Advertisement
ಶಾಸಕ ಆನಂದ್ ಸಿಂಗ್ ಸುಮಾರು ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು, ಜನ ಪ್ರಿಯತೆಯನ್ನುಗಳಿಸಿದ್ದವರು. ಜತೆಗೆ ಮೂರು ಬಾರಿ ಶಾಸಕರಾಗಿ ಒಂದು ಮಂತ್ರಿಯಾದರು. ಎಲ್ಲಾ ಜಾತಿ ಸಮುದಾಯದವರಿಗೆ ಸಮನಾದ ವೇದಿಕೆ ಕಲ್ಪಿಸುತ್ತಿದ್ದ ಶಾಸಕ ಆನಂದ್‌ಸಿಂಗ್ ಅವರ ಮೇಲೆ ಅಮಾನುಷ್ಯವಾಗಿ ಹಲ್ಲೆ ನಡೆಸಿರುವುದು ಖಂಡನಿಯ. ಹಾಗಾಗಿ ಹಲ್ಲೆ ನಡೆಸಿರುವ ಶಾಸಕ ಗಣೇಶ ಅವರನ್ನು ಶೀಘ್ರವೇ ಬಂಧಿಸಿ ಸೂಕ್ತ ಕ್ರಮ ಜರುಗಿಸಬೇಕು. ಇಲ್ಲವಾದರೆ ಶ್ರೀ ಮಹಾರಾಣ ಪ್ರತಾಪ ಸಂಘ ಹಾಗೂ ಆನಂದ್ ಸಿಂಗ್ ಅಭಿಮಾನಿ ಬಳಗದಿಂದ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಆರ್.ಜಿತೇಂದ್ರ ಸಿಂಗ್, ಕಾರ್ಯದರ್ಶಿ ಜಯಸಿಂಗ್ ಮೂಲಿಮನಿ ಇನ್ನಿತರರಿದ್ದರು.
ಕಂಪ್ಲಿ: ಶಾಸಕ ಜೆ.ಎನ್.ಗಣೇಶ್ ವಿರುದ್ಧ ದಾಖಲಿಸಿರುವ ಮೊಕದಮ್ಮೆ ಹಾಗೂ ಕೆಪಿಸಿಸಿಯಿಂದ ಮಾಡಿರುವ ಅಮಾನತು ವಾಪಸ್ ಪಡೆಯಬೇಕೆಂದು ಆಗ್ರಹಿಸಿ ಜೆ.ಎನ್.ಗಣೇಶ್ ಅಭಿಮಾನಿಗಳ ಬಳಗ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡರ ಒಕ್ಕೂಟದ ಪದಾಧಿಕಾರಿಗಳು ಬುಧವಾರ ಪ್ರತಿಭಟನೆ ನಡೆಸಿ ಕೆಪಿಸಿಸಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಯುವ ಮುಖಂಡ ಹೊಸಕೋಟೆ ಜಗದೀಶ್, ಜೆ.ಎನ್.ಗಣೇಶ್ ಮತ್ತು ಆನಂದಸಿಂಗ್ ಶಾಸಕರಿಬ್ಬರು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ವಿಧಾನಸಭಾ ಚುನಾವಣೆಯಲ್ಲಿ ಗಣೇಶ್ ಅವರು ಗೆಲುವು ಸಾಧಿಸುವಲ್ಲಿ ಆನಂದಸಿಂಗ್ ಅವರ ಬೆಂಬಲವಿದೆ. 20 ವರ್ಷಗಳಿಂದ ಒಂದೇ ತಾಯಿಯ ಮಕ್ಕಳಂತೆ ಸ್ನೇಹಿತರಾಗಿ ಕೆಲಸ ಕಾರ್ಯ ಮಾಡಿಕೊಂಡು ಬಂದಿದ್ದಾರೆ. ಆದರೆ, ಇತ್ತೀಚೆಗೆ ಯಾವುದೋ ವಿಷಯವಾಗಿ ಗಲಾಟೆ ನಡೆದಿದೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವೆಂಕಟರಾವ್ ವೈ.ಘೋರ್ಪಡೆ, ಶಾಸಕ ಜೆ.ಎನ್.ಗಣೇಶ್ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಇದರಿಂದ ಕಾರ್ಯಕರ್ತರಲ್ಲಿ ಬೇಸರ ಉಂಟಾಗಿದೆ. ಕೂಡಲೇ ಅಮಾನತು ಆದೇಶ ಹಿಂಪಡೆದು ಅವರ ಮೇಲೆ ದಾಖಲಾಗಿರುವ ಮೊಕದ್ದಮೆ ವಾಪಸ್ ಪಡೆಯಬೇಕೆಂದು ಆಗ್ರಹಿಸಿದರು.
Related Articles
Advertisement
ಈ ಸಂದರ್ಭದಲ್ಲಿ ಜೆ.ಎನ್.ಗಣೇಶ್ ಅಭಿಮಾನಿಗಳ ಬಳಗದ ಬಿ.ಹರ್ಷವರ್ಧನ, ಎನ್.ವಾಸು, ರಾಮಲಿಸ್ವಾಮಿ, ವೀರಾಂಜಿನೇಯಲು, ಆನಂದ, ಮಾವಿನಹಳ್ಳಿ ರಮೇಶ್, ಹರೀಶಗೌಡ, ಪುರುಷೋತ್ತಮಗೌಡ, ಕನಕಗಿರಿ ರೇಣುಕಗೌಡ, ಎಂ.ಮಾರುತಿ, ಮೆಟ್ರಿ ಗಿರೀಶ್, ಯರ್ರಿಸ್ವಾಮಿ, ಜಗದೀಶ್ ಇನ್ನಿತರರಿದ್ದರು.