Advertisement

ಮಾಜಿ ಶಾಸಕ ಸುರೇಶ್ ಬಾಬು ಥರ್ಡ್ ಕ್ಲಾಸ್ ರಾಜಕೀಯ ಮಾಡುವುದು ಬಿಡಲಿ : ಶಾಸಕ ಗಣೇಶ್ ವಾಗ್ದಾಳಿ

03:35 PM Jul 23, 2022 | Team Udayavani |

ಕುರುಗೋಡು: ಮಾಜಿ ಶಾಸಕ ಸುರೇಶ್ ಬಾಬು ಥರ್ಡ್ ಕ್ಲಾಸ್ ರಾಜಕೀಯ ಮಾಡುವುದು ಬಿಡಲಿ. ಕ್ಷೇತ್ರದ ಜನರಿಗೆ ಸುಳ್ಳು ಸುದ್ದಿ ನೀಡಿ ದಿಕ್ಕು ತಪ್ಪಿಸುವ ಹುನ್ನಾರ ನಿಲ್ಲಿಸಲಿ ಎಂದು ಹಾಲಿ ಶಾಸಕ ಜೆ. ಎನ್. ಗಣೇಶ್ ಹೇಳಿದರು.

Advertisement

ಪಟ್ಟಣದ ಶಾಸಕರ ಜನ ಸಂಪರ್ಕ ನಿಲಯದಲ್ಲಿ ಕರೆಯಲಾಗಿದ್ದ ಪತ್ರಿಕೆ ಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಕಾಲುವೆಗಳ ಮೇಲೆ ಹೋಗಿ ರೈತರಿಗೆ ನೀರು ಬಿಡುವುದಕ್ಕೆ ಹೋದ್ರೆ ನಮ್ಮನ್ನು ನೋಡಿ ಕಾಲುವೆ ಮೇಲೆ ಬರೋದು. ಕಾರ್ಯಕರ್ತರ ಮದುವೆಗೆ ಹೋದ್ರೆ ಬರೋದು, ಕ್ಷೇತ್ರದಲ್ಲಿ ಮನೆ ಮಾಡಿದ್ರೂ ತಾನು ಮನೆ ಮಾಡುವುದು ಅದಕ್ಕಾಗಿ ಸುರೇಶ್ ಬಾಬು ಕಾಪಿ ರಾಜಕೀಯ ಮಾಡುವುದು ಕೈ ಬಿಡಲಿ ಎಂದರು.

ತಮ್ಮಂಗೆ ಸುಳ್ಳು ರಾಜಕೀಯ ಮಾಡುವುದು, ಕಾರ್ಯಕರ್ತರ ಹಣ ಕಬಳಿಸುವುದು, ಬೇನಾಮಿ ಆಸ್ತಿ ಮಾಡುವುದು ನಾವು ಕಲಿತಿಲ್ಲ. ಅದೇ ಕಂಪ್ಲಿ ಯಲ್ಲಿ 176 ಎಕರೆ ಶುಗರ್ ಕಾರ್ಖಾನೆ ಕಬ್ಜ ಮಾಡಿದ್ದಾರೆ. ಶ್ರೀಧರ್ ಗಡ್ಡೆಯಲ್ಲಿ 30 ಎಕರೆ ಬೇನಾಮಿ ಆಸ್ತಿ ಮಾಡಿ ಅಲ್ಲಿನ ಬಿಜೆಪಿ ಕಾರ್ಯಕರ್ತರ 500 ಕೋಟಿ ಲೂಟಿ ಮಾಡಿದ್ದಾರೆ. ಅದಲ್ಲದೆ ಕ್ಷೇತ್ರದಲ್ಲಿ ಒಬ್ಬ ವ್ಯಕ್ತಿಯ ಹತ್ತಿರ 27 ಕೋಟಿ ಇಸ್ಕೊಂಡಿರುವುದು ನನ್ನ ಹತ್ತಿರ ಕಾಲ್ ರೆಕಾರ್ಡ್ ಸಮೇತ ಇದೆ. ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡುತ್ತೇನೆ ಇಲ್ಲ ಅಂದ್ರೆ ಅವರನ್ನೇ ಕರೆದು ಪತ್ರಿಕೆಗೋಷ್ಠಿ ನಡೆಸುತ್ತೇನೆ ಎಂದು ತಿಳಿಸಿದರು.

ಅಲ್ಲದೆ ಸುರೇಶ್ ಬಾಬು 1 ಕೋಟಿ 70 ಲಕ್ಷ ಬೆಲೆ ಬಾಳುವ ಕಾರಿನಲ್ಲಿ ಓಡಾಡುತ್ತಿದ್ದಾರೆ ಅಲ್ಲದೆ 8 ಪ್ಯಾಕ್ಟರಿಗಳು ಬೇನಾಮಿ ಅಸ್ತಿಯಲ್ಲಿ ನಡೆಸುತ್ತಿದ್ದಾರೆ. ಇದರಿಂದ ತಿಂಗಳಿಗೆ 70 ರಿಂದ 80 ಲಕ್ಷ ಲಾಭದಾಯಕ ಗಳಿಸುತ್ತಿದ್ದಾರೆ. ಇದೆಲ್ಲ ಸುರೇಶ್ ಬಾಬು ಗೆ ಹೇಗೆ ಬಂತು.? ಇಲ್ಲಾಂದ್ರೆ ಅವರ ಕುಟುಂಬ ಇದಕ್ಕಿಂತ ಮೊದಲು ಜಿಂದಾಲ್ ಪ್ಯಾಕ್ಟರಿಗಳನ್ನು ಏನಾದ್ರೂ ನಡೆಸುತಿದ್ರಾ ಎಂದು ಪ್ರೆಶ್ನೆ ಮಾಡಿದರು?

ಕುರುಗೋಡು ತಾಲೂಕಿನಲ್ಲಿ 30 ಎಕರೆ ಆಸ್ತಿ ಮಾಡಿ ರಿಯಲ್ ಎಸ್ಟೇಟ್ ಮಾಡುತ್ತಾನೆ ಗಣೇಶ್ ಎಂದು ಆರೋಪ ಮಾಡಿದ್ದಾರೆ. ಕುರುಗೋಡಲ್ಲಿ ನನ್ನ ಹೆಸರಿನ ಮೇಲೆ 1 ಎಕರೆ ಭೂಮಿ ಇರುವುದು ಪಹಣಿ ಸೇರಿ ದಾಖಲಾತಿ ಸಮೇತ ನೀಡಿದರೆ ರಾಜಕೀಯದಿಂದ ಹಿಂಜರಿಯುತ್ತೇನೆ ಎಂದು ಹೇಳಿದರು.

Advertisement

ಇದನ್ನೂ ಓದಿ: ಕ್ಲಸ್ಟರ್ ಮಟ್ಟದ ಶಾಲೆ ಕ್ರೀಡಾಕೂಟದಲ್ಲಿ ಗಲಾಟೆ : ಕಲ್ಲು ತೂರಾಟ, ಹಲವರಿಗೆ ಗಾಯ

ಕುರುಗೋಡು ಮತ್ತು ಕಂಪ್ಲಿ ಗೆ ಮಂಜೂರಾದ 100 ಹಾಸಿಗೆವುಳ್ಳ ಆಸ್ಪತ್ರೆ ಸಚಿವ ಬಿ. ಶ್ರೀರಾಮುಲು ಕ್ಯಾಬಿನೆಟ್ ಸಭೆಯಲ್ಲಿ ಅನುಮೋದನೆಗೊಳಿಸಿ ಅನುದಾನ ಬಿಡುಗಡೆ ಗೊಳಿಸಿದ್ದಾರೆ ಎಂದು ಹೇಳುತ್ತಿದ್ದಾರೆ, ಅದು ಡಿ. ಕೆ. ಶಿವುಕುಮಾರ್ ಜಿಲ್ಲಾ ಉಸ್ತುವಾರಿ ಮಂತ್ರಿ ಇದ್ದಾಗ ಆಗಿರೋದು ಅದಕ್ಕೆ ಸುಮಾರು 2 ವರ್ಷಗಳ ಕಾಲ ಶ್ರಮ ಪಟ್ಟಿದ್ದೇವೆ. 3 ರಿಂದ 4 ಕೋಟಿ ವೆಚ್ಚದ ಅನುದಾನ ಆದ್ರೆ ಜಿಲ್ಲಾಧಿಕಾರಿಯಿಂದ ಅನುಮೋದನೆಗೊಳ್ಳಿಸಬಹುದಿತ್ತು, ಆದ್ರೆ 20 ಕೋಟಿ ಆಗಿರುವುದರಿಂದ ಕ್ಯಾಬಿನೆಟ್ ನಲ್ಲಿ ಅನುಮೋದನೆ ಗೊಳ್ಳಬೇಕು ಅದಕ್ಕಿಂತ ಮುಂಚಿತವಾಗಿ ವಾಣಿಜ್ಯ, ಕೈಗಾರಿಕೆ, ಅರೋಗ್ಯ, ಅರಣ್ಯ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳ ಅನುಮತಿ ಸಿಗಬೇಕು ಇದಕ್ಕಾಗಿ 2 ವರ್ಷ ಶ್ರಮ ಪಟ್ಟು ಇಲಾಖೆವಾರು ತೆರಳಿದ್ದೇವೆ ಕ್ಷೇತ್ರದ ಜನರ ಅನುಕೂಲಕ್ಕೆ ಅಲ್ಲದೆ  ಆಸ್ಪತ್ರೆ ನಿರ್ಮಾಣಕ್ಕೆ ಸ್ಥಳ ದಾನಿ ಮಾಡಿರುವ ಸ್ವಾಮೀಜಿಗಳ ಹತ್ತಿರ ಸುಮಾರು ಬಾರಿ ಹೋದಾಗ 6 ಎಕರೆ ನೀಡಿದ್ದಾರೆ ಇಲ್ಲ ಅಂದ್ರೆ ಕುರುಗೋಡಲ್ಲಿ ಆಸ್ಪತ್ರೆ ಆಗುತ್ತಿರಲಿಲ್ಲ ಇವಾಗ ಸುರೇಶ್ ಬಾಬು ಅವರು ಸಚಿವ ರಾಮುಲು ಮಂಜೂರು ಮಾಡಿಸಿದ್ದಾರೆ ಎಂದು ಕ್ಷೇತ್ರದ ಜನರಿಗೆ ತಿಳಿಸಲು ಹೊರಟಿರುವುದು ಶೋಭೆಯಲ್ಲ ಎಂದು ಎಚ್ಚರಿಸಿದರು.

ಕಂಪ್ಲಿ ಕ್ಷೇತ್ರಕ್ಕೆ ಸಚಿವ ಶ್ರೀರಾಮುಲು ಕೊಡುಗೆ ಶೂನ್ಯ, ಕಂಪ್ಲಿ ಸೇತುವೆ ನಿರ್ಮಾಣಕ್ಕೆ ವಿಧಾನಸಭೆಯಲ್ಲಿ 3 ಬಾರಿ ದ್ವನಿ ಎತ್ತಿ ಮಾತಾಡಿದ್ದೇನೆ ಎಂದರು.

ಸುರೇಶ್ ಬಾಬು ಅವರು ನನ್ನ ತಾಕತ್ತು ಬಗ್ಗೆ ಮಾತನಾಡುತ್ತಿದ್ದಾರೆ. ನನ್ನ ತಾಕತ್ತು ಏನು ಅಂತ ಕ್ಷೇತ್ರದ ಜನರು ವೋಟು ಹಾಕಿ ಗೆಲ್ಲುಸಿದವರಿಗೆ ಗೊತ್ತಿದೆ. ಅಲ್ಲದೆ ಬಹಿರಂಗ ಚರ್ಚೆಗೆ ಕರೆಯುತ್ತಿದ್ದಾರೆ ಸುರೇಶ್ ಬಾಬು ಕೆಳಮಟ್ಟದ ರಾಜಕಾರಣಿ ಅವರೊಂದಿಗೆ ಬಹಿರಂಗ ಚರ್ಚೆಗೆ ಬರಲ್ಲ ಅವರ ಸಹೋದರ ಮಾವ ಸಚಿವ ಬಿ. ಶ್ರೀರಾಮುಲು ಅವರ ಜೊತೆಗೆ ಬಹಿರಂಗ ಚರ್ಚೆಗೆ ಬರಲು ಸಿದ್ದ ಎಂದು ಸವಾಲು ಹೊಡ್ದಿದರು.

ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಎನ್. ನಾಗರಾಜ್, ಚನ್ನಪಟ್ಟಣ ಮಲ್ಲಿಕಾರ್ಜುನ, ಬ್ಲಾಕ್ ಅಧ್ಯಕ್ಷ ಬಂಗಿ ಮಲ್ಲಯ್ಯ,ಮುಖಂಡರಾದ ವೆಂಕಟೇಶ್ ಗೌಡ, ಜೋಗಿ ಸುಂಕಪ್ಪ, ಒಂಕಾರಪ್ಪ ಸೇರಿದಂತೆ ಇತರರು ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next