Advertisement

ಮಿಯಾಝಾಕಿ…ತಿಂದವನೇ ಪರಮ ಸುಖೀ!

10:54 AM Jun 28, 2021 | Team Udayavani |

ಬೆಲೆ ಬಾಳುವ ವಸ್ತುಗಳು ಇರುವ ಸ್ಥಳದಲ್ಲಿ ಬಿಗಿಯಾದ ಕಾವಲು ಇರುತ್ತದೆ. ಆದರೆ ಮಾವಿನ ಗಿಡಕ್ಕೂ ನಾಲ್ವರು ಗಂಡಾಳುಗಳು ಹಾಗೂ ಆರು ನಾಯಿಗಳನ್ನು ಭದ್ರತೆಗಾಗಿ ನಿಯೋಜಿಸುತ್ತಾರೆಯೇ? ಮಧ್ಯ ಪ್ರದೇಶದ ಜಬಲ್ಪುರದಲ್ಲಿ ರಾಣಿ, ಸಂಕಲ್ಪ್ ಪರಿಹಾರ್‌ ಎಂಬ ದಂಪತಿ, ತಮ್ಮ ತೋಟದಲ್ಲಿ ಬೆಳೆದಿರುವ ಜಪಾನ್‌ ಮೂಲದ “ಮಿಯಾಝಾಕಿ’ ಎಂಬ ಮಾವಿನ ತಳಿಯ ಗಿಡಕ್ಕೆ ಬಿಗಿ ಭದ್ರತೆ ಕಲ್ಪಿಸಿದ್ದಾರೆ.

Advertisement

ಹಣ್ಣಿನ ವಿಶೇಷಗಳೇನು?
ಜಪಾನ್‌ನ ಮಿಯಾಝಾಕಿ ಎಂಬ ಊರಿನಲ್ಲಿ ಮಾತ್ರ ಬೆಳೆಯಲಾಗುತ್ತಿದ್ದುದರಿಂದ ಈ ಹೆಸರು ಅಂಟಿಕೊಂಡಿದೆ. ಕೆಂಪು ಮಾಣಿಕ್ಯದ ಬಣ್ಣ ಹೊಂದಿರುವ ಪ್ರತೀ ಹಣ್ಣು 350 ಗ್ರಾಂ ತೂಗುತ್ತದೆ. ಸಾಮಾನ್ಯ ಮಾವುಗಳಿಗೆ ಹೋಲಿಸಿದರೆ, ಇದರಲ್ಲಿನ ಸಿಹಿ ಶೇ. 15ಕ್ಕಿಂತ ಜಾಸ್ತಿಯಿರುತ್ತದೆ. ಕೆಂಪಾಗಿ ಕಾಣುವ ಇವುಗಳಿಗೆ ಜಪಾನಿ ಭಾಷೆಯಲ್ಲಿ ಸೂರ್ಯನ ಮೊಟ್ಟೆಗಳೆಂಬ ಅಡ್ಡ ಹೆಸರೂ ಇದೆ.

ತಳಿ ಸಿಕ್ಕಿದ್ದೇ ಆಕಸ್ಮಿಕ
ಕೆಲವು ವರ್ಷಗಳ ಹಿಂದೆ ಸಂಕಲ್ಪ್, ಕೆಲವು ಹಣ್ಣಿನ ಗಿಡಗಳನ್ನು ತರಲೆಂದು ರೈಲಿನಲ್ಲಿ ಚೆನ್ನೈಗೆ ಹೋಗುತ್ತಿದ್ದರು. ರೈಲಿನಲ್ಲಿ ಭೇಟಿಯಾದ ಅಪರಿಚಿತರೊಬ್ಬರು ತಮ್ಮಲ್ಲಿ ಅಮೂಲ್ಯವಾದ ಮಾವಿನ ಸಸಿಯಿದ್ದು ಅವನ್ನು ನಿಮ್ಮ ಮಕ್ಕಳಂತೆ ನೋಡಿಕೊಳ್ಳುವು­ದಾದರೆ ಕೊಡುವುದಾಗಿ ತಿಳಿಸಿದ. ಅದಕ್ಕೊಪ್ಪಿದ ಅವರು ಆ ಸಸಿಗಳನ್ನು ಆತನಿಂದ ಪಡೆದು ತಂದು ಗಿಡ ನೆಟ್ಟು ಪೋಷಿಸಿದ್ದಾರೆ.

ಸಿರಿವಂತರ ದುಂಬಾಲು
ಇವರ ತೋಟದಲ್ಲಿರುವ ಆ ಗಿಡದಲ್ಲಿ ಮಾವಿನ ಹಣ್ಣುಗಳು ಬಿಡಲಾರಂ­ಭಿಸಿವೆ. ಸದ್ಯಕ್ಕೆ 7ರಿಂದ 8 ಕಾಯಿಗಳು ಕಾಣಿಸಿಕೊಂಡಿದ್ದು, ಇದನ್ನು ತಿಳಿದ ಅನೇಕ ಶ್ರೀಮಂತರು ಈ ಹಣ್ಣನ್ನು ತಮಗೇ ಕೊಡುವಂತೆ ದುಂಬಾಲು ಬಿದ್ದಿದ್ದಾರಂತೆ! ಒಂದು ಹಣ್ಣಿಗೆ 21,000 ರೂ. ಕೊಡಲು ತಯಾರಾಗಿದ್ದಾರಂತೆ!

ಔಷಧದ ಗುಣಗಳು
ಇವು ಆ್ಯಂಟಿ ಆಕ್ಸಿಡೆಂಟ್ಸ್‌ ಹಾಗೂ ಬಿಟಾ ಕೆರೋಟಿನ್‌ ಹಾಗೂ ಫಾಲಿಕ್‌ ಆಮ್ಲವನ್ನು ಹೊಂದಿವೆ. ಕಣ್ಣುಗಳಿಗೆ ತುಂಬಾ ಒಳ್ಳೆಯದು. ದೃಷ್ಟಿ ಸಮಸ್ಯೆ ಗಳನ್ನು ನೀಗಿಸುವಲ್ಲಿ ಸಹಾಯಕಾರಿ.

Advertisement

ಅತ್ಯಂತ ದುಬಾರಿ
ಜಪಾನ್‌ನ ಮಿಯಾಝಾಕಿ ತಳಿಯ ಮಾವಿನ ಹಣ್ಣುಗಳು ವಿಶ್ವದಲ್ಲೇ ಅತೀ ವಿಶಿಷ್ಟ ವಾದದ್ದು. ಕಳೆದ ವರ್ಷ ಅಂತಾರಾಷ್ಟ್ರೀಯ ಮಾರುಕಟ್ಟೆ­ಯಲ್ಲಿ ಕೆಜಿಗೆ 2.70 ಲಕ್ಷ ರೂ.ಗಳಿಗೆ ಮಾರಾಟವಾಗಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next