ಸಕಲೇಶಪುರ/ಆಲೂರು: ದಲಿತ ಫಲಾನುಭವಿ ಗಳಿಗೆ ಸೌಲಭ್ಯಗಳನ್ನು ಅಧಿಕಾರಿಗಳು ನಿಯಮಿತ ಕಾಲಾವಧಿಯಲ್ಲಿ ತಲುಪಿಸಲು ಕ್ರಮ ಕೈಗೊಳ್ಳ ಬೇಕು ಎಂದು ಶಾಸಕ ಎಚ್.ಕೆ.ಕುಮಾರಸ್ವಾಮಿ ಹೇಳಿದರು.
ಆಲೂರು ಪಟ್ಟಣದ ಅಂಬೇಡ್ಕರ್ ಭವನದಲ್ಲಿ ತಾಲೂಕು ಮಟ್ಟದ ಪರಿಶಿಷ್ಟ ಜಾತಿ ಹಾಗೂವರ್ಗದ ಹಿತರಕ್ಷಣಾ ಸಮಿತಿ ಸಭೆಯಲ್ಲಿ ಮಾತನಾಡಿ, ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರದ ಹಲವುಕೆಲಸಗಳು ಮಂದಗತಿಯಿಂದ ಸಾಗುತ್ತಿರ ಬಹುದು. ಆದರೆ, ಮುಂದಿನ ದಿನಗಳಲ್ಲಿ ಯೋಜನೆಗಳನ್ನು ಅನುಷ್ಠಾನಗೊಳಿಸುವಾಗ ತಡ ವಾಗದಂತೆ ಅಧಿಕಾರಿಗಳು ಎಚ್ಚರವಹಿಸಬೇಕು ಎಂದು ಹೇಳಿದರು.
ಕೆಲಸ ಚುರುಕುಗೊಳಿಸಿ: ತಾಲೂಕಿನೆಲ್ಲೆಡೆ ಅಕ್ರಮ ಮದ್ಯ ಮಾರಾಟ ಮಿತಿಮೀರುತ್ತಿರುವ ಬಗ್ಗೆ ದೂರುಗಳಿದ್ದು, ಕೂಡಲೇ ಅಬಕಾರಿ ಇಲಾಖೆ ಸಿಬ್ಬಂದಿ, ಅಕ್ರಮ ಮದ್ಯ ಮಾರಾಟ ತಡೆಯಬೇಕು. ದೇವರಾಜ ಅರಸು ವಸತಿ ಯೋಜನೆ ಯಲ್ಲಿ 250 ಮನೆಗಳು ಮಂಜೂರಾಗಿವೆ. ಕೆಲವು ಪಿಡಿಒಗಳ ಕಾರ್ಯವೈಖರಿ ಬಗ್ಗೆ ದೂರುಗಳಿದ್ದು, ಕೂಡಲೇಕೆಲಸ ಚುರುಕಾಗಿ ಮಾಡಲು ಮುಂದಾ ಗಬೇಕು ಎಂದು ಸೂಚಿಸಿದರು.
ಸಮಸ್ಯೆ ಕೂಡಲೇ ಇತ್ಯರ್ಥಪಡಿಸಿ: ತಾಲೂಕು ಅಸ್ಪತ್ರೆಯಲ್ಲಿ ದಲಿತ ಮಹಿಳೆಯರ ಮೇಲೆ ದೌರ್ಜನ್ಯ ನಡೆದಿದೆ ಎಂಬ ಆರೋಪ ಕೇಳಿಬಂದಿದ್ದು, ಕೂಡಲೇ ಈ ಕುರಿತು ತಾಲೂಕು ಆರೋಗ್ಯಾಧಿಕಾರಿ ಡಾ.ಎಚ್.ಆರ್.ತಿಮ್ಮಯ್ಯ,ಆಡಳಿತ ವೈದ್ಯಾಧಿಕಾರಿ ಡಾ.ಚಿನ್ನನಾಗಪ್ಪರವರು ವಿಚಾರಣೆ ನಡೆಸಿ ಮುಂದಿನ ಕ್ರಮ ಕೈಗೊಳ್ಳ ಬೇಕು. ಒಟ್ಟಾರೆಯಾಗಿ ಅಧಿಕಾರಿಗಳು ದಲಿತರ ಸಮಸ್ಯೆಗಳನ್ನು ಕೂಡಲೇ ಇತ್ಯರ್ಥ ಪಡಿಸಲು ಮುಂದಾಗಬೇಕು ಎಂದರು.
ಸಶ್ಮಾನಕ್ಕೆ ದಾರಿ: ತಹಶೀಲ್ದಾರ್ ಶಿರೀನ್ ತಾಜ್ ಮಾತನಾಡಿ, ತಾಲೂಕು ಆಡಳಿತ, ದಲಿತರ ಹಕ್ಕು ಗಳಿಗೆ ಚ್ಯುತಿ ಬರದಂತೆ ಕೆಲಸ ನಿರ್ವಹಿಸುತ್ತಿದೆ.ದಲಿತರ ಸ್ಮಶಾನಗಳಿಗೆ ಹೋಗಲು ದಾರಿಯಸಮಸ್ಯೆ ಇದ್ದಲ್ಲಿ ಕೂಡಲೇ ದಾರಿ ಬಿಡಿಸಿಕೊಡಲಾಗುತ್ತದೆ. ಚಿಕ್ಕಕಣಗಾಲು ಹೊಸಳ್ಳಿ ಗ್ರಾಮದ ನಿರ್ಗತಿಕ ಯುವತಿಯನ್ನು ಜೆ.ಎಂ.ಎಫ್ ನ್ಯಾಯಾ ಲಯದಲ್ಲಿ ಹಾಜರುಪಡಿಸಿ, ನ್ಯಾಯಾಧೀಶರ ಆದೇಶದಂತೆ ರಕ್ಷಣಾತ್ಮಕ ಕ್ರಮ ಕೈಗೊಳ್ಳಲಾಗುವುದು ಎಂದು ವಿವರಿಸಿದರು.
ಕೇಳಿ ಬಂದ ದೂರುಗಳು: ಸ್ಮಶಾನಕ್ಕೆ ದಾರಿ ಬಿಡಿಸಿ ಕೊಡಬೇಕು, ದಿನಸಿ ಅಂಗಡಿಗಳಲ್ಲಿ ಅಕ್ರಮಮದ್ಯ ಮಾರಾಟ ನಿಲ್ಲಬೇಕು, ಹೇಮಾವತಿಪುನರ್ವಸತಿ ಪ್ರದೇಶದಲ್ಲಿ ವಾಸಿಸುತ್ತಿರುವವರಿಗೆಹಕ್ಕು ಪತ್ರ ವಿತರಿಸಬೇಕು, ಮೂರು ವರ್ಷವಾದರೂ ಹಲವಾರು ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ ಎಂಬ ಆರೋಪಗಳು ಸಭೆಯಲ್ಲಿ ದಲಿತ ಮುಖಂಡರಿಂದ ಕೇಳಿ ಬಂದವು. ಸಭೆಯಲ್ಲಿ ತಾಪಂ ಉಪಾಧ್ಯಕ್ಷೆ ರಮ್ಯಾ ಗೋಪಿನಾಥ್, ಎಪಿಎಂಸಿ ಅಧ್ಯಕ್ಷ ಕೆ.ಎಸ್. ಮಂಜೇಗೌಡ, ತಾಪಂ ಇಒ ಎಚ್.ಕೆ.ಸತೀಶ್, ಇನ್ಸ್‌ಪೆಕ್ಟರ್ ರೇವಣ್ಣ, ಸಮಾಜ ಕಲ್ಯಾಣಾಧಿಕಾರಿ ಪುಂಡಲೀಕ್ ಇತರರಿದ್ದರು.