ಬೆಂಗಳೂರು: ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಅವರು ರವಿವಾರ ಬೆಳಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಿಟಿಡಿ, 2021ರಲ್ಲಿ ಮೈಸೂರಿನಲ್ಲಿ ಮಳೆಹಾನಿಯಿಂದ ಕೆರೆಕಟ್ಟೆಗಳು ಒಡೆದು ವಸತಿ ಪ್ರದೇಶಗಳಿಗೆ ನೀರು ನುಗ್ಗಿ ಹಾನಿಯಾಗಿತ್ತು. ಹೀಗಾಗಿ 138 ಕೋಟಿ ರೂ. ಪ್ರಪೋಸಲ್ ಕಳುಸಲಾಗಿತ್ತು. ಅದು ಇದುವರೆಗೂ ಬಿಡುಗಡೆಯಾಗಿರಲಿಲ್ಲ. ಆದರೆ ಶಾಸಕ ರಾಮದಾಸ್ ಕ್ಷೇತ್ರಕ್ಕೆ 40 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ. ಆದರೆ ನಾನು ಎರಡು ಸಲ ಪ್ರಪೋಸಲ್ ಕೊಟ್ಟಿದ್ದರು ಆಗಿರಲಿಲ್ಲ ಎಂದರು.
ಇದನ್ನೂ ಓದಿ:ಕಾಂಗ್ರೆಸ್ ಗೆ ಗುಡ್ ಬೈ ಹೇಳಿದ ನಟ ಮುಖ್ಯಮಂತ್ರಿ ಚಂದ್ರು
ದಯವಿಟ್ಟು ಹಣ ಬಿಡುಗಡೆ ಮಾಡಿ ಎಂದು ನಾನು ಹೇಳಿದ್ದೆ. ದಾವೋಸ್ ಗೆ ಹೋಗಿ ಬಂದಮೇಲೆ ಮಾಡುತ್ತೇನೆ ಎಂದಿದ್ದರು. ಹೀಗಾಗಿ ನಾನು ಖುದ್ದಾಗಿ ಬಂದು ಭೇಟಿ ಮಾಡಿದ್ದೇನೆ. ತುರ್ತಾಗಿ 27 ಕೋಟಿ ರೂ. ಬಿಡುಗಡೆ ಮಾಡಲು ಸಿಎಂ ಸೂಚಿಸಿದ್ದಾರೆ ಎಂದು ಜಿ.ಟಿ.ದೇವೇಗೌಡ ಹೇಳಿದರು.