Advertisement

ರಬಕವಿ-ಬನಹಟ್ಟಿ: ಶಿಕ್ಷಕರ ದಿನೋತ್ಸವ ನಿಮಿತ್ತ ಮೆರವಣಿಗೆಗೆ ಶಾಸಕ ಸಿದ್ದು ಸವದಿ ಚಾಲನೆ

12:34 PM Sep 05, 2022 | Team Udayavani |

ರಬಕವಿ-ಬನಹಟ್ಟಿ: ಶಿಕ್ಷಕರ ದಿನಾಚರಣೆ ಪ್ರಯುಕ್ತ ಸೋಮವಾರ ರಬಕವಿ-ಬನಹಟ್ಟಿ ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಂಡಿದ್ದ ಮೆರವಣೆಗೆಗೆ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಶಾಸಕ ಸಿದ್ದು ಸವದಿ ಚಾಲನೆ ನೀಡಿದರು.

Advertisement

ಸೆ. 5 ರ ಸೋಮವಾರ ರಬಕವಿಯ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಶಾಸಕ ಸಿದ್ದು ಸವದಿ ಅವರು ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ, ಮೆರವಣಿಗೆಗೆ ವಿಧ್ಯುಕ್ತ ಚಾಲನೆ ನೀಡಿದರು.

ಈ ಮೆರವಣಿಗೆಯಲ್ಲಿ ಕಂಕಣವಾಡಿಯ ಸಂಬಾಳ ಹಾಗೂ ಕರಡಿವಾದನ ಸಂಭ್ರಮ ಹೆಚ್ಚಿಸಿತ್ತು. ಮೆರವಣಿಗೆಯು ರಬಕವಿಯಿಂದ ರಾಮಪುರದ ದಾನಮ್ಮದೇವಿ ಕಲ್ಯಾಣ ಮಂಟಪದವರೆಗೆ ನಡೆಯಿತು.

ಈ ಸಂದರ್ಭದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ವಿಜಯಕುಮಾರ ವಂದಾಲ, ಶ್ರೀಶೈಲ ಬುರ್ಲಿ, ಬಿ. ಎಂ. ಹಳೇಮನಿ, ಬಿ. ಡಿ. ನೇಮಗೌಡ, ಬಿ. ಬಿ. ಮುಧೋಳ, ಅರ್ಜುನ ಕಾಖಂಡಕಿ, ಅರುಣ ಕುಲಕರ್ಣಿ, ಜಗದೀಶ ಕುಳ್ಳೋಳ್ಳಿ, ದ್ರಾಕ್ಷಾಯಣಿ ಮಂಡಿ ಸೇರಿದಂತೆ ಅನೇಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next