Advertisement

ಮಿವಿ ವಾಚ್‌ ಮಾಡೆಲ್‌ ಇ; ಮೇಡ್‌ ಇನ್‌ ಇಂಡಿಯಾ ಸ್ಮಾರ್ಟ್‌ವಾಚ್‌ ಬಿಡುಗಡೆ

07:32 PM Dec 03, 2022 | Team Udayavani |

ಭಾರತದ್ದೇ ಆದ ಗ್ರಾಹಕ ಟೆಕ್‌ ಬ್ರ್ಯಾಂಡ್‌ ಮಿವಿ ದೇಶದ ಮಾರುಕಟ್ಟೆಗೆ ತನ್ನ ಹೊಸ “ಮಿವಿ ವಾಚ್‌ ಮಾಡೆಲ್‌ ಇ’ಯನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ ವಾಚ್‌ 5 ಬಣ್ಣಗಳಲ್ಲಿ ಲಭ್ಯವಿದ್ದು, ಸೈಕ್ಲಿಂಗ್‌, ಜಾಗಿಂಗ್‌, ಹೈಕಿಂಗ್‌, ಯೋಗಾದಂಥ ಪ್ರೀ-ಇನ್‌ಸ್ಟಾಲ್ಡ್‌ ವಕೌಟ್‌ ಮೋಡ್‌ಗಳನ್ನು ಒಳಗೊಂಡಿದೆ.

Advertisement

1.69 ಇಂಚಿನ ಎಚ್‌ಡಿ ಟಚ್‌ಸ್ಕ್ರೀನ್‌ ಇರುವ ಈ ವಾಚ್‌ ಧೂಳು, ನೀರು ನಿರೋಧಕ ಸಾಮರ್ಥ್ಯ ಹೊಂದಿದ್ದು, ಈಜು ಅಥವಾ ವ್ಯಾಯಾಮದ ವೇಳೆಯೂ ಇದನ್ನು ಧರಿಸಬಹುದು. ಮಹಿಳೆಯರಿಗೆಂದೇ ವಿಶೇಷ ಫೀಚರ್‌ ಇದ್ದು, ಋತುಸ್ರಾವದ ಅವಧಿಯನ್ನು ಟ್ರ್ಯಾಕ್‌ ಮಾಡುವ ವ್ಯವಸ್ಥೆ ಇದೆ.

ಒಮ್ಮೆ ಚಾರ್ಜ್‌ ಮಾಡಿದರೆ, ಬ್ಯಾಟರಿ 5-7 ದಿನ ಬರುತ್ತದೆ. 1.5 ಗಂಟೆಗಳಲ್ಲಿ ಪೂರ್ತಿ ಚಾರ್ಜ್‌ ಆಗುವಂಥ 200 ಎಂಎಎಚ್‌ ಬ್ಯಾಟರಿ ಇದರಲ್ಲಿದೆ. ದರ ಕೇವಲ 1,299 ರೂ. ಮಾತ್ರ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next