Advertisement
ಹೊನ್ನಾಳಿಯಲ್ಲಿ ಸೋಮವಾರ ರಸ್ತೆ ತಡೆ ನಡೆಸುತ್ತಿದ್ದ ರೇಣುಕಾಚಾರ್ಯ ಹಾಗೂ ಬಿಜೆಪಿ ಕಾರ್ಯಕರ್ತರನ್ನು ಮುನ್ನೆಚ್ಚರಿಕೆ ಕ್ರಮವಾಗಿ ವಶಕ್ಕೆ ಪಡೆದ ಪೊಲೀಸರು, ಮಲೇಬೆನ್ನೂರು ನೀರಾವರಿ ನಿಗಮದ ಕಚೇರಿ ಆವರಣದಲ್ಲಿ ಬಿಡುಗಡೆ ಮಾಡಲು ಮುಂದಾದರು. ಆದರೆ, ಜಿಲ್ಲಾಡಳಿತದ ಈ ಕ್ರಮವನ್ನು ರೇಣುಕಾಚಾರ್ಯ ಖಂಡಿಸಿ ಸ್ಥಳದಲ್ಲಿಯೇ ಪ್ರತಿಭಟನೆ ಮುಂದುವರಿಸಿದ್ದಾರೆ. ಮರಳು ಸಮಸ್ಯೆ ಹಾಗೂ ಇತರ ಬೇಡಿಕೆಗಳ ಈಡೇರಿಕೆಗಾಗಿ ನ.19 ರಂದು ತುಂಗಭದ್ರಾ ನದಿಗಿಳಿದು ಮರಳು ತುಂಬಿದ್ದ ರೇಣುಕಾಚಾರ್ಯ ನಂತರ ನ.27ರಂದು ಉಪವಾಸ ಸತ್ಯಾಗ್ರಹ ಕೈಗೊಂಡು ಅಸ್ವಸ್ಥರಾಗಿದ್ದರು. ಮಾಜಿ ಸಿಎಂ ಯಡಿಯೂರಪ್ಪ, ಸಂಸದ ಸಿದ್ದೇಶ್ವರ್ ಅವರ ಮನವೊಲಿಕೆಯಿಂದ ಉಪವಾಸ ಸತ್ಯಾಗ್ರಹ ಕೈಬಿಟ್ಟಿದ್ದರು.