Advertisement

ಚೀನಾ ದೇಶದ ಬೆಳವಣಿಗೆಗೆ ಸಣ್ಣ ಕೈಗಾರಿಕೆಯೇ ಕಾರಣ 

02:45 PM Jun 04, 2022 | Team Udayavani |

ನೆಲಮಂಗಲ: ಸಣ್ಣ ಕೈಗಾರಿಕೆಗಳ ನೆರವಿಗೆ ಕೇಂದ್ರ ಸರ್ಕಾರ ಧಾವಿಸಬೇಕಾಗುತ್ತದೆ. ಚೀನಾ ಬೆಳವಣಿಗೆಗೆ ಸಣ್ಣ ಕೈಗಾರಿಕೆಯೇ ಕಾರಣ ಎಂದು ಮಾಜಿ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್‌ ತಿಳಿಸಿದರು.

Advertisement

ತಾಲೂಕಿನ ಸೋಂಪುರ ಕೈಗಾರಿಕಾ ಪ್ರದೇಶದ ಹೊನ್ನೇನಹಳ್ಳಿ ಗ್ರಾಪಂ ವ್ಯಾಪ್ತಿಯ ಗೌರಿಶಂಕರ್‌ ಒಡೆತನದ ಎಲೈಟ್‌ ಕ್ಯಾರೋಗೇಟರ್ಸ್‌ ಕಂಪನಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ನಮ್ಮ ಮುಖ್ಯಮಂತ್ರಿಗಳು ವಿದೇಶಕ್ಕೆ ಹೋಗಿ ಕೈಗಾರಿಕೊದ್ಯಮಿಗಳನ್ನು ಆಕರ್ಷಿಸಲು, ಇನ್ವಸ್ಟರ್‌ ಮೀಟ್‌ ಮಾಡುತ್ತಿದ್ದಾರೆ, ದಾಬಸ್‌ಪೇಟೆ ಕೈಗಾರಿಕಾ ಪ್ರದೇಶದಲ್ಲಿ ನೀರಿಗೆ ಸಮಸ್ಯೆಯಿದೆ. ಎತ್ತಿನಹೊಳೆ ಯೋಜನೆ ಈಗ ಕಾರ್ಯಗತವಾಗುತ್ತಿದೆ. ಒಂದು ವರ್ಷದಲ್ಲಿ ಈ ಯೋಜನೆಬರಬಹುದು. ಆಗ ಕೈಗಾರಿಕಾ ಪ್ರದೇಶಕ್ಕೆ ನೀರು ಬರಬಹುದು ಎಂದರು.

ಪಠ್ಯದಲ್ಲಿ ದೂರದೃಷ್ಟಿ ಇರಬೇಕು: ಪಠ್ಯಕ್ರಮ ವಾದದ ಬಗ್ಗೆ ಮಾತನಾಡಿದ ಅವರು, ಮಕ್ಕಳಿಗೆ ಕಲಿಕೆಗೆ ತಾತ್ವಿಕವಾಗಿ ಯೋಚನೆ ಮಾಡ ಬೇಕಾಗುತ್ತದೆ. ಪಠ್ಯ ಪುಸ್ತಕಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಇರಬೇಕು. ಪಠ್ಯದಲ್ಲಿ ದೂರದೃಷ್ಟಿಯಿರಬೇಕು. ಎಲ್ಲಾ ಧರ್ಮಗಳನ್ನು ಒಂದಾಗಿ ತೆಗೆದುಕೊಂಡು ಹೋಗಬೇಕು ಎಂದರು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನೆಲಮಂಗಲ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್‌ ಅಭ್ಯರ್ಥಿಯಾಗುವ ಬಗ್ಗೆ ಮತ್ತು ರಾಜಕೀಯದ ಬಗ್ಗೆ ಮಾತನಾಡಲಾರೆ. ಆದರೆ, ಸಣ್ಣ ಕೈಗಾರಿಕೆಗಳು ಬೆಳೆದಾಗ ಮಾತ್ರ ದೇಶದ ಅಭಿವೃದ್ಧಿಯಾಗುತ್ತದೆ ಎಂದರು.

ದೇಶದ ಸಿಪಾಯಿಗಳಿದಂತೆ: ದಾಬಸ್‌ ಪೇಟೆ ಕೈಗಾರಿಕಾ ಪ್ರದೇಶದ ಸಲಹೆಗಾರಪಿಜಿಕೆ ನಾಯರ್‌ ಮಾತನಾಡಿ, ಸರ್ಕಾರಕ್ಕೆ ಸಣ್ಣ ಕೈಗಾರಿಕೆಗಳಿಂದ ಎಲ್ಲಾ ಭಾಗದಲ್ಲಿ ಬೆಳವಣಿಗೆಗೆ ಆಗುತ್ತದೆ. ಕೈಗಾರಿಕೀಕರಣಕ್ಕೆ ರಾಜಕೀಯ ಪಕ್ಷಗಳನ್ನು ತರಬೇಡಿ. ಕೈಗಾರಿಕೋದ್ಯಮಿಗಳು ದೇಶದ ಸಿಪಾಯಿಗಳಿ ದಂತೆ. ನಾವು ಯುದ್ಧ ಸಲಕರಣೆಗಳನ್ನು ಉತ್ಪಾದನೆ ಮಾಡಿದಾಗ ಮಾತ್ರ ದೇಶದ ಆಂತರಿಕ ಮತ್ತು ಬಾಹ್ಯ ಭದ್ರತೆಯಾಗುತ್ತದೆ ಎಂದರು.

ಸಂಘದ ಅಧ್ಯಕ್ಷ ಕಂಠಪ್ಪ, ಕಂಪನಿ ಮುಖ್ಯಸ್ಥ ಗೌರಿಶಂಕರ್‌, ಕಂಪನಿ ಕಾರ್ಮಿಕರು ಮತ್ತಿತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next