Advertisement

ಮುಂಬೈಗೆ ಬೇಕಿದೆ ಗೆಲುವಿನ ಜತೆಗೆ ಅದೃಷ್ಟ: ಹೈದರಾಬಾದ್ ತಂಡದಲ್ಲಿ ಹಲವು ಬದಲಾವಣೆ

03:08 PM May 21, 2023 | Team Udayavani |

ಮುಂಬೈ: ಪ್ಲೇ ಆಫ್ ತಲುಪಲು ಒಂದು ಜಯ ಮತ್ತಷ್ಟು ಅದೃಷ್ಟವನ್ನು ನೆಚ್ಚಿಕೊಂಡಿರುವ ಮುಂಬೈ ಇಂಡಿಯನ್ಸ್ ತಂಡವು ಸನ್ ರೈಸರ್ಸ್ ಹೈದರಾಬಾದ್ ಸವಾಲಿಗೆ ಸಿದ್ದವಾಗಿದೆ. ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುವ ಪಂದ್ಯದಲ್ಲಿ ಟಾಸ್ ಗೆದ್ದ ರೋಹಿತ್ ಶರ್ಮಾ ಮೊದಲು ಫೀಲ್ಡಿಂಗ್ ಮಾಡಲು ನಿರ್ಧರಿಸಿದ್ದಾರೆ.

Advertisement

ಮುಂದಿನ ಹಂತಕ್ಕೆ ತಲುಪಲು ಈ ಪಂದ್ಯ ಗೆಲ್ಲವುದು ಮುಂಬೈಗೆ ಅನಿವಾರ್ಯ. ಅಷ್ಟೇ ಅಲ್ಲದೆ ರಾತ್ರಿಯ ಪಂದ್ಯದಲ್ಲಿ ಬೆಂಗಳೂರು ಸೋಲಬೇಕು ಅಥವಾ ಪಂದ್ಯ ರದ್ದಾಗಬೇಕು. ಆಗ ಮಾತ್ರ ಮುಂಬೈ ಪ್ಲೇ ಆಫ್ ತಲುಪಲು ಸಾಧ್ಯ.

ಮುಂಬೈ ತಂಡದಲ್ಲಿ ಬದಲಾವಣೆ ಮಾಡಲಾಗಿದ್ದು, ಹೃತಿಕ್ ಶೌಕೀನ್ ಬದಲು ಕುಮಾರ ಕಾರ್ತಿಕೇಯ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ತಂಡಗಳು

ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ (ನಾ), ಇಶಾನ್ ಕಿಶನ್ (ವಿ.ಕೀ), ಕ್ಯಾಮೆರಾನ್ ಗ್ರೀನ್, ಸೂರ್ಯಕುಮಾರ್ ಯಾದವ್, ಟಿಮ್ ಡೇವಿಡ್, ನೆಹಾಲ್ ವಧೇರಾ, ಕ್ರಿಸ್ ಜೋರ್ಡಾನ್, ಪಿಯೂಷ್ ಚಾವ್ಲಾ, ಜೇಸನ್ ಬೆಹ್ರೆಂಡಾರ್ಫ್, ಕುಮಾರ್ ಕಾರ್ತಿಕೇಯ, ಆಕಾಶ್ ಮಧ್ವಲ್.

Advertisement

ಸನ್‌ರೈಸರ್ಸ್ ಹೈದರಾಬಾದ್: ಮಯಾಂಕ್ ಅಗರ್ವಾಲ್, ವಿವ್ರಾಂತ್ ಶರ್ಮಾ, ಏಡೆನ್ ಮಾರ್ಕ್ರಾಮ್ (ನಾ), ಹೆನ್ರಿಚ್ ಕ್ಲಾಸೆನ್ (ವಿ.ಕೀ), ಹ್ಯಾರಿ ಬ್ರೂಕ್, ನಿತೀಶ್ ರೆಡ್ಡಿ, ಗ್ಲೆನ್ ಫಿಲಿಪ್ಸ್, ಸನ್ವಿರ್ ಸಿಂಗ್, ಮಯಾಂಕ್ ದಾಗರ್, ಭುವನೇಶ್ವರ್ ಕುಮಾರ್, ಉಮ್ರಾನ್ ಮಲಿಕ್

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next