Advertisement

ಬೆಂಗಳೂರು ಆಸ್ಪತ್ರೆಯಿಂದ ಬಿಡುಗಡೆಯಾದ ಮಿಥುನ್ ಚಕ್ರವರ್ತಿ: ಆರೋಗ್ಯ ಕ್ಷೇಮ

09:06 PM May 02, 2022 | Team Udayavani |

ಬೆಂಗಳೂರು : ಇತ್ತೀಚೆಗೆ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಹಿರಿಯ ನಟ ಮಿಥುನ್ ಚಕ್ರವರ್ತಿ ಡಿಸ್ಚಾರ್ಜ್ ಆಗಿದ್ದಾರೆ.

Advertisement

ಚಕ್ರವರ್ತಿ ಅವರು ಆಸ್ಪತ್ರೆಗೆ ಭೇಟಿ ನೀಡಿರುವುದು ವಾಡಿಕೆಯ ತಪಾಸಣೆಯ ಭಾಗವಾಗಿದೆ ಮತ್ತು ಚಿಂತಿಸಬೇಕಾಗಿಲ್ಲ ಎಂದು ಅವರ ವಕ್ತಾರರು ಸೋಮವಾರ ಹೇಳಿದ್ದಾರೆ.

“ಅವರು ವಾಡಿಕೆಯ ತಪಾಸಣೆಗೆ ಹೋಗಿದ್ದರು ಮತ್ತು ಚಿಂತೆ ಮಾಡುವಂತಹದ್ದೂ ಇಲ್ಲ. ಅವರು ಈಗಾಗಲೇ ಮನೆಯಲ್ಲಿದ್ದಾರೆ. ಅವರು ಸಂಪೂರ್ಣವಾಗಿ ಫಿಟ್ ಮತ್ತು ಫೈನ್. ಭಯಪಡಲು ಯಾವುದೇ ಕಾರಣವಿಲ್ಲ ಎಂದು ವಕ್ತಾರರು ಪಿಟಿಐಗೆ ತಿಳಿಸಿದ್ದಾರೆ.

ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಡಾ.ಅನುಪಮ್ ಹಜ್ರಾ ಅವರು “ಬೇಗ ಗುಣಮುಖರಾಗಿರಿ ಮಿಥುನ್ ದಾ” ಎಂದು ಟ್ವೀಟ್ ಮಾಡಿದ ನಂತರ ವೈದ್ಯಕೀಯ ಸೌಲಭ್ಯದಲ್ಲಿದ್ದ 71 ವರ್ಷದ ಚಕ್ರವರ್ತಿ ಅವರ ಚಿತ್ರಗಳು ಶನಿವಾರ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದ್ದವು. ಅಭಿಮಾನಿಗಳಲ್ಲಿ ಆತಂಕಕ್ಕೆ ಕಾರಣವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next