ಚಿತ್ರದುರ್ಗ: ಹೆದ್ದಾರಿ ನಿರ್ಮಾಕ್ಕಾಗಿ ಗ್ರಾಮೀಣಭಾಗದ ರಸ್ತೆಗಳಲ್ಲಿ ಮಣ್ಣು ಸಾಗಿಸಿ ರಸ್ತೆ ಹಾಳುಗೆಡವಿದ ಗುತ್ತಿಗೆದಾರರು ಹಾಗೂ ಅಧಿಕಾರಿಗಳನ್ನು ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಶನಿವಾರ ತರಾಟೆಗೆ ತೆಗೆದುಕೊಂಡರು.
ಪಿಎಸ್‌ಸಿ ಇನೊಧೀಟೆಕ್ ಕಂಪನಿಯಿಂದ ರಾಷ್ಟ್ರೀಯ ಹೆದ್ದಾರಿ-4ರಲ್ಲಿ ನಡೆಯುತ್ತಿರುವ ಕಾಮಗಾರಿಗೆ ಇಂಗಳದಾಳ್, ಲಂಬಾಣಿಹಟ್ಟಿ,ಅಮೃತ ಆಯುರ್ವೇದಿಕ್ ಕಾಲೇಜು ಹಾಗೂ ಟೀಚರ್ಸ್ ಕಾಲನಿಯ ಗುಡ್ಡದಿಂದ ಮಣ್ಣು ಸಾಗಿಸಲಾಗುತ್ತಿದೆ. ಇಲ್ಲಿ ಮಿತಿ ಮೀರಿ ಮಣ್ಣು ತುಂಬಿಕೊಂಡು ಲಾರಿಗಳು ನಿತ್ಯವೂ ಸಂಚರಿಸುವುದರಿಂದ ರಸ್ತೆಗಳು ಹಾಳಾಗಿವೆ ಎಂದು ಶುಕ್ರವಾರ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದರು.
ಶನಿವಾರ ಪರಿಶೀಲಿಸಲು ಅಧಿಕಾರಿಗಳೊಂದಿಗೆ ಸ್ಥಳಕ್ಕೆ ತೆರಳಿದ ಶಾಸಕರು, ರಸ್ತೆ ನಿರ್ಮಾಣ ಮಾಡಿಕೆಲ ದಿನಗಳಷ್ಟೇ ಕಳೆದಿವೆ. ಇನ್ನೂ ಬಿಲ್ ಕೂಡ ಆಗಿಲ್ಲ. ಆಗಲೇ ಹಾಳುಗೆಡವಿದ್ದಾರೆ. 10 ಟನ್ ಮಿತಿಹೇರಿಕೊಂಡು ಓಡಾಡುವ ಗ್ರಾಮೀಣ ರಸ್ತೆಗಳಲ್ಲಿ50 ಟನ್ ಮಣ್ಣು ತುಂಬಿಕೊಂಡು ಓಡಾಡಿದರೆರಸ್ತೆಗಳು ಇರುತ್ತವಾ ಎಂದು ಪ್ರಶ್ನಿಸಿದರು. ರಸ್ತೆ ಕಾಮಗಾರಿಗೆ ಮಣ್ಣು ತೆಗೆದುಕೊಂಡು ಹೋಗುವುದಕ್ಕೆ ನನ್ನ ತಕರಾರಿಲ್ಲ. ಆದರೆ ಅಗತ್ಯಕ್ಕಿಂತ ಹೆಚ್ಚು ತೂಕದ ಮಣ್ಣು ಸಾಗಿಸಿ ರಸ್ತೆಗಳನ್ನು ಹಾಳು ಮಾಡಲಾಗಿದೆ. ಮೂರು ತಿಂಗಳ ಹಿಂದೆ ನಿರ್ಮಿಸಿದ್ದ ರಸ್ತೆಗಳು ಈಗ ಹಾಳಾಗಿದ್ದು, ಮತ್ತೆ ರಸ್ತೆ ನಿರ್ಮಾಣಕ್ಕೆ ಎಲ್ಲಿಂದ ಹಣ ತರಬೇಕು. ಇಲ್ಲಿ ಲಾರಿ ಓಡಾಡಲು ಅನುಮತಿ ನೀಡಿದ್ದು ಯಾರು ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ ಹಾಗೂ ತಹಶೀಲ್ದಾರ್‌ರನ್ನು ಕೇಳಿದರು. ಆಗ ಅನುಮತಿ ನೀಡಿಲ್ಲ ಎನ್ನುವ ವಿಷಯ ಬೆಳಕಿಗೆ ಬಂತು. ರಸ್ತೆ ಹಾಳು ಮಾಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸಿ. ಆಗಿರುವ ನಷ್ಟವನ್ನು ಅವರಿಂದಲೇಭರಿಸುವಂತೆ ಮಾಡಿ ಎಂದು ಪೊಲೀಸರು ಹಾಗೂ ಅಧಿ ಕಾರಿಗಳಿಗೆ ಶಾಸಕರು ಸೂಚಿಸಿದರು.
ಈ ವೇಳೆ ರಸ್ತೆ ಗುತ್ತಿಗೆಆರರು, ಇಂಗಳದಾಳ್, ಕಾಪರ್ ಮೈನ್ಸ್, ಲಂಬಾಣಿಹಟ್ಟಿ, ಕುರುಮರಡಿಕೆರೆ, ಕೆನ್ನೆಡಲು ಗ್ರಾಮಸ್ಥರು ಹಾಜರಿದ್ದರು
ರಸ್ತೆ ಮಾಡಿ ವರ್ಷದೊಳಗೆ ಹಾಳಾದರೆ ಜನರಿಗೆ ಏನು ಹೇಳಬೇಕು. ಎಲ್ಲೆಲ್ಲಿ ರಸ್ತೆಮಾಡಬೇಕು, ಅನುದಾನ ಎಲ್ಲಿಂದ ತರಲಿ? –
ಜಿ.ಎಚ್. ತಿಪ್ಪಾರೆಡ್ಡಿ, ಶಾಸಕರು