Advertisement

ಏಶ್ಯ ಮಿಶ್ರ ಡಬಲ್ಸ್‌  ಬ್ಯಾಡ್ಮಿಂಟನ್‌ ಸಿಂಧು, ಸೈನಾ ನೇತೃತ್ವ

03:45 AM Feb 07, 2017 | |

ಹೊಸದಿಲ್ಲಿ: ರಿಯೋ ಒಲಿಂಪಿಕ್ಸ್‌ ಬೆಳ್ಳಿ ಪದಕ ವಿಜೇತೆ ಪಿ.ವಿ. ಸಿಂಧು ಮತ್ತು ಖ್ಯಾತ ಆಟಗಾರ್ತಿ ಸೈನಾ ನೆಹ್ವಾಲ್‌ ವಿಯೆಟ್ನಾಂನಲ್ಲಿ ಫೆ. 14ರಿಂದ 19ರ ವರೆಗೆ ನಡೆಯಲಿರುವ ಏಶ್ಯ ಮಿಶ್ರ ತಂಡ ಬ್ಯಾಡ್ಮಿಂಟನ್‌ ಕೂಟದಲ್ಲಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. 

Advertisement

ಸಿಂಧು ಒಲಿಂಪಿಕ್ಸ್‌ ಬಳಿಕ ಸಯ್ಯದ್‌ ಮೋದಿ ಬ್ಯಾಡ್ಮಿಂಟನ್‌ ಕೂಟದ ಚಾಂಪಿಯನ್‌ ಆಗಿದ್ದರು. ಅಂತೆಯೆ ಸೈನಾ ಮಲೇಶ್ಯ ಮಾಸ್ಟರ್‌ ಬ್ಯಾಡ್ಮಿಂಟನ್‌ನಲ್ಲಿ ಪ್ರಶಸ್ತಿ ಗೆದ್ದಿದ್ದಾರೆ. ಗಾಯದಿಂದ ಚೇತರಿಸಿಕೊಂಡ ಸೈನಾ ಈ ಸಾಧನೆ ಮಾಡಿದ್ದರು. ಇವರ ಜತೆಗೆ ತನ್ವಿ ಲಾಡ್‌, ರಿತುಪರ್ಣಾ ದಾಸ್‌ ಕೂಡ ತಂಡಕ್ಕೆ ಆಯ್ಕೆಯಾಗಿದ್ದಾರೆ. 

ಪುರುಷರ ವಿಭಾಗದಲ್ಲಿ ಸಯ್ಯದ್‌ ಮೋದಿ ಗ್ರ್ಯಾನ್‌ಪ್ರಿ ವಿಜೇತ ಸಮೀರ್‌ ವರ್ಮ, ಸ್ವಿಟ್ಸರ್‌ಲ್ಯಾಂಡ್‌ ಓಪನ್‌ ಪ್ರಶಸ್ತಿ ವಿಜೇತ ಎಚ್‌.ಎಸ್‌. ಪ್ರಣಯ್‌ ಕೂಟದಲ್ಲಿ ಪಾಲ್ಗೊ ಳ್ಳುತ್ತಿದ್ದಾರೆ. ಆದರೆ ಕೆ. ಶ್ರೀಕಾಂತ್‌ ಈ ಪಂದ್ಯಾವಳಿಯಿಂದ ಹಿಂದಕ್ಕೆ  ಸರಿಯಲು ನಿರ್ಧರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next