ಅಥಣಿ: ಕರಿ ಮಸೂತಿ ಏತ ನೀರಾವರಿ ಯೋಜನೆಯಲ್ಲಿ ಕಾಲುವೆಗೆ ಹರಿ ಬಿಡಲಾಗುತ್ತಿರುವ ಪ್ರತಿಯೊಂದು ಹನಿ ನೀರು ಮಹತ್ವದಾಗಿದೆ. ಆದ್ದರಿಂದ ರೈತರು ನೀರು ಪೋಲು ಮಾಡದೇ ತಮ್ಮ ಜಮೀನುಗಳಿಗೆ ಬಳಿಸಿಕೊಳ್ಳಬೇಕು ಎಂದು ಶಾಸಕ ಮಹೇಶ ಕುಮಠಳ್ಳಿ ಹೇಳಿದರು. ಕರಿಮಸೂತಿ ನೀರಾವರಿಯ ಪೂರ್ವ ಕಾಲುವೆಯಡಿ ಬರುವ ಪಂಪ್‌ಹೌಸ ಹಂತ 1ರ ಅಚ್ಚುಕಟ್ಟು ಪ್ರದೇಶದಲ್ಲಿ ಬರುವ ನಂದಗಾಂವ, ಕಟಗೇರಿ, ಬಡಚಿ, ಯಲಹಡಲಗಿ ಹಾಗೂ ಅಡಹಳ್ಳಿ ಕಾಲುವೆಯ ನೀರು ನಿರ್ವಹನೆಯ ಕುರಿತು ಪರಿಶೀಲನೆ ನಡೆಸಿ ಅವರು ಮಾತನಾಡಿದರು.
ಕರಿ ಮಸೂತಿ ಏತ ನೀರಾವರಿ ಯೋಜನೆ ಸುಮಾರು 75 ಕೀಲೊ ಮೀಟರವರೆಗೆ ಇದ್ದು, ಈ ದೂರನ್ನು ತಲುಪಲು ಮೊದಲು 30 ದಿನಗಳವರೆಗೆ ಸಮಯ ಬೇಕಾಗುತ್ತಿತ್ತು. ಆದರೆ ನೀರಾವರಿ ಇಲಾಖೆಯ ಅಧಿಕಾರಿಗಳ ಸಹಕಾರದಿಂದ ಈಗ ಕೇವಲ 22ದಿನಗಳಲ್ಲಿ ನೀರು ನಿರ್ವಹಣೆ ಕಡೆ ಹಂತದವರೆಗೆ ತಲುಪುವಂತಾಗಿದೆ ಎಂದು ತಿಳಿಸಿದರು.
ಈ ವೇಳೆ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತ ಅರುಣ ಯಲಗುದ್ರಿ ಮಾತನಾಡಿ, ಸೈಫಾನ್ ಪೈಪ್‌ಗ್ಳ ಮೂಲಕ ರೈತರು ನೀರನ್ನು ಬಳಕೆ ಮಾಡುವುದು ತಪ್ಪು. ಇದರಿಂದ ನೀರು ಸೋರಿ ಕಡೆ ಹಂತದ ರೈತನಿಗೆ ನೀರು ಸಿಗದಂತಾಗುತ್ತದೆ. ಕಾರಣ ರೈತರು ಕಡೆ ಹಂತದ ರೈತನ ಹಿತದೃಷ್ಟಿಯಿಂದ ಎಲ್ಲ ರೈತರು ನೀರನ್ನು ಮಿತವಾಗಿ ಹಿತವಾಗಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಈ ವೇಳೆ ರೈತರು ತಮ್ಮ ಸಮಸ್ಯೆಗಳನ್ನು ಶಾಸಕರ ಮುಂದೇ ತಿಳಿಸಿದಾಗ ಶಾಸಕರು ಅವರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚನೆ ನೀಡುವ ಮೂಲಕ ರೈತರ ಸಮಸ್ಯೆಗಳನ್ನು ಪರಿಹರಿಸುವಂತೆ ಸೂಚಿಸಿದರು. ಈ ವೇಳೆ ನೀರಾವರಿ ಇಲಾಖೆಯ ಅಧಿಕಾರಿಗಳಾದ ಮೋಹನದಾಸ, ನಟರಾಜಕುಮಾರ, ಎಸ್.ಬಿ. ಕರಡಿ, ಸೈಯಾಜಿರಾವ ದೇಸಾಯಿ, ಸಂಜಯ ಇಂಗೋಲಿ, ರವಿ ಪಾಟೀಲ, ಅನಿಲ ಕಾಮಂತ, ಶಿವಕುಮಾರ ದೇಸಾಯಿ, ಉದಯ ಪಾಟೀಲ, ಮಲ್ಲಪ್ಪ ಕಳ್ಳಿ ಸೇರಿದಂತೆ ಇತರರು ಇದ್ದರು.