ಮಂಗಳೂರು: ಮೂಡುಬಿದಿರೆಯ ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯು (ಮೈಟ್) ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾ ನಿಲಯವು 2018ರಲ್ಲಿ ನಡೆಸಿದ ಬಿಇ ಪರೀಕ್ಷೆಯಲ್ಲಿ ನಾಲ್ಕು ಉನ್ನತ ರ್‍ಯಾಂಕ್‌ಗಳನ್ನು ಪಡೆಯುವ ಮೂಲಕ ವಿನೂತನ ಸಾಧನೆ ದಾಖಲಿಸಿದೆ.
ಅನ್ನಾರೋಸ್ ಜಾನಿ ಅವರು ಮೆಕೆಟ್ರಾನಿಕ್ಸ್ ಎಂಜಿನಿಯರಿಂಗ್‌ನಲ್ಲಿ 2ನೇ, ಏರೋನಾಟಿಕಲ್‌ನಲ್ಲಿ ಪ್ರಿಯಾಂಕಾ ಎಂ. ಅವರು 2ನೇ, ಸಾರ್ಥಕ್ ವಸಂತ್ ಅವರು ಮೆಕೆಟ್ರಾನಿಕ್ಸ್‌ನಲ್ಲಿ 8ನೇ, ದಿನಕರ್ ಅವರು ಏರೋನಾಟಿಕಲ್‌ನಲ್ಲಿ 10ನೇ ರ್‍ಯಾಂಕ್ ಗಳಿಸಿದ್ದಾರೆ.
ಸ್ಪರ್ಧಾತ್ಮಕ ಕೈಗಾರಿಕಾ ವಲಯದಲ್ಲಿ ಅತ್ಯುನ್ನತ ಸ್ಥಾನಗಳನ್ನು ವಿದ್ಯಾರ್ಥಿಗಳು ಪಡೆಯಲು ವಿಶೇಷವಾದ ಶೈಕ್ಷಣಿಕ ವೃತ್ತಿಪರತೆಯನ್ನು ಮೈಟ್ ಹೊಂದಿದೆ. ಮೈಟ್‌ನ ಸ್ಥಾಪಕ ಸಂಸ್ಥೆ, ರಾಜಲಕ್ಷಿ$¾à ಎಜುಕೇಶನ್ ಟ್ರಸ್ಟ್ ವತಿಯಿಂದ ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಶನ್ಸ್ ಎಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್ ಆ್ಯಂಡ್ ಎಂಜಿನಿಯರಿಂಗ್, ಇನ್ಫರ್ಮೇಶನ್ ಸೈನ್ಸ್ ಆ್ಯಂಡ್ ಎಂಜಿನಿಯರಿಂಗ್, ಮೆಕ್ಯಾನಿಕಲ್, ಏರೋನಾಟಿಕಲ್, ಮೆಕೆಟ್ರಾನಿಕ್, ಸಿವಿಲ್ ಎಂಜಿನಿಯರಿಂಗ್ ಕೋರ್ಸ್ ಒದಗಿಸಲಾಗುತ್ತಿದೆ.
2007ರಲ್ಲಿ ಸ್ಥಾಪನೆಯಾದ ಮೈಟ್ ದ.ಕ. ಜಿಲ್ಲೆಯ ಬಹು ಪ್ರತಿಷ್ಠಿತ ತಾಂತ್ರಿಕ ಶಿಕ್ಷಣ ಸಂಸ್ಥೆಯಾಗಿದೆ. 74 ಎಕರೆಯ ಆಕರ್ಷಕ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳಿಗೆ ಸರ್ವ ಸೌಲಭ್ಯಗಳಿವೆ. ದೇಶ- ವಿದೇಶಗಳ ಪ್ರತಿಷ್ಠೆಯ ವಿ.ವಿ.ಗಳು ಹಾಗೂ ಕೈಗಾರಿಕೋದ್ಯಮಿಗಳೊಂದಿಗೆ ಒಪ್ಪಂದ ಹೊಂದಿದೆ.