ಸುರತ್ಕಲ್:ಭಾರತವು ಗಡಿ ಭಾಗದಲ್ಲಿ ನರೆ ರಾಷ್ಟ್ರ ಚೀನಾ, ಪಾಕಿಸ್ತಾನ ಕಾಲು ಕೆರೆದು ಜಗಳಕ್ಕೆ ನಿಂತಿದ್ದು ಸೂಕ್ತ ಉತ್ತರ ನೀಡಲು ಸೇನೆಯಲ್ಲಿ ಮಹತ್ವದ ಅಗ್ನಿಪಥ್ ಯೋಜನೆ ಜಾರಿಗೆ ತಂದಿದೆ. ಇದು ಕೋಟಿ ಕೋಟಿ ಯುವಕರಲ್ಲಿ ಶಿಸ್ತು ಸಂಯಮ ಹಾಗೂ ಭವಿಷ್ಯದಲ್ಲಿ ಉತ್ತಮ ಸಾಧನೆಗೆ ಹಾಗೂ ಉದ್ಯೋಗಕ್ಕೆ ನಾಂದಿ ಹಾಡಲಿದೆ. ಬಿಜೆಪಿ ಕಾರ್ಯಕರ್ತರು ಯುವ ಸಮೂಹಕ್ಕೆ ಮಾಹಿತಿ ನೀಡುವ ಮೂಲಕ ಬೆಂಬಲಿಸುವಂತೆ ಮಾಡಬೇಕು ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ಕರೆ ನೀಡಿದ್ದಾರೆ.
ಜನತಾ ಕಾಲನಿ ಬಿಜೆಪಿ ಶಕ್ತಿಕೇಂದ್ರ ಆಯೋಜಿಸಿದ್ದ ಸಭೆಯನ್ನು ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ದೇಶದ ರಕ್ಷಣೆಯ ವಿಚಾರದಲ್ಲೂ ರಾಜಕೀಯ ಮಾಡುತ್ತಿರುವುದು ನಾಚಿಕೆಗೇಡಿನ ವಿಷಯ. ಬಲಿಷ್ಠ ಭಾರತ ನಿರ್ಮಾಣ ಬಿಜೆಪಿ ಗುರಿಯಾಗಿದೆ ಎಂದರು.
ಬಿಜೆಪಿಯು ಸರಕಾರಿ ಸೌಲಭ್ಯವನ್ನು ಶಿಬಿರ ನಡೆಸಿ ಜನರ ಮನೆ ಬಾಗಿಲಿಗೆ ಮುಟ್ಟಿಸುವ ಮಹತ್ತರ ಕೆಲಸ ಮಾಡುತ್ತಿದೆ. ಕಾರ್ಯಕರ್ತರು ಇದನ್ನು ಶಕ್ತಿಕೇಂದ್ರ ಮಟ್ಟದಲ್ಲೂ ಮಾಡುವ ಮೂಲಕ ನೆರವಾಗಬೇಕೆಂದರು.