Advertisement

ಸೌಲಭ್ಯಗಳನ್ನು ಬಳಸಿಕೊಂಡು ಯಶಸ್ಸು ಸಾಧಿಸಿ: ಸಿದ್ದು ಸವದಿ

07:37 PM Jun 18, 2022 | Team Udayavani |

ರಬಕವಿ-ಬನಹಟ್ಟಿ : ಶಿಕ್ಷಣದ ವ್ಯವಸ್ಥೆಯಲ್ಲಿ ಬಹಳಷ್ಟು ಬದಲಾವಣೆಯಾಗಿದ್ದು, ಸರಕಾರ ಕಾಲಕಾಲಕ್ಕೆ ಶಿಕ್ಷಣಕ್ಕೆ ಬೇಕಾದ ಮೂಲಭೂತ ಸೌಲಭ್ಯಗಳನ್ನು ನೀಡಿದೆ. ಅದರ ಸದುಪಯೋಗ ಪಡಿಸಿಕೊಂಡು ವಿದ್ಯಾರ್ಥಿಗಳು ಯಶಸ್ಸು ಸಾಧಿಸಿ ಎಂದು ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ, ತೇರದಾಳ ಶಾಸಕ ಸಿದ್ದು ಸವದಿ ಹೇಳಿದರು.

Advertisement

ಅವರು ಶನಿವಾರ ಬನಹಟ್ಟಿಯ ಸರಕಾರಿ ಪ್ರೌಢಶಾಲೆಯ ಆವರಣದಲ್ಲಿ ಹಮ್ಮಿಕೊಂಡ ಪುಸ್ತಕ ವಿತರಣಾ ಸಮಾರಂಭದಲ್ಲಿ ಮಾತನಾಡಿದರು. ಸರಕಾರ ಪುಸ್ತಕಗಳನ್ನು ಆದಷ್ಟು ಬೇಗನೆ ಕೊಡಬೇಕಾಗಿತ್ತು. ಆದರೆ ಕೆಲವೊಂದು ವಾದ ವಿವಾದಗಳಿಂದ ಸ್ವಲ್ಪ ತಡವಾಗಿದೆ. ಸರಕಾರದ ಯೋಜನೆಗಳನ್ನು ಪ್ರತಿಯೊಬ್ಬರು ಬಳಸಿಕೊಂಡು ಉತ್ತಮ ಶಿಕ್ಷಣವನ್ನು ಪಡೆಯಿರಿ. ಇಂದನ ದಿನಮಾನಗಳಲ್ಲಿ ಸರಕಾರಿ ಶಾಲೆಯಲ್ಲಿನ ಮಕ್ಕಳು ಉತ್ತಮ ಶಿಕ್ಷಣ ಪಡೆಯುತ್ತಿದ್ದಾರೆ. ಸರಕಾರಿ ಶಾಲೆಗಳಲ್ಲಿಯೂ ಕೂಡಾ ಉತ್ತಮ ಫಲಿತಾಂಶ ಬರುತ್ತಿದ್ದು, ಯಾವುದೇ ಖಾಸಗಿ ಶಾಲೆಗಳಿಗೆ ಕಡಿಮೆ ಇಲ್ಲದಂತೆ ಶಿಕ್ಷಣ ನೀಡುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಜಮಖಂಡಿ ಕ್ಷೇತ್ರ ಶಿಕ್ಷಣಾಧಿಕಾರಿ ಸಿ. ಎಂ. ನೇಮಗೌಡ ವಹಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಆರ್. ಬಿ. ಬಸಗೊಂಡನವರ, ಸಂತೋಷ ತಳಕೇರಿ, ಸಿ. ಜಿ. ಕಾಖಂಡಕಿ, ಬಾಬಾಗೌಡ ಪಾಟೀಲ, ಪ್ರಶಾಂತ ಹೊಸಮನಿ, ಬಿ. ಬಿ. ಮುದೋಳ, ಇಸಿಓ ಬಿ. ಎಂ. ಹಳೇಮನಿ, , ಆರ್. ಎಂ. ಸಂಪಗಾAವಿ, ಜಗದೀಶ ಕುಳೋಳ್ಳಿ, ಬಿ. ಡಿ. ನೇಮಗೌಡ, ಪಿ. ಬಿ. ಪಾಲಬಾಂವಿ, ಅರುಣ ಕುಲಕರ್ಣಿ, ಅನೀಲ ಕಡ್ಲಿ, ವಿಜಯಕುಮಾರ ಹಲಕುರ್ಕಿ, ಎಂ. ಎಸ್. ಗಡೇನವರ, ಎಸ್. ಬಿ. ಬೆಳ್ಳಿಕಟ್ಟಿ, ಐ. ಎ. ಡಾಂಗೆ, ಶಿವು ಕೊಕಟನೂರ, ಬಿ. ಎಂ. ಇಂಡಿಕರ, ಆರ್. ಬಿ. ದುತ್ತರಗಾಂವಿ, ಬಿ. ಎಸ್. ಕಂಠಿಮಠ, ಡಬ್ಲ್ಯೂ. ವಾಯ್. ಭಜಂತ್ರಿ, ಡಿ. ಬಿ. ಜಾಯಗೊಂಡ, ಬಿ. ಪಿ. ಉಪಲದಿನ್ನಿ, ಸಂತೋಷ ಬಡ್ಡಿ ಸೇರಿದಂತೆ ಅನೇಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next