Advertisement

ಉಕ್ರೇನ್‌ನಿಂದ ಮರಳಿದ ವಿದ್ಯಾರ್ಥಿಗಳ ನೆರವಿಗೆ ಸರಕಾರ ಬರಲಿ ಶಾಸಕ ಮಂಜುನಾಥ್ ಮನವಿ

12:16 PM Mar 07, 2022 | Team Udayavani |

ಹುಣಸೂರು: ಉಕ್ರೇನಿನಲ್ಲಿ ವೈದ್ಯ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದ್ದು, ಸರಕಾರ ಅವರ ಭವಿಷ್ಯದ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕೆಂದು ಶಾಸಕ ಎಚ್.ಪಿ.ಮಂಜುನಾಥ್ ಮನವಿ ಮಾಡಿದರು.

Advertisement

ಭಾನುವಾರ ಸಂಜೆ ಉಕ್ರೇನ್‌ನಿಂದ ಹಿಂದಿರುಗಿದ ವೈದ್ಯ ವಿದ್ಯಾರ್ಥಿ ಪ್ರಜ್ವಲ್ ಮನೆಗೆ ಭೇಟಿ ಇತ್ತು, ಅಲ್ಲಿನ ಸಂಕಷ್ಟದ ಪ್ರಯಾಣದ ಬಗ್ಗೆ ಮಾಹಿತಿ ಪಡೆದು, ಪೋಷಕರ ದುಗುಡಕ್ಕೆ ಸ್ಪಂದಿಸಿ, ಉದಯವಾಣಿಯೊಂದಿಗೆ ಮಾತನಾಡಿದ ಶಾಸಕರು ಯುದ್ದ ಮುಗಿದರೂ ಮತ್ತೆ ಉಕ್ರೇನ್‌ಗೆ ಹೋಗುವುದು ಕಷ್ಟ, ಹೀಗಾಗಿ ಸರಕಾರ ವೈದ್ಯ ವಿದ್ಯಾರ್ಥಿಗಳ ಭವಿಷ್ಯವನ್ನು ಗಂಭೀರವಾಗಿ ಪರಿಗಣಿಸಿ, ಸ್ಥಳೀಯವಾಗಿ ಓದು ಮುಂದುವರೆಸಲು ಅವಕಾಶ ನೀಡುವುದು ಅತ್ಯವಶ್ಯವಾಗಿದೆ ಎಂದರು.

ಮಾದ್ಯಮಗಳಲ್ಲಿ ಹೇಳೂವುದು ನಿಲ್ಲಿಸಲಿ:

ಬಹುತೇಕರಲ್ಲಿ ಉಳ್ಳವರೇ ಉಕ್ರೇನ್‌ಗೆ ಹೋಗಿದ್ದಾರೆಂಬ ತಪ್ಪು ಅಭಿಪ್ರಾಯವಿದೆ. ಸಚಿವರುಗಳು ಸಹ ಟಿವಿಗಳಲ್ಲಿ ಬೇಕಾಬಿಟ್ಟಿ ಹೇಳಿಕೆ ನೀಡುತ್ತಿರುವುದು ಬೇಸರ, ಪ್ರಜ್ವಲ್ ನಂತರವರು ಓದುವ ಆಸೆಯಿಂದ ವಿದೇಶಕ್ಕೆ ಹೋಗಿದ್ದಾರೆಂಬುದನ್ನು ಮನಗಾಣಬೇಕು.

 ಸಿದ್ದರಾಮಯ್ಯಗೆ ಮನವಿ:

Advertisement

ಪ್ರಜ್ವಲ್ ಒಬ್ಬ ಸಾಮಾನ್ಯನ ಮಗನಾಗಿದ್ದು, ಈತನೂ ಸೇರಿದಂತೆ ಎಲ್ಲ ವೈದ್ಯ ವಿದ್ಯಾರ್ಥಿಗಳ ಸಂಕಷ್ಟವನ್ನು ಸಿದ್ದರಾಮಯ್ಯರಿಗೆ ಮನವರಿಕೆ ಮಾಡಿಕೊಟ್ಟು, ಮಾ.೭ರ ಸೋಮವಾರ ಸದನದಲ್ಲಿ ಪ್ರಸ್ತಾಪಿಸಲು ಮನವಿ ಮಾಡುವುದಾಗಿ ಭರವಸೆ ಇತ್ತು. ಪ್ರಜ್ವಲ್‌ನ ಓದಿಗೆ ತಾವು ಎಲ್ಲ ರೀತಿಯ ಸಹಕಾರ ನೀಡುವುದಾಗಿ ಪೋಷಕರಿಗೆ ಭರವಸೆ ಇತ್ತರು.

ಈ ವೇಳೆ ಉದ್ಯಮಿ ರಾಜುಶಿವರಾಜೇಗೌಡ, ಕಾಂಗ್ರೆಸ್ ಮಾಜಿ  ಅಧ್ಯಕ್ಷ ಬಸವರಾಜು, ಮುಖಂಡರಾದ ರಾಘು, ಮಂಟಿಕೊಪ್ಪಲುಕುಮಾರ್, ರಾಜೇಗೌಡ, ರಾಜಶೇಖರ್, ಗಣೇಶ್, ಪ್ರಾಚಾರ್ಯ ರವಿದೀಪಕ್ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next