Advertisement

ನನ್ನ ವಿರುದ್ಧದ ಅಪಪ್ರಚಾರ ಸಹಿಸೆನು

12:51 PM Jan 24, 2022 | Team Udayavani |

ಅರಸೀಕೆರೆ: ಕ್ಷೇತ್ರದ ಜವಾಬ್ದಾರಿ ಶಾಸಕನಾಗಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಜನಪರಯೋಜನೆಗಳನ್ನು ಬಿಜೆಪಿ ಮತ್ತು ಕಾಂಗ್ರೆಸ್‌ ನೇತೃತ್ವದ ಸರ್ಕಾರದಲ್ಲಿ ಮಂಜೂರು ಮಾಡಿಸಿಕೊಂಡು ಅನುಷ್ಠಾನ ಮಾಡುತ್ತಿರುವುದನ್ನು ಸಹಿಸದೇ ಈ ಕ್ಷೇತ್ರದಲ್ಲಿ ರಾಜಕೀಯ ನೆಲೆ ಕಂಡುಕೊಳ್ಳಲು ಬಂದಿರುವ ವ್ಯಕ್ತಿಯ ಅಪ ಪ್ರಚಾರ ಸಹಿಸುವುದಿಲ್ಲ ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಆಕ್ರೋಶ ವ್ಯಕ್ತಪಡಿಸಿದರು.

Advertisement

ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,10 ವರ್ಷದ ಹಿಂದೆ ಬಿಜೆಪಿ ಸರ್ಕಾರದಲ್ಲಿ ನಗರಾಭಿವೃದ್ಧಿ ಸಚಿವರಾಗಿದ್ದ ಸುರೇಶ್‌ಕುಮಾರ್‌ ಅವರೇ ತಮ್ಮ ಅವಿತರ ಹೋರಾಟಕ್ಕೆಸ್ಪಂಧಿಸಿ ನಗರಕ್ಕೆ ಕುಡಿವ ನೀರಿನ ಯೋಜನೆ ಹಾಗೂ ಒಳಚರಂಡಿ ಯೋಜನೆಯನ್ನು ಮಂಜೂರು ಮಾಡಿದ್ದರು. ಅಂದು ಬಹಿರಂಗಸಭೆಯಲ್ಲಿ ಮಕ್ತವಾಗಿ ಪ್ರಶಂಸಿಸಿದ್ದರು. ಇದಾವುದರ ಬಗ್ಗೆ ಅರಿವಿಲ್ಲದೆ ಇತ್ತೀಚಿನದಿನಗಳಲ್ಲಿ ಈ ಕ್ಷೇತ್ರದಲ್ಲಿ ತಮ್ಮ ರಾಜಕೀಯಬೇಳೆ ಬೇಯಿಸಿಕೊಳ್ಳಲು ಬಂದಿರುವಸಂತೋಷ್‌ ತಮ್ಮ ಬೆಂಬಲಿಗರ ಜೊತೆ ಸೇರಿಕೋಂಡು ಸುಳ್ಳು ವದಂತಿಗಳನ್ನು ಹಬ್ಬಿಸುತ್ತಾ ಜನರನ್ನು ದಿಕ್ಕುತಪ್ಪಿಸುತ್ತಿದ್ದಾರೆ ಇದನ್ನು ಸಹಿಸಲು ಸಾಧ್ಯವಿಲ್ಲ ಎಂದರು.

ನಗರ ವ್ಯಾಪ್ತಿಯ ಕುಡಿವ ನೀರಿನ ಯೋಜನೆ ಸಂಫ‌ೂರ್ಣಗೊಂಡಿದ್ದು, ಒಳಚರಂಡಿಯೋಜನೆ ಕಾಮಗಾರಿಯನ್ನು ಸಂಪೂರ್ಣಗೊಳಿಸಲು ಹಾಗೂ ಕಾಮಗಾರಿಗೆಭೂಮಿ ಕಳೆದುಕೊಂಡ ಭೂ ಮಾಲೀಕರಿಗೆಪರಿಹಾರ ಹಣ ನೀಡಲು ಕ್ಷೇತ್ರದ ಶಾಸಕನಾಗಿಹೋರಾಟ ಮಾಡಿ ಹಣವನ್ನು ಮಂಜೂರುಮಾಡಿಸಿಕೊಂಡು ಬಂದಿದ್ದೇನೆ ಇದನ್ನು ತಿಳಿಯದ ಎನ್‌.ಆರ್‌ ಸಂತೋಷ್‌ ತಾವು ಸಂಬಂಧಪಟ್ಟ ಸಚಿವರೊಂದಿಗೆ ಮೌಖೀಕವಾಗಿಮಾತನಾಡಿ ಹಣ ಮಂಜೂರು ಮಾಡಿಸಿದ್ದೇನೆಎಂದು ಜನತೆಯ ದಾರಿತಪ್ಪಿಸುವ ಮೂಲಕ ಕೀಳು ಮಟ್ಟಕ್ಕೆ ರಾಜಕೀಯಕ್ಕೆ ಇಳಿದಿರುವುದು ನಾಚಿಕೇಗೇಡಿನ ಸಂಗತಿ ಎಂದು ಹೇಳಿದರು.

ಅರಸೀಕೆರೆ ಕ್ಷೇತ್ರದಲ್ಲಿ ತಮ್ಮ ರಾಜಕೀಯ ನೆಲೆಗಾಗಿ ಪಾದಾರ್ಪಣೆ ಮಾಡಿರುವ ಸಂತೋಷ್‌ಅವರು ಬಿಜೆಪಿ ಪಕ್ಷದಲ್ಲಿ ಭಿನ್ನಮತ ಹುಟ್ಟುಹಾಕಿಹಲವು ವರ್ಷಗಳಿಂದ ಸಂಘಟನೆ ಮಾಡಿದಡಿವಿಟಿ ಬಸವರಾಜ್‌ ಅವರಿಗೆ ನಗರ ಯೋಜನಾಪ್ರಾಧಿಕಾರದ ಅಧ್ಯಕ್ಷ ಸ್ಥಾನವನ್ನು ಕೈ ತಪ್ಪಿಸಿದ್ದಾರೆ.ನಮ್ಮ ಪಕ್ಷದಿಂದ ಆಯ್ಕೆಯಾಗಿದ್ದ ಏಳು ಮಂದಿ ಜೆಡಿಎಸ್‌ ಸದಸ್ಯರ ರಾಜಿನಾಮೆ ಕೊಡಿಸಿಅವರನ್ನು ಅತಂತ್ರಗೊಳಿಸಿದ್ದಾರೆ. ಸ್ವಂತ ಪಕ್ಷದಮುಖಂಡರು ಕಾರ್ಯಕರ್ತರು ಎಂದು ನೋಡದೆ ಜಾತಿ ನಿಂದನೆಯ ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ ಇದು ಅವರು ಬಿಜೆಪಿ ಪಕ್ಷಕ್ಕೆ ನೀಡುತ್ತಿರುವ ಕೊಡುಗೆ ಎಂದು ವ್ಯಂಗ್ಯವಾಡಿದರು.

ನಗರಸಭೆ ಉಪಾಧ್ಯಕ್ಷ ಕಾಂತೇಶ್‌. ನಗರಸಭೆ ಸದಸ್ಯರಾದಜಿ.ಟಿ.ಗಣೇಶ್‌, ಮನೋಹರ್‌.ಈಶ್ವರ್‌ ಮತ್ತಿತರು ಉಪಸ್ಥಿತರಿದ್ದರು.

Advertisement

ಸಿಎಂ ಮನೆ ಮುಂದೆ ಧರಣಿ: ಎಚ್ಚರಿಕೆ : ಸಂತೋಷ್‌ ತಮ್ಮ ರಾಜಕೀಯ ನೆಲೆಗಾಗಿಸುಳ್ಳು ಹೇಳುವಹಾಗೂ ಕ್ಷೇತ್ರದಲ್ಲಿ ಅಶಾಂತಿವಾತಾವರಣ ನಿರ್ಮಿಸುವ ಕೆಲಸವನ್ನುಮಾಡುತ್ತಿದ್ದು, ಇನ್ನು ಮುಂದಾದರೂ ಅವರ ಹಿಂಬಾಲಕರು ನಿಲ್ಲಿಸದೆ ಹೋದರೆತಾವೂ ಕೂಡ ಇನ್ನು ಮುಂದಿನ ದಿನಗಳಲ್ಲಿಸುಮ್ಮನೆ ಕೂರುವುದಿಲ್ಲ , ಈ ಸಂಬಂಧಮುಖ್ಯಮಂತ್ರಿಗಳ ಮನೆ ಮುಂದೆ ಧರಣಿ ಕೂರಲು ತಾವು ಹಿಂಜರಿಯುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next