ಚಿಂತಾಮಣಿ: ಶಾಸಕ ಜೆ.ಕೆ ಕೃಷ್ಣಾರೆಡ್ಡಿ ತಮ್ಮ ಗೆಲುವಿಗೆ ಶ್ರಮಿಸಿದ ಪಕ್ಷದ ನಿಷ್ಠಾವಂತ ಮುಖಂಡರು ಹಾಗೂ ಕಾರ್ಯಕರ್ತರನ್ನು ಗಣನೆಗೆ ತೆಗೆದುಕೊಳ್ಳತ್ತಿಲ್ಲ ಎಂದು ಬಹಿರಂಗವಾಗಿ ಆರೋಪಿಸಿ ಕೈವಾರ ಹೋಬಳಿ ಸಂತೇಕಲ್ಲಹಳ್ಳಿ ಗ್ರಾಪಂ ವ್ಯಾಪ್ತಿ ಜೆಡಿಎಸ್ ಮುಖಂಡರು ತಿರುಗಿ ಬಿದ್ದಿದ್ದಾರೆ.
ಸಂತೇಕಲ್ಲಹಳ್ಳಿ ಗ್ರಾಪಂ ವ್ಯಾಪ್ತಿ ಜೆಡಿಎಸ್ ಪ್ರಮುಖ ಮುಖಂಡರು ಹಾಗೂ ಕಾರ್ಯಕರ್ತರು ಗ್ರಾಮದಲ್ಲಿ ಸಭೆ ನಡೆಸಿ ಜೆ.ಕೆ. ಕೃಷ್ಣಾರೆಡ್ಡಿ ರವರು ಎರಡು ಬಾರಿ ಗೆಲವು ಸಾ ಧಿಸಲು ನಾವು ದುಡಿದ್ದಿದ್ದು, ಶಾಸಕರ ಕ್ಷೇತ್ರದ ಅಭಿವೃದ್ಧಿ ಶ್ರಮಿಸಿಲ್ಲ ಎಂದು ಆರೋಪಿಸಿದರು.
ಕಾರ್ಯಕರ್ತರು ಕ್ಷೇತ್ರ ಅಭಿವೃದ್ಧಿ ಆಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದರು, ಅವರ ನಿರೀಕ್ಷೆಗೆ ಭಂಗವಾಗಿದೇ ಎಂದು ಒಟ್ಟಾರೆ ಇಂತಹ ಶಾಸಕರನ್ನು ಗೆಲ್ಲಿಸಿರುವುದು ನಾವು ಮಾಡಿರುವ ತಪ್ಪಾಗಿದೆ ಆರೋಪಿಸಿದರು. ಮುಂದಿನ ದಿನಗಳಲ್ಲಿ ತಾಲೂಕಾದ್ಯಂತ ಕ್ಷೇತ್ರದ ಸ್ಥಳೀಯ ಜೆಡಿಎಸ್ ಮುಖಂಡರು ಅದರಲ್ಲೂ ಅಭಿವೃದ್ಧಿ ಬಗ್ಗೆ ಚಿಂತಿಸುವ ಮುಖಂಡರು ಕಾರ್ಯಕರ್ತರು ಪಕ್ಷದಿಂದ ಹೊರಹೋಗುವುದಾಗಿ ಬಹಿರಂಗಪಡಿಸಿದರು.
ಮಾಜಿ ತಾಪಂ ಸದಸ್ಯ ಹೆಚ್.ನಾರಾಯಣಸ್ವಾಮಿ ಅತೃಪ್ತಿ ವ್ಯಕ್ತಪಡಿಸಿ ನನಗೂ ಸುಮಾರು 35 ವರ್ಷಗಳ ರಾಜಕೀಯಾ ಅನುಭವ ಇದೆ. ಆದರೆ ಇಂತಹ ಸಮಯ ಸಾಧಕ ರಾಜಕಾರಣಿ ನಮ್ಮ ಕ್ಷೇತ್ರದಲ್ಲಿ ಎಂದು ಬಂದಿಲ್ಲ ಎಂದು ಆರೋಪಿಸಿದರು. ಅಭಿವೃದ್ಧಿ ಎಂಬುದು ಬರಿ ಬಾಯಿ ಮಾತಿಗೆ ಸೀಮಿತ ಶಾಸಕ ಜೆ.ಕೆ ಕೃಷ್ಣಾರೆಡ್ಡಿ ರವರ ವಿರುದ್ಧ ಕಿಡಿಕಾರಿದ ನಗರಸಭೆ ಸದಸ್ಯ ಅಕ್ಷಯ ಕುಮಾರ್ ಕಾಂಗ್ರೆಸ್ ಪಕ್ಷದ ಮಾಜಿ ಶಾಸಕ ಡಾ. ಎಂ.ಸಿ ಸುಧಾಕರ್ ಮುನ್ನಡೆಯಲ್ಲಿರುವ ಕಾರಣಕ್ಕಾಗಿ ನಾವೆಲ್ಲರು ಅಭಿವೃದ್ಧಿಗಾಗಿ ಡಾ. ಎಂ.ಸಿ ಸುಧಾಕರ್ ಗೆಲುವಿಗೆ ಶ್ರಮ ವಹಿಸಬೇಕಾಗಿದೆ ಎಂದರು.
Related Articles
ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯ ಶಫೀಕ್ ಮಾತನಾಡಿದರು ಕಾರ್ಯಕ್ರಮದಲ್ಲಿ ಸಂತೇಕಲ್ಲಹಳ್ಳಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ನಾಗರಾಜ್, ಉಪಾಧ್ಯಕ್ಷ ಕೆ.ಹೆಚ್. ಮುನಿಯಪ್ಪ, ಮುಖಂಡ ನಾಗರಾಜ್, ಕೈವಾರ ಸಾಮ್ರಾಟ್, ಸಂತೇಕಲ್ಲಹಳ್ಳಿ ಮಹೇಶ್ ಜೆಡಿಎಸ್ ಕಾರ್ಯಕರ್ತರಿದ್ದರು.