್ಷಮ ಕೇಳಿದ್ದಾರೆ.

Advertisement

ಶಿರಡಿ ಸಾಯಿಬಾಬಾ ದರ್ಶನಕ್ಕೆ ತೆರಳಿದ್ದು, ಅಲ್ಲಿಂದಲೇ ವಿಡಿಯೋ ಮೂಲಕ ಟಿ.ಡಿ ರಾಜೇಗೌಡ ಕ್ಷಮೆ ಕೇಳಿದ್ದು,ಹಳ್ಳಿಗಳಲ್ಲಿ ರೂಡಿಯಿರುವ ಶಬ್ದವನ್ನು ಬೆಳೆಸಿದ್ದೇನೆ. ಆ ಶಬ್ದ ಬಳಕೆ‌ ಯಾರ  ಸಂಸ್ಕೃತಿಯು ಆಗಬಾರದು. ಆ ಶಬ್ದ ಬಳಸಬಾರದಿತ್ತು ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಕ್ಷಮೆಯಾಚಿಸಿದ್ದಾರೆ.

ಶಾಸಕರು ಹೇಳಿದ್ದೇನು?: ‘ಅವರು ಮನೆ ಹಾಳರು.. ರೆಕಾರ್ಡ್ ಮಾಡಿಕೊಳ್ಳ ಬೇಡಿ.. ಜನರಿಗೆ ದತ್ತಮಾಲೆ ಹಾಕಿಸಿ, ಕುಂಕುಮವನ್ನು ಹಾಕಿ ಕರೆದುಕೊಂಡು ಹೋಗುತ್ತಾರೆ. ಅಯೋಧ್ಯೆ ಹೋರಾಟದಲ್ಲಿ ಲಕ್ಷಾಂತರ ಜನರನ್ನು ಬಲಿ ಕೊಟ್ಟರು, ಬಾಬ್ರಿ ಮಸೀದಿ ಕೆಡವಲು ಹೋಗಿ ಲಕ್ಷಾಂತರ ಜನರು ಬಲಿಯಾದರು, ನಾನು ಬೈಯುತ್ತೇನೆ, ಜನರನ್ನು ಕರೆದುಕೊಂಡು ಹೋಗುವವರು ಮನೆಹಾಳರು..” ಎಂದು ಅವಾಚ್ಯ ಶಬ್ಬಗಳಿಂದ ಮಾತನಾಡಿದ್ದರು.

ಈ ಹೇಳಿಕೆ ವಿರುದ್ಧ ಆಕ್ರೋಶ, ಪ್ರತಿಭಟನೆ ಕೇಳಿ ಬಂದಿತ್ತು. ಈ ಕಾರಣದಿಂದ ಶಾಸಕರು ಕ್ಷಮೆ ಕೇಳದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next