Advertisement

ಶಾಸಕ ಅಜಯಸಿಂಗ್‌ ನಗರ ಸಂಚಾರ

03:09 PM Mar 11, 2017 | Team Udayavani |

ಜೇವರ್ಗಿ: ಪಟ್ಟಣದ ಓಂ ನಗರ, ಜೇವರ್ಗಿ.ಕೆ, ವಾರ್ಡ್‌ ನಂ.10 ಸೇರಿದಂತೆ ಕೆಲವು ವಾರ್ಡ್‌ಗಳಲ್ಲಿ ಶಾಸಕ ಡಾ| ಅಜಯಸಿಂಗ್‌ ಪುರಸಭೆ ಅಧಿಕಾರಿಗಳೊಂದಿಗೆ ನಗರ ಸಂಚಾರ ಕೈಗೊಂಡರು. ಪಟ್ಟಣದ ಕೆಲವು ವಾರ್ಡ್‌ಗಳಲ್ಲಿ ಸಂಚರಿಸಿ ಸಾರ್ವಜನಿಕರಿಂದ ಕುಂದುಕೊರತೆ ಆಲಿಸಿದರು.

Advertisement

ನಂತರ ಪುರಸಭೆಯ ವಿವಿಧ ಯೋಜನೆಗಳಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿ ವೀಕ್ಷಿಸಿ ಪರಿಶೀಲನೆ ನಡೆಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಶಾಸಕ ಡಾ| ಅಜಯಸಿಂಗ್‌, ನಗರೊತ್ಥಾನ ಯೋಜನೆ ಹಂತ-3ರಲ್ಲಿ 5 ಕೋಟಿ ರೂ., ಎಸ್‌ಸಿಪಿ/ಟಿಎಸ್‌ಪಿ ಯೋಜನೆಯಲ್ಲಿ 5 ಕೋಟಿ ರೂ., 14ನೇ ಹಣಕಾಸು ಯೋಜನೆಯಲ್ಲಿ 1.24 ಕೋಟಿ, ಎಸ್‌ಎಫ್‌ಸಿ ಯೋಜನೆಯಡಿ 1.52 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು. 

ಪಟ್ಟಣದಲ್ಲಿ ಸಾರ್ವಜನಿಕ ಶೌಚಾಲಯ, ಬೀದಿ ದೀಪಗಳ ವ್ಯವಸ್ಥೆ, ಚರಂಡಿ, ಪಾದಚಾರಿ ಮಾರ್ಗ, ಕುಡಿಯುವ ನೀರಿನ ಸಮಸ್ಯೆಯಾಗದಂತೆ ಅಧಿಧಿಕಾರಿಗಳು ಎಚ್ಚರವಹಿಸಬೇಕು. ಪರಿಶಿಷ್ಟ ಕಾಲೋನಿಗಳಲ್ಲಿ ಎಸ್‌ಸಿಪಿ/ಟಿಎಸ್‌ಪಿಯ ಶೇ.40 ರಷ್ಟು ಅನುದಾನವನ್ನು ಬಳಕೆ ಮಾಡಬೇಕು. ಪ್ರತಿಯೊಂದು ಕಾಮಗಾರಿಗಳು ಗುಣಮಟ್ಟದಿಂದ ಮತ್ತು ನಿಗದಿತ ಕಾಲಮಿತಿಯಲ್ಲಿ ಮಾಡಬೇಕು ಎಂದು ಹೇಳಿದರು. 

ಕಳೆದ ನಾಲ್ಕು ವರ್ಷದಲ್ಲಿ ಪುರಸಭೆಗೆ ಕೋಟ್ಯಂತರ ರೂ. ಅನುದಾನ ನೀಡಲಾಗಿದೆ. ಜಿಲ್ಲೆಯಲ್ಲಿಯೇ ಮಾದರಿ ಪಟ್ಟಣವನ್ನಾಗಿ ಅಭಿವೃದ್ಧಿ ಮಾಡುವುದರ ಜೊತೆಗೆ ಸೌಂದಯಿìಕರಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಈಗಾಗಲೇ ಪುಟ್‌ಪಾತ್‌ ಕಾಮಗಾರಿ ಮುಗಿಯುವ ಹಂತದಲ್ಲಿದ್ದು, ಟೌನ್‌ ಹಾಲ್‌ ಕಾಮಗಾರಿಗೆ ಚಾಲನೆ ನೀಡಲಾಗಿದೆ. 

ಶೀಘ್ರದಲ್ಲೇ ಶಾಪಿಂಗ್‌ ಮಹಲ್‌, ತರಕಾರಿ ಮಾರುಕಟ್ಟೆ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು ಎಂದು ಹೇಳಿದರು. ಪುರಸಭೆ ಮುಖ್ಯಾಧಿಧಿಕಾರಿ ಬಸವರಾಜ ಶಿವಪೂಜೆ, ನಗರೋತ್ಥಾನ, ಎಸ್‌ಸಿಪಿ-ಎಸ್ಟಿಪಿ, 14ನೇ ಹಣಕಾಸು ಯೋಜನೆಯಲ್ಲಿ ಬಿಡುಗಡೆಯಾದ ಅನುದಾನದಲ್ಲಿಕುಡಿಯುವ ನೀರಿಗಾಗಿ 4 ಕೋಟಿ ರೂ., ರಸ್ತೆ ಅಭಿವೃದ್ಧಿಗೆ 1.26 ಕೋಟಿ ರೂ. ಸೇರಿದಂತೆ ಕಾಮಗಾರಿಗಳಿಗೆ ಹಂಚಿಕೆಯಾದ ಅನುದಾನದ ಮಾಹಿತಿ ನೀಡಿದರು. 

Advertisement

ಪುರಸಭೆಯ ಕಿರಿಯ ಇಂಜಿನೀಯರ್‌ ನಾನಾಸಾಹೇಬ ಕೋಳಕೂರ, ಮುಖಂಡರಾದ ರಾಜಶೇಖರ ಸೀರಿ, ಶರಣು ಗುತ್ತೇದಾರ, ನೀಲಕಂಠ ಅವಂಟಿ, ರಹೆಮಾನ ಪಟೇಲ, ರವಿ ಕೋಳಕೂರ, ಸಲಿಂ ಕಣ್ಣಿ, ಪುರಸಭೆ ಸದಸ್ಯರಾದ ಮಹಿಬೂಬ ಚನ್ನೂರ, ಬಸವರಾಜ ಪೂಜಾರಿ, ಮರೆಪ್ಪ ಸರಡಗಿ ಹಾಗೂ ಇತರರು ಇದ್ದರು.  

Advertisement

Udayavani is now on Telegram. Click here to join our channel and stay updated with the latest news.

Next