ಎಚ್.ಡಿ.ಕೋಟೆ: ಕಾಡಂಚಿನ ಆದಿವಾಸಿಗರ ಮನೆಗಳಿಗೆ ಭಾಗ್ಯಜ್ಯೋತಿ ಯೋಜನೆ ವೈರಿಂಗ್ ಕೆಲಸ ಪೂರ್ಣಗೊಂಡು ತಿಂಗಳುಗಳೇ ಉರುಳಿದರೂ ಸಂಪರ್ಕ ಕಲ್ಪಿಸದ ಚೆಸ್ಕ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ ಅನಿಲ್ ಚಿಕ್ಕಮಾದು, ಮಂಗಳವಾರವೇ ಹಾಡಿಯ 102 ಮನೆಗಳಿಗೆ ಸಂಪರ್ಕ ಕಲ್ಪಿಸಿಯೇ ತೀರುವಂತೆ ಸ್ಥಳದಲ್ಲಿ ಸೂಚನೆ ನೀಡಿದರು.
ಸರಗೂರು ತಾಲೂಕಿನ ಬಾಡಿಗೆ ಮಟಕೆರೆ ಗ್ರಾಮ ವಾಸ್ತವ್ಯದ 2ನೇ ದಿನವಾದ ಸೋಮವಾರ ಶಾಸಕಅನಿಲ್ ಚಿಕ್ಕಮಾದು ತಾಲೂಕಿನ ಕೆಬ್ಬೆಪುರ ಎ ಹಾಡಿಗೆ ಭೇಟಿ ನೀಡಿ ಸಮಸ್ಯೆ ಆಲಿಸಿದರು.
ಗ್ರಾಮಸ್ಥರ ಮನವಿ ಏನು?: ಕೆಬ್ಬೆಪುರ ಎ ಹಾಡಿಯ 62ಮನೆ ಮತ್ತು ಕೆಬ್ಬೆಪುರ ಬಿ ಹಾಡಿಯ 40ಮನೆಗಳಭಾಗ್ಯಜ್ಯೋತಿ ಸಂಪರ್ಕದ ವೈರಿಂಗ್ ಕಾಮಗಾರಿಪೂರ್ಣಗೊಂಡು ಹಲವು ತಿಂಗಳೇ ಉರುಳಿದರೂಸಂಪರ್ಕ ಕಲ್ಪಿಸಿಲ್ಲ. ಅರಣ್ಯದಂಚಿನ ಗ್ರಾಮಗಳ ಮನೆಮತ್ತು ಕೃಷಿ ಭೂಮಿಗಳಿಗೆ ಅರಣ್ಯ ಇಲಾಖೆ ತೊಂದರೆನೀಡುತ್ತಿದ್ದಾರೆ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿದ್ದುಪ್ರಾಣಿಗಳ ತಡೆಗೆ ರೈಲ್ವೆಕಂಬಿ ಅಳವಡಿಸುವಂತೆ ಮನವಿ ಮಾಡಿಕೊಂಡರು.
ಸರಗೂರು ತಾಲೂಕಿನ ಕಾಡಂಚಿನ ಗಡಿಭಾಗಬಿ.ಮಟಕೆರೆ ಇಲ್ಲಿಯ ವಿದ್ಯಾರ್ಥಿಗಳು, ಸ್ಪರ್ಧಾತ್ಮಕ ತಾಲೂಕು ಕೇಂದ್ರಕ್ಕೆ ಆಗಮಿಸಬೇಕು. ಇದರಿಂದಜನರಿಗೆ ತೊಂದರೆಯಾಗುವುದನ್ನು ಮನಗಂಡ ಶಾಸಕರು, ಬಿ.ಮಟಕೆರೆ ಗ್ರಾಮದಲ್ಲಿ ಡಿಜಿಟಲ್ ಗ್ರಂಥಾಲಯ ಆರಂಭಿಸುವ ಮೂಲಕ ಆ ಭಾಗದ ಎಲ್ಲಾ ಆನ್‌ಲೈನ್ ಅರ್ಜಿ ಸಲ್ಲಿಕೆ ಉಚಿತವಾಗಿ ನೆರವೇರಿಸಲು ಚಾಲನೆ ನೀಡಿದರು.
ಅಂಬೇಡ್ಕರ್ ನಿಗಮ ಮಂಡಳಿ ವತಿಯಿಂದ 4ಮಂದಿ ಫಲಾನುಭವಿಗಳಿಗೆ ಉಚಿತವಾಗಿ ಕೃಷಿಗೆಬೋರ್‌ವೆಲ್ ಕೊರೆಸಲು ಚಾಲನೆ ನೀಡಲಾಯಿತು. ಇನ್ನುಳಿದಂತೆ ಬಿ.ಮಟಕೆರೆ ಗ್ರಾಮದ ರಸ್ತೆಗಳಿಗೆನಾಮಫಲಕ ಅಳವಡಿಕೆ, ರಸ್ತೆ ಅಭಿವೃದ್ಧಿ ಕಾಮಗಾರಿಗೆಚಾಲನೆ ಹಾಗೂ ಮನೆಮನೆಗಳಿಗೆ ಮನೆ ಸಂಖ್ಯೆ ನಮೂದಿಸುವ ಕಾರ್ಯ ನಡೆಯಿತು. ಹೋದ ಕಡೆಗಳಲ್ಲೆಲ್ಲಾ ಬಹುತೇಕ ರಸ್ತೆ, ಕುಡಿವ ನೀರಿನಸಮಸ್ಯೆ, ಕಾಡುಪ್ರಾಣಿಗಳ ಹಾವಳಿ, ಅರಣ್ಯ ಇಲಾಖೆಅಧಿಕಾರಿಗಳಿಂದ ರೈತರಿಗೆ ತೊಂದರೆ ಬಗೆಗಿನ ಆರೋಪ ವ್ಯಾಪಕವಾಗಿ ಕೇಳಿ ಬಂದವು.
ಸಮಸ್ಯೆ ನಿವಾರಿಸುವ ಭರವಸೆ: ಸಮಸ್ಯೆ ಆಲಿಸಿದ ಶಾಸಕ ಅನಿಲ್ ಚಿಕ್ಕಮಾದು ತಾಲೂಕು ಅಧಿಕಾರಿಗಳ ಮಟ್ಟದಲ್ಲಿ ಆಗುವ ಕಾರ್ಯಗಳನ್ನು ಶೀಘ್ರದಲ್ಲಿನೆರವೇರಿಸುವುದೇ ಅಲ್ಲದೆ ಸರ್ಕಾರದ ಮಟ್ಟದಕಾರ್ಯಗಳನ್ನು ಸಚಿವರು ಸರ್ಕಾರದೊಡನೆ ಸಮಾಲೋಚನೆ ನಡೆಸಿ ಹಂತಹಂತವಾಗಿ ಸರಿಪಡಿಸುವ ಭರವಸೆ ನೀಡಿದರು.
ಇಡೀ ದಿನ ಸಮಸ್ಯೆ ಆಲಿಸಿ ದಣಿದಿದ್ದ ಕ್ಷೇತ್ರದ ಶಾಸಕ ಅನಿಲ್ ಚಿಕ್ಕಮಾದು 2ನೇ ದಿನದ ಗ್ರಾಮವಾಸ್ತವ್ಯ ಕೂಡ ಬಿ.ಮಟಕೆರೆ ಆಶ್ರಮ ಶಾಲೆಯಲ್ಲಿಯೇಕಳೆಯಲು ಸಿದ್ಧತೆ ಮಾಡಲಾಗಿತ್ತು. ತಹಶೀಲ್ದಾರ್‌ಪ್ರಣೀತಾ, ಇಒ ರಾಮಲಿಂಗಯ್ಯ, ತಾಲೂಕುಆರೋಗ್ಯಾಧಿಕಾರಿ ಡಾ.ರವಿಕುಮಾರ್, ತಾಲೂಕುಗಿರಿಜನ ಅಭಿವೃದ್ಧಿ ಇಲಾಖಾ ಅಧಿಕಾರಿ ಚಂದ್ರಪ್ಪ,ಆರ್‌ಎಫ್‌ಒ ಪುಟ್ಟಸ್ವಾಮಿ ಸೇರಿದಂತೆ ಇತರೆಅಧಿಕಾರಿಗಳು ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು, ತಾಪಂ, ಗ್ರಾಪಂ ಸದಸ್ಯರು, ಗ್ರಾಮದ ಮುಖಂಡರು ಇದ್ದರು.
3 ಕೋಟಿ ರೂ.ವೆಚ್ಚದ ಕಾಮಗಾರಿಗೆ ಚಾಲನೆ : ಸೀಗೇವಾಡಿ, ಮೊಳೆಯೂರು, ಹಿರೇಹಳ್ಳಿ, ಕಾಂತನಹಾಡಿ, ಕಂದಲಿಕೆಗಳಿಗೆ ಭೇಟಿ ನೀಡಿಜನರ ಸಮಸ್ಯೆ ಆಲಿಸುವುದರ ಜತೆಗೆ ರಸ್ತೆ,ಕಾಮಗಾರಿ ಕುಡಿವ ನೀರು, ಟ್ಯಾಂಕ್ ನಿರ್ಮಾಣಕಾಮಗಾರಿ, ಶಾಲೆ ಶೌಚಾಲಯ ನಿರ್ಮಾಣ,ಶಾಲೆ ಅಡುಗೆ ಕೊಠಡಿ ನಿರ್ಮಾಣ ಸೇರಿ ಇನ್ನಿತರಕಾಮಗಾರಿಗಳ ಸುಮಾರು 3ಕೋಟಿ ರೂ. ಅಂದಾಜು ವೆಚ್ಚದ ಕಾಮಗಾರಿಗೆ ಶಾಸಕ ಅನಿಲ್ ಚಿಕ್ಕಮಾದು ಭೂಮಿ ಪೂಜೆ ನೆರವೇರಿಸಿದರು.