Advertisement
ನಗರದಲ್ಲಿ ಮಾತನಾಡಿದ ಅವರು, ನಮ್ಮ ಸರಕಾರವನ್ನು ನಾನು ಒತ್ತಾಯ ಮಾಡುತ್ತೇನೆ. ಜಿಲ್ಲಾ ಮಂತ್ರಿಗಳು ಜಿಲ್ಲೆಯಲ್ಲಿ ಪ್ರವಾಸ ಮಾಡಬೇಕು. ಬರದ ಬಗ್ಗೆ ಸಮೀಕ್ಷೆ ನಡೆಸಬೇಕು. ಬರ ಪರಿಹಾರ ಸಮರ್ಪಕವಾಗಿ ಕೊಡಲು ಶ್ರಮಿಸಬೇಕು. ಕುಮಾರಸ್ವಾಮಿ ಇವತ್ತು ರೆಸಾರ್ಟ್ ನಲ್ಲಿ ಶಾಸಕರನ್ನು ಕೂಡಿ ಹಾಕಿಕೊಂಡಿದ್ದಾರೆ. ನೀವು ಕೂಡಿ ಹಾಕಿಕೊಂಡರೂ ಅವರು ಯಾರು ಇರಲ್ಲ. ಬಿಜೆಪಿ ಜೆಡಿಎಸ್ ಶಾಸಕರು ಕಾಂಗ್ರೆಸ್ ಗೆ ಬರುತ್ತಾರೆ ಕಾಂಗ್ರೆಸ್ ಸರಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಜೆಡಿಎಸ್ ಜಂಟಿಯಾಗಿ ಕಾರ್ಯಾಚರಣೆ ಮಾಡುತ್ತಿದ್ದಾರೆ ಎಂದರು.
Related Articles
Advertisement
ಇದನ್ನೂ ಓದಿ: FDA Exam: ಆರೋಪಿ ಆರ್. ಡಿ. ಪಾಟೀಲ್ ಜತೆ ಶಾಮೀಲು ನಿಜವಾದರೆ ಕಠಿಣ ಕ್ರಮ: ಪ್ರಿಯಾಂಕ್ ಖರ್ಗೆ
ಶಿವಮೊಗ್ಗ ಡಿಸಿಸಿ ಬ್ಯಾಂಕಿನಲ್ಲಿ ಹಗರಣ ನಡೆದಿದೆ. ಒಂದೊಂದು ಹುದ್ದೆ ಕೊಡಲು 40 ಲಕ್ಷ ಲಂಚ ಪಡೆದಿದ್ದಾರೆ. ಲಂಚ ಹಣ ಪಡೆಯಲು ಉದ್ಯೋಗಿಗಳಿಗೆ ಬ್ಯಾಂಕ್ ನಲ್ಲೇ ಸಾಲ ಕೊಡಿಸಿದ್ದಾರೆ. ಈ ಹಗರಣದಲ್ಲಿ ಸಂಸದ ರಾಘವೇಂದ್ರ ಪಾತ್ರ ಇದೆ. ಈಗ ನಮ್ಮದೇ ಸರಕಾರ ಇದೆ. ಈ ಬಗ್ಗೆ ತನಿಖೆ ಆಗಬೇಕೆಂದರು.
ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ವರ್ಗಾವಣೆ ಹಾಗೂ ಕಿಯೋನಿಕ್ಸ್ ಹಗರಣ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಷಡಾಕ್ಷರಿ ವರ್ಗಾವಣೆ ವಿಚಾರ ಏನು ದೊಡ್ಡ ವಿಚಾರವಲ್ಲ. ಆತ ಸಾಕಷ್ಟು ಅಕ್ರಮ ಆಸ್ತಿ ಸಂಪಾದಿಸಿದ್ದಾನೆ ಆತನ ವಿರುದ್ದ ತನಿಖೆಯಾಗಬೇಕು ಯಾರು ಯಾರದ್ದೋ ತನಿಖೆ ಮಾಡುತ್ತಾರೆ ಈತನ ವಿರುದ್ದವು ತನಿಖೆ ನಡೆಸಲಿ. ಕಿಯೋನಿಕ್ಸ್ ವಿಚಾರದಲ್ಲಿ ಪ್ರಿಯಾಂಕ್ ಖರ್ಗೆ ತಪ್ಪು ಮಾಡಿದ್ರೆ ತನಿಖೆ ಮಾಡಲಿ ಎಂದರು.
ಲೋಕಸಭೆ ಚುನಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು,ಲೋಕಸಭಾ ಚುನಾವಣೆಗೆ ನಾನು ಪ್ರಬಲ ಆಕಾಂಕ್ಷಿ. ನಾನು ಈ ಬಾರಿ ಲೋಕಸಭೆಗೆ ಸ್ಪರ್ಧಿಸುವ ಆಸೆ ಹೊಂದಿದ್ದೇನೆ. ನಾನು ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರ ಬಳಿ ಹೇಳಿದ್ದೇನೆ. ಶಿವಮೊಗ್ಗ ಕ್ಷೇತ್ರದಲ್ಲಿ ಬಿಜೆಪಿ ಎದುರಿಸಲು ನಾನೇ ಪ್ರಬಲ ಸ್ಪರ್ಧಿ ಎಂದರು.
ಡಿಕೆಶಿ ಮುಖ್ಯಮಂತ್ರಿ ಆಗುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು,ಈ ಬಗ್ಗೆ ನನಗೆ ಗೊತ್ತಿಲ್ಲ. ನಾನು ಮುಖ್ಯಮಂತ್ರಿ ಉಪ ಮುಖ್ಯಮಂತ್ರಿ ಬಗ್ಗೆ ಮಾತನಾಡಲ್ಲ. ನಾನು ಹೇಳೋದು ಎಲ್ಲಾ ಶಾಸಕರಿಗು 20:20 ತಿಂಗಳು ಸಚಿವರನ್ನು ಮಾಡಿ ಶಾಸಕರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಬೇಡ 20:20 ತಿಂಗಳು ಎಲ್ಲರನ್ನು ಸಚಿವರನ್ನಾಗಿ ಮಾಡಿ ಅಭಿವೃದ್ಧಿ ಆಗಬೇಕು ಅಂದ್ರೆ ಹೇಗೆ ಬೇಕಾದರೂ ಆಗುತ್ತದೆ ಎಂದರು.
ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರು ಯಾರು ಅನ್ನೋದೆ ನನಗೆ ಗೊತ್ತಿಲ್ಲ. ನಾನು ಕೇವಲ ಶಾಸಕ ಅಷ್ಟೇ. ಮೊದಲು ಮಧು ಬಂಗಾರಪ್ಪ ಉಸ್ತುವಾರಿ ಸಚಿವರಾಗಿದ್ದರಂತೆ.ಈಗ ಉಸ್ತುವಾರಿ ಸಚಿವರು ಯಾರು ಅಂತಾ ನನಗೆ ಗೊತ್ತಿಲ್ಲ ಇವತ್ತು ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಕೆಡಿಪಿ ಸಭೆ ಇದೆಯಂತೆ ಕೆಡಿಪಿ ಸಭೆಗೆ ನನಗೆ ಆಹ್ವಾನವಿಲ್ಲ ಎಂದರು.