Advertisement
ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಎಸ್‌ಐಟಿ ತಂಡದ ವಿಚಾರಣೆಗೆ ಸತೀಶ್ ಸೈಲ್ ಸೋಮವಾರ ಹಾಜರಾಗುವಂತೆ ಮೊದಲ ಸಮನ್ಸ್‌ನಲ್ಲಿ ಸೂಚಿಸಲಾಗಿತ್ತು. ಆದರೆ ಸೋಮವಾರ ಅವರು ವಿಚಾರಣೆಗೆ ಹಾಜರಾಗದ ಕಾರಣ ಇದೀಗ ಮತ್ತೂಂದು ಸಮನ್ಸ್ ಜಾರಿಗೊಳಿಸಲಾಗಿದ್ದು ಏ.13ರಂದು ಹಾಜರಾಗುವಂತೆ ಸೂಚಿಸಲಾಗಿದೆ. ಶಾಸಕ ಸತೀಶ್ ಸೈಲ್, ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಭಾಗಿಯಾಗಿರುವುದು ಎಸ್‌ಐಟಿ ತಂಡಕ್ಕೆ ಪುರಾವೆ ಲಭಿಸಿದೆ ಎನ್ನಲಾಗಿದೆ. ವಿಶೇಷವಾಗಿ ಅದಿರು ರಪು¤ ಪ್ರಕರಣದಲ್ಲಿ ಅವರ ಸಹಭಾಗವಿದೆ ಎನ್ನಲಾಗಿದೆ. ಇದೀಗ ಎರಡನೇ ಬಾರಿ ಸೈಲ್ ವಿರುದ್ಧ ಸಮನ್ಸ್ ಜಾರಿಗೊಳಿಸಲಾಗಿದೆ. ಮೂರು ಬಾರಿ ಸಮನ್ಸ್ ಜಾರಿಗೊಂಡ ನಂತರ ಸೈಲ್ ವಿಚಾರಣೆಗೆ ಹಾಜರಾಗದಿದ್ದರೆ ಬಂಧನಕ್ಕೊಳಗಾಗುವ ಸಾಧ್ಯತೆಯಿದೆ. ಮಲ್ಲಿಕಾರ್ಜುನ್ ಶಿಪ್ಪಿಂಗ್ ಪ್ರೈ.ಲಿ ಎಂಬ ರಪು¤ದಾರ ಕಂಪನಿಗೆ ಸತೀಶ್ ಸೈಲ್ ಸಂಚಾಲಕರಾಗಿದ್ದಾರೆ. Advertisement
ಶಾಸಕ ಸತೀಶ್ ಸೈಲ್‌ಗೆ ಗೋವಾ ಎಸ್‌ಐಟಿ ಸಮನ್ಸ್
06:40 AM Apr 10, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.