Advertisement

ಶಾಸಕನಾಗಿ ಒಳ್ಳೆಯ ಕೆಲಸ ಮಾಡ್ತಿದ್ರೂ ನನಗೆ ಕೆಟ್ಟಹೆಸರು ಬರ್ತಿದೆ

03:37 PM Oct 19, 2020 | Suhan S |

ಎಚ್‌.ಡಿ.ಕೋಟೆ: ತಾಲೂಕಿನ ವಿವಿಧ ಇಲಾಖೆಗಳ ಬಹುತೇಕ ಅಧಿಕಾರಿಗಳು ಕರ್ತವ್ಯಕ್ಕೆ ತಡವಾಗಿ ಆಗಮಿಸಿ, ಮಧ್ಯಾಹ್ನದ ವೇಳೆಗೆಲ್ಲಾ ಕರ್ತವ್ಯ ಬಿಟ್ಟು ಕಚೇರಿಯಿಂದ ತೆರಳುತ್ತಿದ್ದೀರಿ, ಮೈಸೂರಿನಲ್ಲಿರುವ ನಿಮ್ಮ ಮನೆಗಳಿಗೆ ಸೇರಿಕೊಳ್ಳುತ್ತಿದ್ದೀರಿ. ಹೀಗಾದರೆ ತಾಲೂಕಿನ ಜನರ ಕಷ್ಟ ಆಲಿಸುವವರು ಯಾರು ಎಂದು ಶಾಸಕ ಅನಿಲ್‌ ಚಿಕ್ಕಮಾದು ಅವರು ಅಧಿಕಾರಿಗಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.

Advertisement

ಪಟ್ಟಣದ ಅಂಬೇಡ್ಕರ್‌ ಭವನದಲ್ಲಿ ನಡೆದ ತಾಲೂಕು ಮಟ್ಟದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನ ಅಸಮರ್ಥಹಾಗೂ ಲಂಚಾಧಿಕಾರಿಗಳಿಂದ ಹಗಲು ಇರುಳೆನ್ನದೇ ತಾಲೂಕಿನ ಅಭಿವೃದ್ಧಿ ಕೆಲಸಗಳಲ್ಲಿ ಶಾಸಕನಾಗಿ ಸಕ್ರಿಯನಾಗಿರುವ ನನಗೆ ಕೆಟ್ಟ ಹೆಸರು ಬರುತ್ತಿದೆ ಎಂದು ಹರಿಹಾಯ್ದರು.ತಾಲೂಕಿನ ಅರಣ್ಯ ಇಲಾಖೆ ಅಧಿಕಾರಿಗಳು ನೇರವಾಗಿ ಕೇಂದ್ರ ಸರ್ಕಾರದಿಂದಲೇ ಇಳಿದುಬಂದಿರುವಂತೆ ವರ್ತಿಸುತ್ತಿದ್ದೀರಿ. ತಾಲೂಕಿನಯಾವುದೇ ಜನಪರ ಸಭೆ ಸಮಾರಂಭಗಳಿಗೆ ವಲಯ ಅರಣ್ಯಾಧಿಕಾರಿಗಳು ಆಗಮಿಸುತ್ತಿಲ್ಲ, ಅನುದಾನಗಳನ್ನು ಸರಿಯಾಗಿ ಬಳಸುತ್ತಿಲ್ಲ.ಮುಂದಿನ ದಿನಗಳಲ್ಲಾದರೂ ತಾಲೂಕಿನ ಅಭಿ ವೃದ್ಧಿ ಕಾರ್ಯಗಳಿಗೆ ಪೂರಕವಾಗಿ ಕಾರ್ಯನಿರ್ವಹಿಸಿ ಎಂದು ತಾಕೀತು ಮಾಡಿದರು.

ತಾಲೂಕಿನ ಎಸ್ಸಿ ,ಎಸ್ಟಿ ಸಮುದಾಯ ಒತ್ತುವರಿ, ಸ್ಮಶಾನ ತೆರವು, ಕೆರೆಕಟ್ಟೆಗಳ ಒತ್ತುವರಿತೆರವು, ದಲಿತ ಕೇರಿಗಳಲ್ಲಿ ಅಕ್ರಮ ಮದ್ಯ ಮಾರಾಟ ಮತ್ತಿತರ ದೂರುಗಳ ಸಂಬಂಧ ಅಧಿಕಾರಿಗಳು ತೆಗೆದುಕೊಂಡಿರುವ ಕ್ರಮಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.ಸಭೆಯಲ್ಲಿ ತಹಶೀಲ್ದಾರ್‌ ಆರ್‌.ಮಂಜುನಾಥ್‌, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಗೋಪಾಲಕೃಷ್ಣ ಮೂರ್ತಿ, ತಾಪಂ ಇಒ ರಾಮ ಲಿಂಗಯ್ಯ, ಆರೋಗ್ಯಾಧಿಕಾರಿ ಡಾ.ರವಿಕುಮಾರ್‌, ಸರ್ಕಲ್‌ ಇನ್ಸ್‌ಪೆಕ್ಟರ್‌ ಪುಟ್ಟಸ್ವಾಮಿ, ಪಿಎಸ್‌ ಐಗಳಾಎಂ.ನಾಯಕ್‌,ರಾಮಚಂದ್ರನಾಯಕ್‌, ಜಿಪಂ ಸದಸ್ಯ ವೆಂಕಟಸ್ವಾಮಿ, ಪುರಸಭಾಸದಸ್ಯರಾದಪ್ರೇಮ್‌ಸಾಗರ್‌,ಮಧುಕುಮಾರ್‌, ಎಂ.ಸಿ.ದೊಡ್ಡನಾಯಕ, ಬಿಡುಗಳು ಶಿವಣ್ಣ, ಬೆಟ್ಟಯ್ಯಕೋಟೆ, ಸೋಗಳ್ಳಿ ಶಿವಣ್ಣ, ಮುದ್ದು ಮಲ್ಲಯ್ಯ, ಎಚ್‌.ಎನ್‌.ನಾಗರಾಜು, ಜೀವಿಕ ಬಸವರಾಜು ಇತರರಿದ್ದರು.

160 ಕೋಟಿ ದುಡ್ಡಿದ್ದರೂ ಬಳಸುತ್ತಿಲ್ಲ: ಶಾಸಕಕಿಡಿ : ಹಲವು ವರ್ಷಗಳಿಂದ ವಿವಿಧ ಕಡೆಗಳ ಅಂಬೇಡ್ಕರ್‌ ಭವನ ಮತ್ತು ಬಾಬು ಜಗ ಜೀವನರಾಂ ಭವನಗಳಕಾಮಗಾರಿಅಪೂರ್ಣಗೊಂಡಿದೆ. ಅನುದಾನ ಬಿಡುಗಡೆಯಾಗಿದ್ದರೂಅಧಿಕಾರಿಗಳುಪೂರ್ಣಗೊಳಿಸುತ್ತಿಲ್ಲ. ತಾಲೂಕಿನ ಎಸ್ಸಿ, ಎಸ್ಟಿ ಅಭಿವೃದ್ಧಿಗೆ 160 ಕೋಟಿರೂ.ಮಂಜೂರಾಗಿದ್ದರೂಅಧಿಕಾರಿಗಳು ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡುತ್ತಿಲ್ಲ ಎಂದು ಶಾಸಕರು ಆಕ್ರೋಶ ವ್ಯಕ್ತಪಡಿಸಿದರು.

ಲಂಚಕೊಟ್ಟರೆ ಮಾತ್ರ ಪೊಲೀಸ್‌ ಠಾಣೆಯಲ್ಲಿ ಕೆಲಸ :  ಪೊಲೀಸ್‌ ಠಾಣೆ ಎಂಬ ಬೋರ್ಡ್‌ ತೆಗೆಸಿ ಪೊಲೀಸ್‌ ಬ್ಯಾಂಕ್‌ ಎಂಬ ಬೋರ್ಡ್‌ ಅಳವಡಿಸಿಕೊಳ್ಳಿ.ಆಗ ನೊಂದು ನ್ಯಾಯಕ್ಕಾಗಿ ಠಾಣೆಗೆಬರುವ ಮಂದಿಯಿಂದ ನೀವು ಪಡೆಯುವ ಲಂಚದಹಣಕ್ಕೆ ಅರ್ಥ ಸಿಗುತ್ತದೆ ಎಂದು ಶಾಸಕ ಅನಿಲ್‌ ಚಿಕ್ಕಮಾದು ಅವರು ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು. ಅನ್ಯಾಯ, ದೌರ್ಜನ್ಯಕ್ಕೊಳಗಾದ ಮಂದಿ ನ್ಯಾಯಕ್ಕಾಗಿ ಪೊಲೀಸ್‌ ಠಾಣೆಗೆ  ಆಗಮಿಸಿದರೆ ಕನಿಷ್ಠ 5 ಸಾವಿರ ರೂ. ಲಂಚ ಪಡೆಯಲಾಗುತ್ತಿದೆ ಎಂಬ ಆರೋಪಗಳು ವಿಡಿಯೋ ಸಮೇತ ಸಾರ್ವಜನಿಕರಿಂದ ನನಗೆ ಬಂದಿವೆ.ಪೊಲೀಸ್‌ ಠಾಣೆ ಏನೂ ದೇವಾಲಯನಾ, ನ್ಯಾಯಕ್ಕಾಗಿ ಠಾಣೆಗೆ ಆಗಮಿಸುವ ಬಡಜನರು ನಿಮ್ಮ ಹುಂಡಿಗೆ ಹಣ ಹಾಕಿ ಹೋಗಬೇಕಾ, ವಾಹನ ಸವಾರರಿಂದ ಮಾಸಿಕ ವಸೂಲಿ ಮಾಡುತ್ತಿದ್ದೀರಿ.ಮುಂದೆ ಹೀಗಾಗದಂತೆ ನೋಡಿಕೊಳ್ಳಿ ಎಂದು ಶಾಸಕರು ಹರಿಹಾಯ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next