Advertisement

“ದ.ಕ. ಜಿಲ್ಲೆಯಲ್ಲಿ ರಾಜಕೀಯವಾಗಿ ಮಹತ್ತರ ಬದಲಾವಣೆ ಕಾಲ ಬಂದಿದೆ: ಮಿಥುನ್‌ ರೈ

08:02 PM Apr 12, 2019 | mahesh |

ಬಂಟ್ವಾಳ: ಕಳೆದ 28 ವರ್ಷ ಗಳಲ್ಲಿ ಬಿಜೆಪಿ ಭದ್ರಕೋಟೆಯಾಗಿದ್ದ ದ.ಕ. ಜಿಲ್ಲೆಯಲ್ಲಿ ರಾಜಕೀಯವಾಗಿ ಮಹತ್ತರ ಬದಲಾವಣೆ ಕಾಲ ಬಂದಿದೆ. ಈ ನಿಟ್ಟಿನಲ್ಲಿ ಯುವಕರು ಒಗ್ಗಟ್ಟಿನಿಂದ ಈ ಚುನಾವಣೆ ಸಂದರ್ಭ ವಿಶ್ರಾಂತಿ ಪಡೆಯದೆ ಕೆಲಸ ಮಾಡಿ ಎಂದು ದ.ಕ. ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಮಿಥುನ್‌ ರೈ ಹೇಳಿದರು.

Advertisement

ಅವರು ಎ. 11ರಂದು ಮಾಜಿ ಸಚಿವ ಬಿ. ರಮಾನಾಥ ರೈ ನೇತೃತ್ವದಲ್ಲಿ ಬಂಟ್ವಾಳ ಬಡ್ಡಕಟ್ಟೆ ಹನುಮಂತ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಬಳಿಕ ಬಂಟ್ವಾಳ ಪೇಟೆಯಲ್ಲಿ ತೆರೆದ ವಾಹನದಲ್ಲಿ ರೋಡ್‌ ಶೋ ಮೂಲಕ ಮತಯಾಚನೆ ನಡೆಸಿ ಬಸ್ತಿಪಡು³ವಿನಲ್ಲಿ ಮಾತನಾಡಿ, ಕಾರ್ಯಕರ್ತರು ಹಾಗೂ ಮತದಾರರು ನನ್ನ ಮೇಲೆ ಇಟ್ಟಿರುವ ವಿಶ್ವಾಸಕ್ಕೆ, ಗೌರವಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಎಲ್ಲರೂ ತಲೆ ಎತ್ತಿ ನಡೆಯುವಂತೆ ದ.ಕ. ಜಿಲ್ಲೆಯನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುತ್ತೇನೆ. ಅದಕ್ಕೆ ಅವಕಾಶ ಮಾಡಿಕೊಡಿ. ಚುನಾವಣೆ ಗೆಲುವೇ ನಮ್ಮ ಗುರಿಯಾಗಬೇಕು. ಚುನಾವಣೆ ಮೂಲಕ ಬದಲಾವಣೆ ಮಂತ್ರ ಪ್ರತಿಯೊಬ್ಬ ಕಾರ್ಯಕರ್ತನ ಬಾಯಲ್ಲಿಯೂ ಬರಬೇಕಾಗಿದೆ ಎಂದು ಕರೆ ನೀಡಿದರು.

ಪರಿವರ್ತನೆ
ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಅಭಿವೃದ್ಧಿಗಾಗಿ ಯುವಕ ಮಿಥುನ್‌ ರೈ ಅವರಿಗೆ ಬೆಂಬಲ ನೀಡಬೇಕು. ದ.ಕ. ಜಿಲ್ಲೆಯನ್ನು ಮಾದರಿ ಜಿಲ್ಲೆಯಾಗಿ ಪರಿವರ್ತನೆ ಮಾಡಲು ನಿಮ್ಮ ಮತ ಕಾಂಗ್ರೆಸ್‌ಗೆ ನೀಡಿ ಎಂದರು.

ಬೆಳಗ್ಗೆ ಸರಪಾಡಿ ವೆಂಕಟರಮಣ ದೇವಸ್ಥಾನ, ಕಕ್ಯಬೀಡು ಶ್ರೀ ಪಂಚದುರ್ಗಾಪರಮೇಶ್ವರೀ ದೇವಸ್ಥಾನ, ಕಕ್ಯಪದವು ಬದ್ರಿಯಾ ಜುಮ್ಮಾ ಮಸೀದಿ, ಕಾವಳಕಟ್ಟೆ ಜಂಕ್ಷನ್‌ ಎನ್‌.ಸಿ. ರೋಡ್‌, ವಗ್ಗ ಕಾರಿಂಜ ಕ್ರಾಸ್‌ ಜಂಕ್ಷನ್‌, ಶ್ರೀ ಕಾರಿಂಜೇಶ್ವರ ದೇವಸ್ಥಾನ, ಪೂಂಜ ಶ್ರೀ ಪಂಚದುರ್ಗಾಪರಮೇಶ್ವರೀ, ಕೆರೆಬಳಿ ಮೈಯುದ್ದೀನ್‌ ಜುಮ್ಮಾ ಮಸೀದಿ, ಸಂಗಬೆಟ್ಟು ಶ್ರೀ ವೀರಭದ್ರ ದೇವಸ್ಥಾನ, ಕಲ್ಕುರಿ ದಾರುಸ್‌ ಸಲಾಮ್‌ ಜಮ್ಮಾ ಮಸೀದಿ, ಸಿದ್ದಕಟ್ಟೆ ಸೈಂಟ್‌ ಪೆಟ್ರಿಕ್‌ ಚರ್ಚ್‌ ಭೇಟಿ, ಮಧ್ಯಾಹ್ನ ಬಳಿಕ ಕರೋಪಾಡಿ ಮಿತ್ತನಡ್ಕ ಪೇಟೆಯಲ್ಲಿ ಮತಯಾಚನೆ, ಕನ್ಯಾನ ಜಂಕ್ಷನ್‌ ಸಾರ್ವಜನಿಕ ಸಭೆ ನಡೆಸಿದರು.

ಪ್ರಚಾರ ಸಭೆಯಲ್ಲಿ ಜಿ.ಪಂ. ಸದಸ್ಯರಾದ ಚಂದ್ರಪ್ರಕಾಶ್‌ ಶೆಟ್ಟಿ, ಬಿ. ಪದ್ಮಶೇಖರ ಜೈನ್‌, ಪ್ರಮುಖರಾದ ಬೇಬಿ ಕುಂದರ್‌, ಸುದೀಪ್‌ ಕುಮಾರ್‌ ಶೆಟ್ಟಿ ಮಾಣಿ, ಮಾಯಿಲಪ್ಪ ಸಾಲ್ಯಾನ್‌, ಸುದರ್ಶನ ಜೈನ್‌, ಅಬ್ಟಾಸ್‌ ಆಲಿ, ವಾಸು ಪೂಜಾರಿ, ಗಂಗಾಧರ ಪೂಜಾರಿ, ಜನಾರ್ದನ ಚೆಂಡ್ತಿಮಾರ್‌, ಬಿ.ಎಚ್‌. ಖಾದರ್‌, ಚಿತ್ತರಂಜನ್‌ ಶೆಟ್ಟಿ, ಜೆ.ಡಿ.ಎಸ್‌. ಪ್ರಮುಖರಾದ ಬಿ. ಮೋಹನ್‌, ಹಾರೂನ್‌ ರಶೀದ್‌, ಪಿ.ಎ. ರಹೀಂ ಮತ್ತಿತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next