ಮಂಗಳೂರು: ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಮಿಥುನ್ ರೈ ಒಟ್ಟು 2,14,57,883 ರೂ. ಮೌಲ್ಯದ ಸ್ಥಿರ ಮತ್ತು ಚರಾಸ್ತಿಯನ್ನು ಹೊಂದಿದ್ದಾರೆ.
ಇದೇ ವೇಳೆ ವಿವಿಧ ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳಲ್ಲಿ ಅವರಿಗೆ 1,48,04,098 ರೂ. ಸಾಲ ಇದೆ.
ಪತ್ನಿಯ ಹೆಸರಿನಲ್ಲಿ 42,27,137 ರೂ. ಚರ ಆಸ್ತಿ ಮಾತ್ರ ಇದೆ.
ಮಿಥುನ್ ಬಳಿ ನಗದು 1,98,400 ರೂ. ಹಾಗೂ ಪತ್ನಿಯ ಬಳಿ 70,000 ರೂ. ನಗದು ಇದೆ ಎಂಬುದಾಗಿ ಸೋಮವಾರ ನಾಮ ಪತ್ರ ಸಲ್ಲಿಕೆ ವೇಳೆ ಸಲ್ಲಿಸಿದ ಅಫಿದಾವಿತ್‌ನಲ್ಲಿ ತಿಳಿಸಲಾಗಿದೆ.
ಮಿಥುನ್ ಬ್ಯಾಂಕ್ ಖಾತೆಯಲ್ಲಿ 21,524 ರೂ., ವಿವಿಧ ಹೂಡಿಕೆಗಳು 80,58,242ರೂ. ಇದ್ದು, ವಿವಿಧ ಸಂಸ್ಥೆಗಳಿಗೆ 29,19,769 ರೂ. ಮುಂಗಡ ನೀಡಿದ್ದಾರೆ. ಮಿಥುನ್ ಹೆಸರಿನಲ್ಲಿ ಒಂದು ಹ್ಯುಂಡೈ ಮತ್ತು ಟೊಯೊಟಾ ಸೇರಿದಂತೆ ಒಟ್ಟು 24,80,920 ರೂ. ಮೌಲ್ಯದ ಎರಡು ಕಾರು ಇದೆ. ಇನ್ನು 9,26,800 ರೂ.ಗಳ ಚಿನ್ನ ಮತ್ತು ಬೆಳ್ಳಿ ಕೂಡ ಇದೆ. ಗುರುಪುರದಲ್ಲಿ 53,69,133 ರೂ. ಮೌಲ್ಯದ ಕೃಷಿಯೇತರ ಭೂಮಿ, ಮಂಗಳೂರಿನಲ್ಲಿ 49 ಲಕ್ಷ ರೂ. ಮೌಲ್ಯದ ವಾಣಿಜ್ಯ ಕಟ್ಟಡ ಇದೆ.