Advertisement

ರಾಜಕೀಯದಿಂದ ನಿವೃತ್ತನಾಗುತ್ತೇನೆ ಹೊರತು, ಕುಷ್ಟಗಿ ವಿಧಾನಸಭಾ ಕ್ಷೇತ್ರ ಬದಲಾವಣೆ ಮಾಡಲಾರೆ; ಶಾಸಕ ಅಮರೇಗೌಡ ಪಾಟೀಲ

10:38 AM Dec 03, 2022 | Team Udayavani |

ಕುಷ್ಟಗಿ: ರಾಜಕೀಯದಿಂದ ನಿವೃತ್ತನಾಗುತ್ತೇನೆ ಹೊರತು, ಯಾವುದೇ ಕಾರಣಕ್ಕೂ ಕುಷ್ಟಗಿ ವಿಧಾನಸಭಾ ಕ್ಷೇತ್ರ ಬದಲಾವಣೆ ಮಾಡಲಾರೆ. ಕುಷ್ಟಗಿಯಿಂದಲೇ ಸ್ಪರ್ಧಿಸುವೆ ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಸ್ಪಷ್ಟಪಡಿಸಿದರು.

Advertisement

ಈ ಕುರಿತು ಉದಯವಾಣಿ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ಈ ಬಾರಿಯೂ ಕುಷ್ಟಗಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವೆ, ಕ್ಷೇತ್ರ ಬದಲಾವಣೆ ಮಾಡಲಾರೆ ಎಂದರು.

ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಕುಷ್ಟಗಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಬಗ್ಗೆ ನನಗೆ ಮಾಹಿತಿ ಇಲ್ಲ. ಅವರು ರಾಜ್ಯದ ಮುಖ್ಯಮಂತ್ರಿಯಾದವರು, ರಾಜ್ಯದ 224 ಕ್ಷೇತ್ರಗಳಲ್ಲಿ ಎಲ್ಲಿಯಾದರೂ ಸ್ಪರ್ಧಿಸುವ ವಿಚಾರ ಅವರ ವಿವೇಚನೆಗೆ ಬಿಟ್ಟಿದ್ದು.  ಅವರು ಒಂದು ಕ್ಷೇತ್ರ ಅಥವಾ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಬಹುದಾಗಿದೆ.

ಕುಷ್ಟಗಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದರೆ ನಾನು ಹಾರ್ಧಿಕವಾಗಿ ಸ್ವಾಗತಿಸುವೆ ಎಂದರು. ಸಿದ್ದರಾಮಯ್ಯ ಅವರು ತಮ್ಮ ಸ್ಪರ್ಧೆಯ ಬಗ್ಗೆ ಬಿಜೆಪಿ, ಆರ್.ಎಸ್.ಎಸ್ ನವರಿಗೆ ದಾರಿ ತಪ್ಪಿಸುದ್ದಾರೆಯೇ? ಪ್ರಶ್ನೆಗೆ ಪ್ರತಿಕಿಯಿಸಿದ ಶಾಸಕ ಬಯ್ಯಾಪೂರ ಅವರು, ಯಾರಿಗೆ ಯಾರೂ ತಪ್ಪಿಸುವುದಿಲ್ಲ ಎಂದರು.

ಕುಷ್ಟಗಿ ವಿಧಾನಸಭಾ ಕ್ಷೇತ್ರಕ್ಕೆ ಅರ್ಜಿ ಸಲ್ಲಿಸಿರುವ ಕೆಬಿಜೆಎನ್ ಎಲ್ ನಿವೃತ್ತ ಪ್ರಧಾನ ಇಂಜಿನೀಯರ ಅವರು, ಕುಷ್ಟಗಿ ವಕ್ಕಂದುರ್ಗಾದೇವಿಗೆ ಕಾಯಿ ಮೀಸಲಿಟ್ಟಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಶಾಸಕ ಬಯ್ಯಾಪೂರ ಅವರು, ಇರಬಹುದು ಪ್ರಭಾಕರ್ ಚಿಣಿ ನಮ್ಮ ( ಕಾಂಗ್ರೆಸ್) ಪಕ್ಷದವರು ಅವರೂ ಆಕಾಂಕ್ಷಿ ಎಂದು ಅರ್ಜಿ ಸಲ್ಲಿಸಿದ್ದಾರೆ ಎಂದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next