Advertisement

ವಿದ್ಯಾವಂತರಿಗೆ ಸರಕಾರ ಉದ್ಯೋಗ ನೀಡದೆ ನರೇಗಾ ಕೆಲಸಕ್ಕೆ ತಳ್ಳಿದೆ : ಶಾಸಕ ಗಣೇಶ್

09:58 PM Mar 20, 2023 | Team Udayavani |

ಕುರುಗೋಡು: ಕೇಂದ್ರ ಮತ್ತು ರಾಜ್ಯ ಸರಕಾರಗಳು ಪದವಿ, ಸ್ನಾತಕೋತ್ತರ ಪದವಿ ಮುಗಿಸಿದ ವಿದ್ಯಾವಂತ ಯುವಕರಿಗೆ ಉದ್ಯೋಗ ಕಲ್ಪಿಸದೆ ಇವತ್ತು ನರೇಗಾ ಕೆಲಸಕ್ಕೆ ತಳ್ಳಿದೆ ಇದು ದುರಂತ ಎಂದು ಶಾಸಕ ಜೆ. ಎನ್. ಗಣೇಶ್ ಬೇಸಾರ ವ್ಯಕ್ತಪಡಿಸಿದರು.

Advertisement

ಸಮೀಪದ ಮುಷ್ಟಗಟ್ಟಿ ಗ್ರಾಮದಲ್ಲಿ 50 ಲಕ್ಷ ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರೆವೇರಿಸಿ ಮಾತನಾಡಿದ ಅವರು, ಬಿಜೆಪಿ ಸರಕಾರ ಕೇವಲ ಬಂಡವಾಳ ಶಾಹಿಗಳ ಪರ ವಾಲಿ, ದೇಶದ ಜನರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಜನರು ನಿತ್ಯ ಬಳಸುವ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆರಿ ದೇಶದ ಜನರ ಹೊಟ್ಟೆ ಮೇಲೆ ಬರೆ ಎಳೆದಿದ್ದಾರೆ ಎಂದು ಕಿಡಿಕಾರಿದರು.

ಇನ್ನೂ ರೈತರ ಸಾಲ ಮನ್ನಾ ಮಾಡದೆ, ರೈತರಿಗೆ ಕೊಟ್ಟ ಮಾತು ಕಳೆದುಕೊಂಡಿದ್ದಾರೆ. ಇವತ್ತು ಬಿಜೆಪಿ ಸರಕಾರದ ಆಡಳಿತವನ್ನು ದೇಶದ ಯುವಕರು, ವಿದ್ಯಾವಂತರು, ರೈತರು, ಕಾರ್ಮಿಕರು ನೋಡಿ ಬೇಸತ್ತು ಹೋಗಿದ್ದಾರೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ತಿಳಿಸಿದರು.

ಈಗಾಗಲೇ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜನಪರ ಯೋಜನೆಗಳನ್ನು ಜಾರಿಗೆ ತರಲು ಪ್ರಾಣಳಿಕೆಯಲ್ಲಿ ಉದ್ದೇಶಿಸಲಾಗಿದೆ ಎಂದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕೇವಲ ಒಂದು, ಎರಡು ತಾಲೂಕಿಗೆ ಮಾತ್ರ ಸೀಮಿತವಲ್ಲ ರಾಜ್ಯಕ್ಕೆ ಅವರು ಮಾದರಿ ಅವರು ಎಲ್ಲೇ ಸ್ಪರ್ಧೆ ಮಾಡಿದರು ಗೆಲುವುದು ಮಾತ್ರ ಖಚಿತ ಎಂದರು.

Advertisement

ಅಧಿಕಾರ ಇದ್ದಾಗ ಜನ ಸೇವೆ ಮಾಡದೆ, ಈಗ ಮತ್ತೊಮ್ಮೆ ಅಧಿಕಾರ ಪಡಿಯಲು ತುದಿಗಾಲಿನಲ್ಲಿ ನಿಂತು ರಾಜ್ಯದಿಂದ ನಾಯಕರನ್ನು ಕ್ಷೇತ್ರಕ್ಕೆ ಕರೆತರುತಿದ್ದಾರೆ, ಅಲ್ಲದೆ ಮತ ಬ್ಯಾಂಕಿಗಾಗಿ ಸೀರೆ, ಕೊಟ್ಟು ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಆದರೆ ಇದು ಯಾವುದಕ್ಕೂ ಕ್ಷೇತ್ರದ ಜನರು ಕಿವಿಗೋಡದೆ ಇವತ್ತಿನ ಕೆಲಸ ಕಾರ್ಯಗಳು ನೋಡುತಿದ್ದಾರೆ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ಬಳಪುರ, ಶಾಂತಿ ನಗರ, ನೆಲ್ಲುಡಿ, ನೆಲ್ಲುಡಿ ಕೊಟ್ಟಲ್, ಶಂಕರ್ ಸಿಂಗ್ ಕ್ಯಾಂಪ್ ನ ಜನರು ಸುಮಾರು 70 ವರ್ಷ ದಿಂದ ನೀರಿನ ಸಮಸ್ಯೆ ಯಿಂದ ನಿತ್ಯ ಬಳಲುತಿದ್ದರು ಆದರೆ ಇವತ್ತು 11 ಕೋಟಿ ವೆಚ್ಚದಲ್ಲಿ ಕುಡಿಯುವ ನೀರಿನ ಕೆರೆ ಅಭಿವೃದ್ಧಿ ಮಾಡಿ ನೀರು ಒದಗಿಸುವ ಕೆಲಸ ಮಾಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಜಡೆಪ್ಪ, ಸೋಮಪ್ಪ, ದೊಡ್ಡಬಸವ, ಮಂಜುನಾಥ, ಮುದೆಪ್ಪ, ಹಾಗೂ ಕಾರ್ಯಕರ್ತರು, ಗ್ರಾಮದ ಮುಖಂಡರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next