Advertisement

ಗೋವಾ ಎಸ್‌ಐಟಿಯಿಂದ ಸೈಲ್‌ ವಿಚಾರಣೆ

07:30 AM May 04, 2018 | Team Udayavani |

ಪಣಜಿ: ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿ ಸಿದಂತೆ ಕಾರವಾರ ಶಾಸಕ ಸತೀಶ್‌ ಸೈಲ್‌ರನ್ನು ಬುಧವಾರ ಗೋವಾ ಎಸ್‌ಐಟಿ ತಂಡ ಸುಮಾರು 2 ತಾಸು ವಿಚಾರಣೆ ನಡೆಸಿದೆ.

Advertisement

ವಿಚಾರಣೆ ಪೂರ್ಣಗೊಳ್ಳದ ಕಾರಣ ಅವರನ್ನು ಮತ್ತೆ ವಿಚಾರಣೆಗೆ ಆಗಮಿಸುವಂತೆ ಎಸ್‌ಐಟಿ ತನಿಖಾಧಿ ಕಾರಿಗಳು ಸೂಚಿಸಿದ್ದಾರೆ.
ಗೋವಾದಲ್ಲಿ 2007ರಿಂದ 2012ರವರೆಗೆ ಸುಮಾರು 35,000 ಕೋಟಿ ರೂ.ಗಳ ಅಕ್ರಮ ಗಣಿಗಾರಿಕೆ ನಡೆದಿದೆ. ಅಕ್ರಮ ಗಣಿಗಾರಿಕೆ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ಸತೀಶ್‌ ಸೈಲ್‌ ನಡೆಸಿರುವ ವ್ಯವಹಾರದ ಸಂಪೂರ್ಣ ಟ್ರಾÂಕ್‌ ಗೋವಾ ಎಸ್‌ಐಟಿ ತನಿಖಾ ತಂಡಕ್ಕೆ ಲಭಿಸಿದೆ ಎನ್ನಲಾಗಿದೆ.

ಸತೀಶ್‌ ಸೈಲ್‌ ಬುಧವಾರ ಸಂಜೆ 4ರಿಂದ 6ರವರೆಗೆ ಗೋವಾ ಎಸ್‌ಐಟಿ ತಂಡದ ವಿಚಾರಣೆಗೆ ಹಾಜರಾಗಿದ್ದರು. ಅದಿರು
ವ್ಯವಹಾರಕ್ಕೆ ಸಂಬಂ ಧಿಸಿದಂತೆ ತೆರಿಗೆ ಭರಿಸದಿರುವುದು ಕಂಡು ಬಂದರೆ ಬ್ಯಾಂಕ್‌ ಖಾತೆಯಲ್ಲಿರುವ ಎಲ್ಲ ಹಣವನ್ನೂ ಸರ್ಕಾರ ಜಪ್ತಿ ಮಾಡಲಿದೆ ಎಂದು ಎಸ್‌ಐಟಿ ತಂಡವು ಸೈಲ್‌ ಅವರಿಗೆ ಸೂಚಿಸಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next