Advertisement

ಪರಿಹಾರ ಧನ ಸದ್ಬಳಕೆಗೆ ಶಾಸಕ ಖಂಡ್ರೆ ಸಲಹೆ

02:52 PM May 27, 2022 | Team Udayavani |

ಭಾಲ್ಕಿ: ತಾಲೂಕಿನಲ್ಲಿ ಈಚೆಗೆ ಸಿಡಿಲಿಗೆ ಮೃತಪಟ್ಟ ರೈತ ಮಹಿಳೆ ಕುಟುಂಬಕ್ಕೆ ಶಾಸಕ ಈಶ್ವರ ಖಂಡ್ರೆ ಅವರು 5 ಲಕ್ಷ ರೂ. ಪರಿಹಾರ ಧನದ ಚೆಕ್‌ ವಿತರಿಸಿದರು.

Advertisement

ಖಟಕ್‌ ಚಿಂಚೋಳಿ ಗ್ರಾಮದ ಮೃತ ರೈತ ಮಹಿಳೆ ಪಾರ್ವತಿ ನಂದಕುಮಾರ ಕಂಠಿ(40) ನಿವಾಸಕ್ಕೆ ಗುರುವಾರ ಭೇಟಿ ನೀಡಿದ ಅವರು, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿ ಸರಕಾರದಿಂದ ಮಂಜೂರಾದ ಪರಿಹಾರ ಧನದ ಚೆಕ್‌ ವಿತರಿಸಿದರು.

ಬಳಿಕ ಮಾತನಾಡಿದ ಅವರು, ರೈತ ಮಹಿಳೆ ಪಾರ್ವತಿ ನಂದಕುಮಾರ ಅವರು ಹೊಲದಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ಸಂದರ್ಭದಲ್ಲಿ ಸಿಡಿಲಿನ ಬಡಿತಕ್ಕೆ ಸ್ಥಳದಲ್ಲಿಯೇ ಮೃತರಾಗಿರುವ ವಿಷಯ ತಿಳಿದು ಮನಸ್ಸಿಗೆ ಆಘಾತ ತರಿಸಿತು. ತಕ್ಷಣಕ್ಕೆ ಗ್ರಾಮದ ಮುಖಂಡರಿಂದ ಮೃತರ ವಿವರ ಪಡೆದು ತಾಲೂಕು ಆಡಳಿತದ ಅಧಿಕಾರಿಗಳಿಗೆ ಸೂಚಿಸಿ, ಸರಕಾರದ ಮಟ್ಟದಲ್ಲಿ ನಿರಂತರ ಪ್ರಯತ್ನಿಸಿ ಕೇವಲ 10 ದಿನದೊಳಗೆ ಮೃತರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಕೊಡಿಸುವ ಪ್ರಯತ್ನ ಮಾಡಿದ್ದೇನೆ. ಪರಿಹಾರ ಧನವನ್ನು ಶಿಕ್ಷಣ, ಮದುವೆ ಮತ್ತಿತರ ಒಳ್ಳೆಯ ಕೆಲಸಕ್ಕೆ ಬಳಸಿಕೊಳ್ಳುವಂತೆ ಸಲಹೆ ನೀಡಿದರು.

ತಹಶೀಲ್ದಾರ್‌ ಕೀರ್ತಿ ಚಾಲಕ್‌, ಜಿಲ್ಲಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಪಾಟೀಲ್‌ ಮುಗನೂರ್‌, ಗ್ರಾಪಂ ಅಧ್ಯಕ್ಷರು, ಸದಸ್ಯರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next