Advertisement
ಪ್ರತಿಭಟನಕಾರರು ಬಂದ್ ಮಾಡಿ ಸಹಕರಿಸುವಂತೆ ಮನವಿ ಮಾಡಿದ್ದರೂ ಬಹುತೇಕ ವರ್ತಕರು ವ್ಯವಹಾರ ನಡೆಸಿದರು. ಕೆಲವು ಅಂಗಡಿ, ಹೊಟೇಲ್‌ಗಳು ಮುಚ್ಚಿದ್ದವು. ಸರಕಾರಿ ಕಚೇರಿಗಳು ಕಾರ್ಯನಿರ್ವಹಿಸಿದವು. ಬಸ್‌ಗಳ ಸಂಚಾರ ಎಂದಿನಂತೆ ಇತ್ತು. ಬಿಜೆಪಿಯೇತರ ಪಕ್ಷಗಳು, ರೈತ ಪರ ಸಂಘಟನೆಗಳು ಬೆಳಗ್ಗೆ ನಗರದ ಜ| ತಿಮ್ಮಯ್ಯ ವೃತ್ತದಲ್ಲಿ ಸಮಾವೇಶ ಗೊಂಡು, ಕೃಷಿ ಮಸೂದೆಗೆ ತೀವ್ರ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದವು. ಪೊಲೀಸರು ಹಲವರನ್ನು ಬಂಧಿಸಿ ಅನಂತರ ಬಿಡುಗಡೆ ಮಾಡಿದರು.
ರೈತ ವಿರೋಧಿ ನೀತಿಯನ್ನು ಖಂಡಿಸಿ ವೀರಾಜಪೇಟೆ ಪಟ್ಟಣದಲ್ಲಿ ಮಾಜಿ ಎಂಎಲ್‌ಸಿ ಅರುಣ್ ಮಾಚಯ್ಯ ನೇತೃತ್ವದಲ್ಲಿ ಮೆರವಣಿಗೆ ನಡೆಯಿತು. ಇದೇ ಸಂದರ್ಭ ಬಿಜೆಪಿ ಪ್ರಮುಖರು ಕೂಡ ಕೇಂದ್ರ ಸರಕಾರದ ಪರ ಘೋಷಣೆಗಳನ್ನು ಕೂಗುತ್ತಾ ಬಂದರು. ಪರಿಸ್ಥಿತಿ ಕಾವೇರು ತ್ತಿದ್ದಂತೆ ಪೊಲೀಸರು ಹತೋಟಿಗೆ ತಂದರು.