Advertisement

ನಾಲ್ಕು ಗಂಟೆ ನಿಂತು ಶಾಸಕಿ ಪ್ರತಿಭಟನೆ

03:47 PM Sep 20, 2020 | Suhan S |

ಕೋಲಾರ: ಕೆಜಿಎಫ್‌ ಶಾಸಕಿ ರೂಪಕಲಾ ಸತತ ನಾಲ್ಕು ಗಂಟೆಗಳ ಕಾಲ ಬಿಸಿಲು ಮಳೆ ಲೆಕ್ಕಿಸದೆ ಡಿಸಿ ಕಚೇರಿ ಮುಂದೆ ಏಕಾಂಗಿಯಾಗಿ ಬ್ಯಾನರ್‌ ಹಿಡಿದು ಪ್ರತಿಭಟನೆ ನಡೆಸಿ ಕೆಜಿಎಫ್ ಅಶೋಕ ರಸ್ತೆ ಅಗಲೀಕರಣಕ್ಕೆ ಒತ್ತಾಯಿಸಿದ ಘಟನೆ ಶನಿವಾರ ಜರುಗಿತು. ಕೆಜಿಎಫ್ ಅಶೋಕ ರಸ್ತೆ ಅಗಲೀಕರಣ ಕಾಮಗಾರಿ ಆರಂಭಿಸಲು ಜಿಲ್ಲಾಡಳಿತ ಹಾಗೂ ಲೋಕೋಪಯೋಗಿ ಇಲಾಖೆ ವಿಳಂಬ ಧೋರಣೆ ಅನುಸರಿಸುತ್ತಿರುವುದನ್ನು ಖಂಡಿಸಿ ವಿನೂತನವಾಗಿ ಪ್ರತಿಭಟನೆ ನಡೆಸಿದರು.

Advertisement

ಬೆಳಗ್ಗೆ 10.30ರ ಸುಮಾರಿಗೆ ಜಿಲ್ಲಾಡಳಿತ ಭವನಕ್ಕೆ ಆಗಮಿಸಿದ ಶಾಸಕಿ ಫ್ಲೆಕ್ಸ್‌ ಹಿಡಿದು ಏಕಾಂಗಿಯಾಗಿ ನಿಂತರು. ಪ್ರತಿಭಟನೆ ಆರಂಭದಲ್ಲಿ ಬಿಸಿಲಿತ್ತಾದರೂ, ಮಧ್ಯಾಹ್ನ 1 ರ ಸಮಯದಲ್ಲಿ ಮಳೆ ಬಂದಾಗಲೂ ಶಾಸಕಿ ಜಾಗಬಿಟ್ಟು ತೆರಳಲಿಲ್ಲ. ಮಳೆಯಲ್ಲಿ ನೆನೆದುಕೊಂಡೇ ಪ್ರತಿಭಟನೆ ಮುಂದುವರಿಸಿದರು.

ಈ ವೇಳೆ ಮಾತನಾಡಿದ ಶಾಸಕಿ, ಕೆಜಿಎಫ್‌ನ ಅಶೋಕ ರಸ್ತೆ ಅಗಲೀಕರಣ ಮಾಡಲು ಕಳೆದ ನಾಲ್ಕೈದು ವರ್ಷ ಅಧಿಕಾರಿಗಳುಮುಂದಾಗದೇಇರುವಕಾರಣಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ಕಳೆದು ಆರು ತಿಂಗಳ ಹಿಂದೆ ತಮ್ಮ ಕ್ಷೇತ್ರದ ಜನರೊಂದಿಗೆ ಲೋಕೋಪಯೋಗಿ ಇಲಾಖೆ ಕಚೇರಿ ಮುಂಭಾಗಪ್ರತಿಭಟನೆನಡೆಸಿದ್ದರೂ,ರಸ್ತೆಅಗಲೀಕರಣ ಮಾಡುವುದಕ್ಕೆ ಈವರೆಗೂ ಅಧಿಕಾರಿಗಳು ಮುಂದಾಗಿಲ್ಲ ಎಂದು ಜಿಲ್ಲಾಡಳಿತ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಅನುಮೋದನೆ ಸಿಕ್ಕರೂ ಪ್ರಾರಂಭಿಸಿಲ್ಲ: ಅಶೋಕ ರಸ್ತೆ ಅಗಲೀಕರಣ ಕಾಮಗಾರಿಗೆ ಅನುಮೋದನೆ ಸಿಕ್ಕರು ಜಿಲ್ಲಾಡಳಿತ ಹಾಗೂ ಲೋಕೋಪಯೋಗಿ ಇಲಾಖೆ ಆಧಿಕಾರಿಗಳು ನಿರ್ಲಕ್ಷ್ಯದಿಂದ 6 ವರ್ಷವಾದರೂ ಇನ್ನೂ ಪ್ರಾರಂಭವಾಗಿಲ್ಲ. ಇನ್ನು ಸೋಮವಾರದಿಂದ ಶುರುವಾಗುವ ವಿಧಾನಸಭೆಯ ಅಧಿವೇಶನಕ್ಕೂ ಗೈರಾಗಲು ತೀರ್ಮಾನಿಸ ಲಾಗಿದ್ದು, ಸಮಸ್ಯೆ ಇತ್ಯರ್ಥವಾಗುವ ದಿನಾಂಕ ನಿಗಧಿಪಡಿಸುವವರೆಗೂ ಪ್ರತಿಭಟನೆ ಕೈಬಿಡದಿರಲು ನಿರ್ಧರಿಸಿರುವುದಾಗಿ ತಿಳಿಸಿದರು.

ಸದ್ಯ ಕೋವಿಡ್‌-19 ಇರುವ ಕಾರಣ ಏಕಾಂಗಿಯಾಗಿ ಮೌನ ಪ್ರತಿಭಟನೆ ನಡೆಸುತ್ತಿದ್ದು ರಸ್ತೆ, ಅಗಲೀಕರಣ ಗಂಭೀರತೆಯನ್ನು ಜಿಲ್ಲಾಧಿಕಾರಿಗಳಿಗೆ ಅರ್ಥ ಮಾಡಿಸುವ ಪ್ರಯತ್ನ ಇದಾಗಿದೆ. ರಸ್ತೆ ಅಗಲೀಕರಣ ವಿಚಾರದಲ್ಲಿ ಕ್ಷೇತ್ರದ ಜನರು ನನ್ನ ಮೇಲೆ ಒತ್ತಡ ಹೇರುತ್ತಿದ್ದಾರೆ. ಅವರ ಪರವಾಗಿ ನಾನು ಏಕಾಂಗಿಯಾಗಿ ಹೋರಾಟ ನಡೆಸುತ್ತಿದ್ದೇನೆ. ಅಭಿವೃದ್ಧಿ ವಿಷಯದಲ್ಲಿ ಯಾರೂ ರಾಜಕೀಯ ಮಾಡಬಾರದು ಎಂದು ಎಚ್ಚರಿಸಿದರು.

Advertisement

ನಾಲ್ಕು ಗಂಟೆ ನಂತರ ಶಾಸಕಿ ಭೇಟಿಯಾದ ಡೀಸಿ :  ಶಾಸಕಿ ಒಂಟಿಯಾಗಿ ನಿಂತು ತಮ್ಮ ಕಚೇರಿ ಮುಂದೆ ಪ್ರತಿಭಟನೆ ಆರಂಭಿಸಿದರೂ ಡಿಸಿ ಸತ್ಯಭಾಮ ನಾಲ್ಕು ಗಂಟೆಗಳ ನಂತರ ಆಗಮಿಸಿದ್ದು ಚರ್ಚೆಗೆ ಗ್ರಾಸವಾಯಿತು. ಬೆಳಗ್ಗೆ 10.30ರ ಸುಮಾರಿಗೆ ಕೆಜಿಎಫ್‌ ಶಾಸಕಿ ಪ್ರತಿಭಟನೆ ಆರಂಭಿಸಿದಾಗ ಜಿಲ್ಲಾಧಿಕಾರಿ ಸತ್ಯಭಾಮ ನೇತƒತ್ವದಲ್ಲಿ ಆಶ್ರಯ ಸಮಿತಿ ಸಭೆಯನ್ನು ಜಿಲ್ಲಾಡಳಿತ ಭವನದಲ್ಲಿ ಆಯೋಜಿಸಲಾಗಿತ್ತು. ಪ್ರತಿಭಟನೆಯ ವಿಷಯ ತಿಳಿಯುತ್ತಿದ್ದಂತೆಯೇ ನಿರ್ಮಿತಿ ಕೇಂದ್ರಕ್ಕೆ ಸಭೆ ಸ್ಥಳಾಂತರಿಸಲಾಯಿತು. ಮಧ್ಯಾಹ್ನದ ವೇಳೆಗೆ ಸಭೆ

ಮುಗಿಸಿಕೊಂಡು, ಆಗಮಿಸಿ ಶಾಸಕಿಯೊಂದಿಗೆ ಚರ್ಚಿಸಿ ಅಧಿವೇಶನ ಮುಗಿದ ಬಳಿಕ ಸಮಸ್ಯೆ ಬಗೆಹರಿಸಲಾಗುವುದು. ಆದರೆ ದಿನಾಂಕ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. ಶಾಸಕಿ ಪ್ರತಿಭಟನೆ ನಡೆಸಲು ಆರಂಭಿಸುತ್ತಿದ್ದಂತೆಯೇ ಈ ಕೆಲಸ ಮಾಡಬಹುದಿತ್ತಾದರೂ ತಮ್ಮ ಗಮನಕ್ಕೆ ಬಂದೇ ಇಲ್ಲವೆಂಬಂತೆ ಸುಮಾರು 4 ಗಂಟೆಗಳು ಶಾಸಕಿಯನ್ನು ಡಿಸಿ ಕಚೇರಿ ಮುಂದೆ ನಿಲ್ಲುವಂತೆ ವರ್ತಿಸಿರುವುದು ಟೀಕೆಗೆ ಗುರಿಯಾಯಿತು.

Advertisement

Udayavani is now on Telegram. Click here to join our channel and stay updated with the latest news.

Next