ಗಂಗಾವತಿ: ಪ್ರತಿ ವರ್ಷದಂತೆ ಈ ವರ್ಷವೂ ತಾಲೂಕಿನ ಕಿಷ್ಕಿಂಧಾ ಅಂಜನಾದ್ರಿಯಲ್ಲಿ ಗುರುವಾರದಂದು ಶಾಸಕ ಪರಣ್ಣ ಮುನವಳ್ಳಿ ಅಂಜನಿಪುತ್ರನ ವ್ರತಾಚರಣೆಗೆ ಅಂಜನಾದ್ರಿ ಪರ್ವತಕ್ಕೆ ಬೇಟಿ ನೀಡಿ ಹನುಮನ ದರ್ಶನ ಪಡೆದು, ಬೆಟ್ಟದ ಕೆಳಗಿನ ಹನುಮನ ಪಾದಗಟ್ಟೆಯಲ್ಲಿ ಪೂಜಾ ವಿಧಿವಿಧಾನಗಳ ಮೂಲಕ ಅರ್ಚಕರಿಂದ ಹನುಮ ಮಾಲಾಧಾರಣೆ ಮಾಡಿದರು.
ಬನಂತರದಲ್ಲಿ ಡಿ.5 ರಂದು ರಾಜ್ಯದ ವಿವಿದ ಜಿಲ್ಲೆಗಳಿಂದ ಅಂಜನಾದ್ರಿ ಪರ್ವತಕ್ಕೆ, ಆಗಮಿಸುವ ಹನುಮ ಮಾಲಾಧಾರಿಗಳ ಮಾಲಾ ವಿಸರ್ಜನಾ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ಪೂರ್ವ ಸಿದ್ದತೆ ಕೈಗೊಂಡಿದ್ದು, ಗಂಗಾವತಿಯಲ್ಲಿ ಆಯೋಜಿಸಿರುವ ಹನುಮಮಾಲಾಧಾರಿಗಳ ಶೋಭಾಯಾತ್ರೆ ನಡೆಯುವ ರಸ್ತೆಗಳ ಸ್ವಚ್ಛತೆ ಹಾಗೂ ಇತರೆ ಕಾರ್ಯಗಳ ಬಗ್ಗೆ ನಗರಸಭೆ ಪೌರಾಯುಕ್ತ ವಿರುಪಾಕ್ಷ ಮೂರ್ತಿ ಅವರೊಂದಿಗೆ ಚರ್ಚಿಸಿ ವಿಳಂಬ ಮಾಡದೆ ಬೇಗನೆ ಸೂಕ್ತ ವ್ಯವಸ್ಥೆ ಕೈಗೊಳ್ಳಲು ತಿಳಿಸಿದರು.
ಈ ಸಂಧರ್ಭದಲ್ಲಿ ಮುಖಂಡ ಸಂತೋಷ್ ಕೆಲೋಜಿ, ಹಿಂದೂ ಜಾಗರಣ ವೇದಿಕೆಯ ವಿನಯ್ ಪಾಟೀಲ್, ನಗರಸಭೆ ಸದಸ್ಯರಾದ ಉಮೇಶ್ ಸಿಂಗನಾಳ, ರಮೇಶ್ ಚೌಡಕಿ ಹಾಗೂ ಭಕ್ತಾದಿಗಳು, ಸಿಬ್ಬಂದಿಗಳಿದ್ದರು.