Advertisement

ಸಮಾಜದಲ್ಲಿ ಉತ್ತಮ ಪ್ರಜೆಯಾಗಲು ಪುಸ್ತಕಗಳೇ ಪ್ರೇರಣೆ

05:06 PM May 21, 2023 | Team Udayavani |

ಸಕಲೇಶಪುರ: ಮಾನವನ ಬದುಕನ್ನು ಬದಲಾವಣೆ ಮಾಡುವ ಶಕ್ತಿ ಪುಸ್ತಕಗಳಿಗೆ ಇದೆ. ಇದಲ್ಲದೇ ಪುಸ್ತಕಗಳನ್ನು ಓದುವುದರಿಂದ ಮೃಗದಂತಹ ಮನುಷ್ಯ ಮಾನವೀಯ ಮೌಲ್ಯ ಅಳವಡಿಸಿಕೊಂಡು ಉತ್ತಮ ಪ್ರಜೆಯಾಗಲು ಸಹಕಾರಿಯಾಗುತ್ತವೆ ಎಂದು ಶಾಸಕ ಸಿಮೆಂಟ್‌ ಮಂಜುನಾಥ್‌ ಹೇಳಿದರು.

Advertisement

ಶುಕ್ರವಾರ ಕಸಾಪ, ರೋಟರಿ ಸಂಸ್ಥೆ ಹಾಗೂ ಯದುನಂದನ ಪ್ರಕಾಶನ ಸಹಯೋಗದಲ್ಲಿ ಪಟ್ಟಣದ ರೋಟರಿ ಭವನದಲ್ಲಿ ಗಿರೀಶ್‌ ಕುಮಾರ್‌ ಅವರ ಕವನ ಸಂಕಲನ, ಲೇಖನ ಸಂಕಲನ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಮಾನವ ಓದುವ ಪ್ರವೃತ್ತಿ ಕಡಿಮೆ ಮಾಡಿ, ನೋಡುವ ಪ್ರವೃತ್ತಿ ಹೆಚ್ಚಿಸಿದ್ದಾನೆ. ಇದು ಕ್ಷಣಿಕ ಮಾತ್ರ. ಆದರೆ, ಪುಸ್ತಕ ಓದು ವುದರಿಂದ ಹೆಚ್ಚಿನ ಜ್ಞಾನ ಗಳಿಸಬಹುದು. ಟೀವಿ ವೀಕ್ಷಣೆಯಲ್ಲಿ ಮಹಿಳೆಯ ಪ್ರಮಾಣ ಹೆಚ್ಚಿದೆ. ನೋಡುವ ಬದಲಿಗೆ ಓದುವ ಸಂಸ್ಕೃತಿ ಬೆಳಸಿಕೊಳ್ಳಬೇಕೆಂದು ಸಲಹೆ ನೀಡಿದರು. ಮುಂದಿನ ದಿನಗಳಲ್ಲಿ ಕಸಾಪ ಉಳಿಸಿ ಬೆಳಸುವ ನಿಟ್ಟಿನಲ್ಲಿ ಸಹಕಾರ ನೀಡಲಾಗುವುದು ಎಂದರು.

ಕಸಾಪ ಜಿಲ್ಲಾಧ್ಯಕ್ಷರ ಕಳವಳ: ಕಸಾಪ ಜಿಲ್ಲಾಧ್ಯಕ್ಷ ಮಲ್ಲೇಶ್‌ಗೌಡ ಮಾತನಾಡಿ,ಬರಹಗಾರರ ಬರೆದ ಪುಸ್ತಕಗಳನ್ನು ಸಾಹಿತ್ಯ ಪರಿಷತ್‌ ಮೂಲಕ ಬಿಡುಗಡೆಗೊಳಿ ಸುವ ಆಶಯವನ್ನು ಹೊಂದಿದ್ದೇವೆ. ಪರಿಷತ್ತಿನ ಸದಸ್ಯರು ಜವಾಬ್ದಾರಿಯಿಂದ ಬರಹಗಾರರ ಪರವಾಗಿ ಚಟುವಟಿಕೆ ನಡೆಸಬೇಕು ಎಂದು ಈಗಾಗಲೇ ತಿಳಿಸಲಾಗಿದೆ. ಪ್ರಸ್ತಕ ವಿದ್ಯಮಾನ ಗಮನಿಸಿದರೆ ನಾಡು, ನುಡಿಯ ವಿಚಾರವಾಗಿ ಅಂತಕವಾಗುತ್ತಿದೆ. ಈಗೆ ಮುಂದುವರೆದರೆ ಮುಂದೇನು ಎಂಬ ಕನ್ನಡ ಭಾಷೆ ಎತ್ತ ಸಾಗಲಿದೆ ಎಂಬ ಅಂಶ ನಮ್ಮೆಲ್ಲರ ಮುಂದಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಪುಸ್ತಕ ಓದಿ ಜ್ಞಾನ ಗಳಿಸಿ: ಭೂಮಿಯ ಮೇಲೆ ಅಲೋಚನೆ ಬದಲಾಗಬಹುದು. ಆದರೆ ಅಚರಣೆ ಎಂದಿಗೂ ಬದಲಾಗುವುದಿಲ್ಲ. ತಿಳಿದವರ ಸಂಖ್ಯೆ ಹೆಚ್ಚಿರಬಹುದು.ಆದರೆ, ಜ್ಯಾನವಂತರ ಸಂಖ್ಯೆ ಕಡಿಮೆಯಿದೆ.ಆದ್ದರಿಂದ ಹೆಚ್ಚು ಹೆಚ್ಚು ಪುಸ್ತಕ ಓದುವ ಹವ್ಯಾಸ ಬೆಳಸಿಕೊಂಡರೆ ಜ್ಯಾನ ಸಂಪಾದನೆ ಮಾಡಬಹುದು ಎಂದರು.

ಉತ್ತಮ ಅಲೋಚನೆಗಳಿಂದ ಇಂದಿನ ಯುವ ಜನಾಂಗ ದೂರವಿದೆ. ಇದಕ್ಕೆ ಕಾರಣ ಸಾಹಿತ್ಯ ಹಾಗೂ ಪುಸ್ತಕ ಓದುಗರ ಸಂಖ್ಯೆ ಕ್ಷೀಣಿಸಿರೋದು. ಆರ್ಥಿಕವಾಗಿ ಬಲಿಷ್ಠರಾವರು ಎಲ್ಲೆಡೆ ಸಿಗುತ್ತಾರೆ. ಆದರೆ ಜ್ಞಾನವಂತರ ದುರ್ಬಲರಾಗುತ್ತಿದ್ದಾರೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಭವಿಷ್ಯದ ಕಥೆಯೇನು..? ಪ್ರಸ್ತುತ ಮಕ್ಕಳು, ಯುವಜನತೆ ಮೊಬೈಲ್‌ ಕಡೆ ಹೆಚ್ಚು ಆಕರ್ಷಿತರಾಗಿದ್ದು, ಪೋಷಕರು ಸಹ ಟೀವಿ, ಮೊಬೈಲ್‌ಗೆ ಮಾರು ಹೋಗಿರೋದು ದುರದೃಷ್ಟಕರ. ಹಾಗಾಗಿ ಪೋಷಕರು ಸುಸಂಸ್ಕೃತ ಸಮಾಜದ ನಿರ್ಮಾಣದ ಕಡೆ ಗಮನ ಹರಿಸುವುದು ಒಳಿತು ಎಂದರು.

Advertisement

ಕಾರ್ಯಕ್ರಮದಲ್ಲಿ ಕಸಾಪ ವತಿಯಿಂದ ತಾಲೂಕಿನ ಬಿರಡಹಳ್ಳಿ ಗ್ರಾಪಂ ಪಿಡಿಒ ಆಗಿರುವ ಗಿರೀಶ್‌ ಕುಮಾರ್‌ ಅವರ ನೀರಿಕ್ಷೆ ಎಂಬ ಕವನ ಸಂಕಲನ ಹಾಗೂ ಬನ್ನಿ ಒಮ್ಮೆ ಪ್ರಯತ್ನಿಸೋಣ ಎಂಬ ಲೇಖನ ಸಂಕಲನಗಳ ಕೃತಿಗಳನ್ನು ವೇದಿಕೆಯಲ್ಲಿದ್ದ ಗಣ್ಯರು ಲೊಕಾರ್ಪಣೆಗೊಳಿಸಿದರು.

ಈ ವೇಳೆ ಕಸಾಪ ತಾಲೂಕು ಘಟಕದ ಅಧ್ಯಕ್ಷೇ ಶಾರದ ಗುರುಮೂರ್ತಿ, ತಾಪಂ ಇಒ ರಾಮಕೃಷ್ಣ, ಜಾನಪದ ಕಲಾ ವಿದ ಅಪ್ಪಗೆರೆ ತಿಮ್ಮಾರಾಜು, ರಂಗಕರ್ಮಿ ಪ್ರಸಾದ್‌ ರಕ್ಷಿದಿ, ಸಾಹಿತಿ ಚಲಂ ಹಾಡ್ಲಹಳ್ಳಿ, ರೋಟರಿ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಜಾನೆಕರೆ ಆರ್‌ ಪರಮೇಶ್‌ ಸೇರಿದಂತೆ ಮುಂದಾವರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next