Advertisement

ಸರಕಾರಿ ಆಸ್ಪತ್ರೆಗೆ ಶಾಸಕ ಶಿವನಗೌಡ ನಾಯಕ ಭೇಟಿ

06:15 PM Aug 17, 2022 | Team Udayavani |

ದೇವದುರ್ಗ: ಸರಕಾರಿ ಆಸ್ಪತ್ರೆ ಮೇಲೆ ಬಡರೋಗಿಗಳ ನಂಬಿಕೆ ಕಳೆದು ಹೋಗುತ್ತಿದೆ. ರೋಗಿಗಳಿಂದ ಹಣ ಬೇಡಿಕೆ ದೂರುಗಳು ಹೆಚ್ಚಿವೆ. ಕಡಿವಾಣ ಹಾಕದೇ ಇದ್ದಲ್ಲಿ ವೈದ್ಯರ ಮೇಲೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಶಾಸಕ ಕೆ.ಶಿವನಗೌಡ ನಾಯಕ ಖಡಕ್‌ ಎಚ್ಚರಿಕೆ ನೀಡಿದರು.

Advertisement

ಪಟ್ಟಣದ ಸಾರ್ವಜನಿಕ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದ ಅವರು, ಹೆರಿಗೆ ವೇಳೆ ಗರ್ಭಿಣಿ, ಬಾಣಂತಿಯರಿಂದ ಸ್ಟಾಪ್‌ನರ್ಸ್‌ಗಳು ಮನ ಬಂದಂತೆ ಹಣ ಬೇಡಿಕೆ ಇಡುತ್ತಿರುವುದು ಗಮನಕ್ಕೆ ಬಂದಿದೆ. ಬಡರೋಗಿಗಳಿಗೆ ಪ್ರಮಾಣಿಕ ಸೇವೆ ನೀಡಿ ಇಲ್ಲವಾದಲ್ಲಿ ಇಲ್ಲಿಂದ ಜಾಗ ಖಾಲಿ ಮಾಡಿ ಎಂದು ವಾರ್ನಿಂಗ್‌ ನೀಡಿದರು.

ಬರೀ ಗಿಳಿ ಪಾಠ ಹೇಳುವುದು ಮೊದಲು ಬಿಡಿ. ಕರ್ತವ್ಯ ಬಡರೋಗಿಗಳ ಸಮಸ್ಯೆ ಆಲಿಸುವ ಕಡೆ ಒತ್ತು ನೀಡಿ ಎಂದು ವೈದ್ಯರಿಗೆ ತರಾಟೆಗೆ ತೆಗೆದುಕೊಂಡರು. ವೈದ್ಯರು ಮತ್ತು ಸ್ಟಾಫ್‌ನರ್ಸ್‌ಗಳು ವರ್ತನೆ ಬದಲಾವಣೆ ಮಾಡಿಕೊಳ್ಳಿ. ಇಲ್ಲವಾದರೇ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಗುಡುಗಿದ ಅವರು, ಆಸ್ಪತ್ರೆಯ ಒಳರೋಗಿಗಳು ಚಿಕಿತ್ಸೆ ಪಡೆಯುವ ಕೊಠಡಿ ಪರಿಶೀಲಿಸಿ ಸಲಹೆ ನೀಡಿದರು.

ಈ ವೇಳೆ ಎಪಿಎಂಸಿ ಅಧ್ಯಕ್ಷ ಪ್ರಕಾಶ ಪಾಟೀಲ್‌ ಜೇರಬಂಡಿ, ಮಂಡಲ ಅಧ್ಯಕ್ಷ ಜಂಬಣ್ಣ ನೀಲಗಲ್‌, ಸತೀಶ ಬಳೆ ಜಾಜಿ, ಬಸವರಾಜ ಅಕ್ಕರಕಿ, ವೈದ್ಯರಾದ ಶಿವಾನಂದ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next