ಶಿರ್ವ: ಕಾಪು ಕ್ಷೇತ್ರದಿಂದ ಗೆಲುವು ಸಾಧಿಸಿ ಬಿಜೆಪಿ ಶಾಸಕರಾಗಿ ಆಯ್ಕೆಗೊಂಡ ಗುರ್ಮೆ ಸುರೇಶ್ ಶೆಟ್ಟಿಯವರ ವಿಜಯೋತ್ಸವ ಕಾರ್ಯಕ್ರಮವು ಮೇ. 20 ರಂದು ಶಿರ್ವ ಮಂಚಕಲ್‌ಪೇಟೆಯಲ್ಲಿ ನಡೆಯಿತು.
ಪಡುಕೆರೆಯಿಂದ ಪ್ರಾರಂಭಗೊಂಡ ವಿಜಯೋತ್ಸವ ಯಾತ್ರೆಯು ಕಟಪಾಡಿ,ಕುರ್ಕಾಲು,ಬಂಟಕಲ್‌ಗಾಗಿ ಶಿರ್ವ ಮಂಚಕಲ್ ಪೇಟೆಗೆ ಆಗಮಿಸಿದ್ದು,ಪಕ್ಷದ ಪ್ರಮುಖರು,ಕಾರ್ಯಕರ್ತರು ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದರು. ಶಿರ್ವ ಮಂಚಕಲ್‌ಪೇಟೆಯಲ್ಲಿ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಬಳಿಕ ಸಾರ್ವಜನಿಕ ಶ್ರೀ ಗಣೇಶೋತ್ಸವ ವೇದಿಕೆಯ ಬಳಿಯ ಮಹಿಳಾ ಸೌಧದಲ್ಲಿ ಶಾಸಕ ಗುರ್ಮೆ ಸುರೇಶ್ ಶೆಟ್ಟಿಯವರು ಲಾಲಾಜಿ ಆರ್. ಮೆಂಡನ್ ಮತ್ತು ಕಾರ್ಯಕರ್ತರೊಂದಿಗೆ ಮಧ್ಯಾಹ್ನದ ಭೋಜನ ಸವಿದರು.ಬಳಿಕ ವಿಜಯೋತ್ಸವ ಯಾತ್ರೆಯು ಕುತ್ಯಾರುವಿಗಾಗಿ ಮುದರಂಗಡಿಗೆ ತೆರಳಿತು.
ವಿಜಯೋತ್ಸವದಲ್ಲಿ ಲಾಲಾಜಿ ಆರ್.ಮೆಂಡನ್, ಶ್ಯಾಮಲಾ ಕುಂದರ್,ಕಾಪು ಮಂಡಲ ಅಧ್ಯಕ್ಷ ಶ್ರೀಕಾಂತ್ ನಾಯಕ್,ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಶೆಟ್ಟಿ,ಶಿಲ್ಪಾ ಜಿ. ಸುವರ್ಣ, ಗೀತಾಂಜಲಿ ಸುವರ್ಣ,ಸುಮಾ ಯು. ಶೆಟ್ಟಿ, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು,ಕುತ್ಯಾರು ನವೀನ್ ಶೆಟ್ಟಿ ಗಂಗಾಧರ ಸುವರ್ಣ,ಮತ್ತಿತರ ಪಕ್ಷದ ಪ್ರಮುಖರು, ರಾಜೇಶ್ ನಾಯ್ಕ, ಸಂತೋಷ್ ಶೆಟ್ಟಿ ,ವೀರೆಂದ್ರ ಪಾಟ್ಕರ್, ಗಿರಿಧರ ಪ್ರಭು ಮತ್ತಿತರ ಕಾರ್ಯಕರ್ತರು ಪಾಲ್ಗೊಂಡಿದ್ದರು.