Advertisement

ಮಳೆ ಹಾನಿ ಪ್ರದೇಶವನ್ನು ಪರಿಶೀಲಿಸಿದ ಶಾಸಕ ಡಾ. ಜಿ ಪರಮೇಶ್ವರ್

07:36 PM Nov 22, 2021 | Team Udayavani |

ಕೊರಟಗೆರೆ: ಮಳೆಯಿಂದ ಬಹುತೇಕ ತಾಲೂಕಿನ ಹಲವು ಕಡೆ ಮನೆಗಳು ಬಿದಿದ್ದು, ರಸ್ತೆಗಳು ಹಾಳಾಗಿದ್ದು ಅವುಗಳನ್ನು ತಹಶೀಲ್ದಾರ್ ಮತ್ತು ಕಂದಾಯ ಅಧಿಕಾರಿಗಳಿಗೆ ಶೀಘ್ರ ಅಗತ್ಯ ಪರಿಹಾರವನ್ನು ಕಲ್ಪಿಸುವಂತೆ ಸೂಚಿಸಿರುವುದಾಗಿ ಶಾಸಕ ಡಾ. ಜಿ ಪರಮೇಶ್ವರ್ ತಿಳಿಸಿದರು.

Advertisement

ತಾಲೂಕಿನ ಕಸಬಾ ಹೋಬಳಿಯ ಹಂಚಿಹಳ್ಳಿ ಗ್ರಾ.ಪಂ ವ್ಯಾಪ್ತಿಯ ಜಿ. ನಾಗೇನಹಳ್ಳಿ, ಸಂಕೇನಹಳ್ಳಿ ಗೊಲ್ಲರಹಟ್ಟಿ, ಹಂಚಿಹಳ್ಳಿ ಸೇರಿದಂತೆ ಇತರೆ ಕಡೆಗಳಲ್ಲಿ ಮಳೆಯಿಂದ ಹಾನಿಯಾದ ಪ್ರದೇಶಗಳಿಗೆ ಸೋಮವಾರ ಭೇಟಿ ನೀಡಿ ಮಾತನಾಡಿದರು.

ಈಗಾಗಲೇ ತಾಲೂಕು ಆಡಳಿತದ ವತಿಯಿಂದ ಸಹಾಯವಾಣಿಗಳನ್ನು ತೆರೆದಿದ್ದು ತೀವ್ರ ತೊಂದರೆಯಾದರೆ ಸಹಾಯವಾಣಿಗೆ ಕರೆ ಮಾಡಿದರೆ ತಕ್ಷಣದ ಪರಿಹಾರವನ್ನು ಕಲ್ಪಿಸುವ ವ್ಯವಸ್ಥೆಯನ್ನು ಮಾಡಿರುವುದಾಗಿ ಹೇಳಿದರು.

ಸರ್ಕಾರಕ್ಕೆ ಒತ್ತಾಯ:-

ಮಳೆಯಿಂದ ಹಾನಿಗೊಳಗಾಗಿರುವಂತಹ ಮನೆಗಳನ್ನು ಈಗ ಸುಸ್ಥಿತಿಗೆ ತರಲಾಗುವುದಿಲ್ಲ ಪ್ರಕೃತಿ ವಿಕೋಪದಡಿಯಲ್ಲಿಯೇ ಶೀಘ್ರವಾಗಿ ವಸತಿ ನಿರ್ಮಿಸಿಕೊಳ್ಳಲು ಬೇರೆ ಯಾವುದೇ ವಸತಿ ನಿಲಯಗಳ ಆಶ್ರಯವಿಲ್ಲದೇ ಶೀಘ್ರ ವಿಶೇಷ ಅನುಧಾನವನ್ನು ಬಿಡುಗಡೆ ಮಾಡಿ ಮನೆ ನಿರ್ಮಿಸಿಕೊಳ್ಳಲು ಅನುವು ಮಾಡಿಕೊಡಬೇಕು ಎಂದು ವಸತಿ ಸಚಿವರಿಗೆ ಮತ್ತು ಮುಖ್ಯಮಂತ್ರಿಗೆ ಒತ್ತಾಯಿಸಿದರು.

Advertisement

ಬೋಡಬಂಡೇನಹಳ್ಳಿ-ಹಂಚಿಹಳ್ಳಿ ರಸ್ತೆಗೆ ಅನುಧಾನ:-

ಗ್ರಾ.ಪಂ ವ್ಯಾಪ್ತಿಯ ಬೋಡಬಂಡೇನಹಳ್ಳಿಯಿಂದ ಹಂಚಿಹಳ್ಳಿಯವರೆಗೆ ರಸ್ತೆ ಬೇಡಿಕೆಯಿಟ್ಟ ಹಿನ್ನೆಲೆಯಲ್ಲಿ ಇದಕ್ಕೆ ಪ್ರತಿಕ್ರಿಯಿಸಿ ಈಗಾಗಲೇ ಈ ರಸ್ತೆಗೆ ಅನುಧಾವನ್ನು ಬಿಡುಗಡೆ ಮಾಡಿದ್ದು ಟೆಂಟರ್ ಪ್ರಕ್ರಿಯೆ ಸಹ ಆಗಿದ್ದು ಶೀಘ್ರದಲ್ಲಿಯೇ ರಸ್ತೆ ಪ್ರಾರಂಭವಾಗುತ್ತದೆ ಎಂದರು.

ಈ ಸಂಧರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕೆರೆ ಶಂಕರ್, ಮಾಜಿ ಅಧ್ಯಕ್ಷ ಮೈಲಾರಪ್ಪ, ಯುವ ಅಧ್ಯಕ್ಷ ವಿನಯ್ ಕುಮಾರ್, ಹಂಚಿಹಳ್ಳಿ ಗ್ರಾ.ಪಂ ಅಧ್ಯಕ್ಷೆ ರೇಣುಕಾ, ಉಪಾಧ್ಯಕ್ಷೆ ರಾಜೇಶ್ವರಿ, ಸದ್ಯರಾದ ವಿಜಯಕುಮಾರಿ, ಯೋಗಣ್ಣ,  ರಂಗಾನಾಥ್,  ಮುಖಂಡರಾದ ಸೋಮಖರ್, ಶಿವರಾಂ, ನಾಗರಾಜು, ಸಕ್ಕರೆ ದೇವರಾಜು, ಕಂದಾಯ ನಿರೀಕ್ಷಕ ಪ್ರತಾಪ್, ಪಿಡಿಒ ಮೈಲಣ್ಣ, ಗ್ರಾಮಲೆಕ್ಕಿಗ ಪವನ್ ಕುಮಾರ್,  ಸೇರಿದಂತೆ ಇತರು ಇದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next